ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದಾರೆ. ವಿರಾಟ್ ಬ್ಯಾಟ್ನಿಂದ ಬರೋ ಒಂದೊಂದು ರನ್ ಕೂಡ ದಾಖಲೆ ಪುಸ್ತಕ ಸೇರುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ವಿಶಾಖ ಪಟ್ಟಣದಲ್ಲಿ ನಡೆದ ಎರಡನೇ ಒಡಿಐನಲ್ಲಿ ರನ್ ಮಷಿನ್ ಕೊಹ್ಲಿ 56 ರನ್ ಮಾಡಿದ್ದರೆ ಏಕದಿನ ಕ್ರಿಕೆಟಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಸೌತ್ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಕ್ ಕಾಲಿಸ್ ಅವರನ್ನು ಹಿಂದಿಕ್ಕಿ 7ನೇ ಸ್ಥಾನ ಅಲಂಕರಿಸ್ತಿದ್ರು. ಆದ್ರೆ, ಕೊಹ್ಲಿ ಶೂನ್ಯಕ್ಕೆ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದ್ರು.
ಡಕ್ ಔಟ್ ಆದ್ರು ಕೊಹ್ಲಿ ವಿಶ್ವದಾಖಲೆಯೊಂದಕ್ಕೆ ಪಾಲುದಾರರಾಗಿದ್ದಾರೆ. ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾತ್ರವಲ್ಲದೆ ವೆಸ್ಟ್ ಇಂಡೀಸ್ ಕ್ಯಾಪ್ಟನ್ ಕಿರನ್ ಪೊಲಾರ್ಡ್ ಕೂಡ ಶೂನ್ಯಕ್ಕೆ ಔಟಾದ್ರು. ಹೀಗೆ ಎರಡೂ ಟೀಮ್ಗಳ ಬ್ಯಾಟ್ಸ್ಮನ್ಗಳು ಡಕ್ ಔಟ್ ಆಗಿದ್ದು ವಿಶ್ವದಾಖಲೆ! ಒಡಿಐ ಇತಿಹಾಸದಲ್ಲಿ ಎರಡೂ ತಂಡಗಳ ಶೂನ್ಯಕ್ಕೆ ಔಟಾಗಿದ್ದು ಇದೇ ಮೊದಲು! ಈ ಮೂಲಕ ಕೊಹ್ಲಿ ರನ್ ಮಾಡ್ದೇ ಇದ್ರೂ ಹೊಸ ದಾಖಲೆ ಪಾಲುದಾರರಾದ್ರು.
ಡಕ್ ಔಟ್ ಆದ್ರೂ ಕ್ಯಾಪ್ಟನ್ ಕೊಹ್ಲಿ ವರ್ಲ್ಡ್ ರೆಕಾರ್ಡ್ ಪಾಲುದಾರ!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on