ವಿಂಡೀಸ್​ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ವಿರಾಟ್​​ ಕೊಹ್ಲಿ: ಫಸ್ಟ್​​ ಟೆಸ್ಟ್​​ ಆಡೋದು ಡೌಟ್​!

0
196

ಜಮೈಕಾ: ಪ್ರವಾಸಿ ಭಾರತ ತಂಡ ಹಾಗೂ ಆತಿಥೇಯ ವೆಸ್ಟ್​​​​ ವಿಂಡೀಸ್​​ ನಡುವೆ ಆಗಸ್ಟ್​​ 22ರಿಂದ ಟೆಸ್ಟ್​​ ಸರಣಿ ಶುರುವಾಗಲಿದೆ. ಈಗಾಗಲೇ ಟಿ-20 ಹಾಗೂ ಏಕದಿನ ಸರಣಿಯನ್ನು ಕೊಹ್ಲಿ ಪಡೆ ವಶಪಡಿಸಿಕೊಂಡಿದ್ದು, ಟೆಸ್ಟ್​​​​ ಪಂದ್ಯದ ಮೇಲೂ ಕಣ್ಣಿಟ್ಟಿರುವ ಟೀಮ್​ ಇಂಡಿಯಾಗೆ ಹೊಸ ಚಿಂತೆ ಆರಂಭವಾಗಿದೆ. ಅದಕ್ಕೆ ಕಾರಣ ತಂಡದ ಬ್ಯಾಟಿಂಗ್​ ಬೆನ್ನೆಲುಬು, ಕ್ಯಾಪ್ಟನ್​​ ಕೊಹ್ಲಿ ಗಾಯಳಾಗಿರೋದು.

ನಿನ್ನೆ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರನ್​ ಮೆಶಿನ್​​ ವಿರಾಟ್​​ ಕೊಹ್ಲಿ ತನ್ನ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಕೊಹ್ಲಿ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ 27ನೇ ಓವರನಲ್ಲಿ ವಿಂಡೀಸ್​ನ ಕೆಮರ್​ ರೋಚ್​​ ಎಸೆದ ಎಸೆತವೊಂದು ನೇರವಾಗಿ ವಿರಾಟ್​​​ ಅವರ ಕೈ ಬೆರಳಿಗೆ ಬಡಿಯಿತು.ಇದ್ರಿಂದ ತೀವ್ರ ನೋವು ಅನುಭವಿಸಿದ ಕೊಹ್ಲಿ ಅವರಿಗೆ ಫಿಜಿಯೋ ಪ್ರಥಮ ಚಿಕಿತ್ಸೆ ಕೊಡಿಸಿದ್ರು. ಮತ್ತೆ ಬ್ಯಾಟಿಂಗ್​​ ಮಾಡಿದ ಕೊಹ್ಲಿ ನೋವಿನ ನಡುವೆಯೂ ಶತಕ ಬಾರಿಸಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ರು.

  ಇನ್ನು ಒಂದು ವಾರದ ನಂತರ ಆರಂಭಗೊಳ್ಳಲಿರುವ ಟೆಸ್ಟ್​ ಸರಣಿಯಲ್ಲಿ ಕೊಹ್ಲಿ ಆಡ್ತಾರೋ ಇಲ್ಲವೋ ಅನ್ನೋದೆ ಅನುಮಾನವಾಗಿದೆ.ಗಾಯದ ಪ್ರಮಾಣ ಇನ್ನು ತಿಳಿಯದಿರುವುದರಿಂದ ಸ್ಕಾನಿಂಗ್​​ ವರದಿ ಬಂದ ಬಳಿಕ ಈ ಬಗ್ಗೆ ಖಚಿತವಾಗಲಿದೆ.

LEAVE A REPLY

Please enter your comment!
Please enter your name here