ಬೆಂಗಳೂರು: ಇಂದು ಸಾರಿಗೆ ಸಿಬ್ಬಂಧಿಗಳ ಮುಷ್ಕರದ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಭೆ ಕರೆದಿದ್ದರು. ಸಭೆಯಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ನೀವು ಹೇಳಿದ 9ಬೇಡಿಕೆಗಳಿಗೆ ಭರವಸೆ ಕೋಟ್ಟಿದ್ದೇವೆ. ಆದರೆ ಸಿಬ್ಬಂಧಿಗಳು ಮುಷ್ಕರ ಕೈ ಬಿಡುವ ನೀರಿಕ್ಷೆ ಇದೆ. ಆದರೆ ಕೋಟ್ಟಿರುವ ಭರವಸೆಯನ್ನು ಹೇಗೆ ಈಡೆರಿಸಿವುದು ಕಳೆದ ಮೂರು ದಿನಗಳಿಂದ 23ಕೋಟಿಗೂ ಅಧಿಕ ನಷ್ಟವಾಗೆದೆ. ಆರ್ಥಿಕ ಸಂಕಷ್ಠ ಎದುರಾಗಿದೆ ಎಂದು ಸಭೆಯಲ್ಲಿ ಹೇಳಿದ್ದಾರೆ.
ಇನ್ನೂ ವೇತನ ನೀಡುವುದು ಬಾಕಿ ಇದೆ. ಅದನ್ನು ಬಿಡುಗಡೆ ಮಾಡಬೇಕಾಗಿದೆ. ಸರಕಾರ ಆರ್ಥಿಕ ನೇರವು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕೋಡಿಹಳ್ಳಿ ಚಂದ್ರಶೇಕರ್ ಹಿಂದೆ ಡಿಕೆಶಿ ಕೈವಾಡವಿದೆ. ಅವರ ಸೂಚನೆಯಂತೆ ಕೋಡಿಹಳ್ಳಿ ಚಂದ್ರಶೇಕರ್ ಕೇಳುತ್ತಿದ್ದಾರೆ. ಕೋಡಿಹಳ್ಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಆಗ ಸಿಬ್ಬಂಧಿಗಳು ಸರಿದಾರಿಗೆ ಬರುತ್ತಾರೆ ಎಂದು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.