Home uncategorized ಕೊರೊನಾದ ಬಗ್ಗೆ ಆತಂಕಕಾರಿ‌ ಭವಿಷ್ಯ ನುಡಿದ ಕೋಡಿ ಶ್ರೀ

ಕೊರೊನಾದ ಬಗ್ಗೆ ಆತಂಕಕಾರಿ‌ ಭವಿಷ್ಯ ನುಡಿದ ಕೋಡಿ ಶ್ರೀ

ಹಾಸನ : ಆಶ್ವೀಜ ಮಾಸ, ಕಾರ್ತಿಕ ಮಾಸದಲ್ಲಿ ಕೊರೊನಾ ಮರಣ ಮೃದಂಗ ಬಾರಿಸಲಿದ್ದು, ಹಳ್ಳಿಗಳ ಕಡೆ ಹಬ್ಬರಿಸಲಿದೆ ಕ್ರೂರಿ ವೈರಸ್, ಮುಂದಿನ ಮೂರು ತಿಂಗಳು ಹಳ್ಳಿಗಳಿಗೆ ಕಂಟಕ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ರಾಜೇಂದ್ರ ಸ್ವಾಮಿಜಿ ಭವಿಷ್ಯ ನುಡಿದಿದ್ದಾರೆ. ಹಳ್ಳಿಗಳ ಜನರು ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿದ ಸ್ವಾಮಿಜಿ, ಸ್ಚಚ್ಛತೆ, ಸುರಕ್ಷತೆ, ಅಂತರ ಕಾಪಾಡಿ, ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ, ಇನ್ನೂ ಕೆಲ ತಿಂಗಳು ಕೊರೊನಾ ಅಟ್ಟಹಾಸ ಇರಲಿದೆ ಎಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕೋಡಿ ಮಠದಲ್ಲಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಸ್ಚಚ್ಚತೆ, ಆಚಾರ, ವಿಚಾರ ಕೈಬಿಟ್ಟಿದ್ದಕ್ಕೆ ಮಾಹಾಮಾರಿ ಹೊಡೆತ ಕೊಟ್ಟಿದೆ, ಧರ್ಮದ ಹೆಸರಿನ ಆಚರಣೆಗಳು ರೋಗ ರುಜಿನ ತಡೆಯುತ್ತಿದ್ದವು, ಆಧುನಿಕತೆಯ ಹೆಸರಿನಲ್ಲಿ ಎಲ್ಲವೂ ಮಾಯವಾಗಿವೆ. ಕೊರೊನಾ ಗಂಟಲು ಬೇನೆ ಎಂಬ ಹಳೆಯ ಖಾಯಿಲೆ, ಕೊರೋನಾ ಗಾಳಿಯಲ್ಲಿ ಸಂಚಾರ ಮಾಡೋದು ಕಡಿಮೆ ಎಂದರು.

ಸರ್ಕಾರದ ತೀರ್ಮಾನಗಳು ಕೊರೋನ ಖಾಯಿಲೆ ಹೆಚ್ಚು ಮಾಡಿದೆ, ಮತ್ತೊಂದು ತಿಂಗಳು ಲಾಕ್ ಡೌನ್ ಮುಂದುವರೆಸಿದ್ದರೆ ಕೊರೋನಾ ಕಡಿಮೆಯಾಗುತ್ತಿತ್ತು, ಆದರೆ ಓಪನ್ ಮಾಡಿದ್ದರಿಂದ ವಿಪರೀತವಾಗಿ ನಿಯಂತ್ರಣಕ್ಕೆ ಬಾರದಂತಾಗಿದೆ. ಸರ್ಕಾರ ಆರ್ಥಿಕ ದೃಷ್ಟಿಯಿಂದ ಹೆಂಡದಂಗಡಿ ತೆರೆಸಿತು, ಆದ್ರೆ ಜನರಿಗೆ ಬೇಕಾಗಿದ್ದ ದೇಗುಲ ಮುಚ್ಚಿದಿರಿ, ವಿನಾಶಕಾರಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿ, ಜನರು ನಂಬಿದ್ದ ಧಾರ್ಮಿಕ ಕೇಂದ್ರ ಮುಚ್ಚಿದಿರಿ, ಇದರಿಂದಲೇ ದೇವರ ಅವಕೃಪೆಗೆ ಪಾತ್ರವಾಗುವಂತಾಗಿದೆ, ಸರ್ಕಾರದ ತಪ್ಪು ನಿರ್ಧಾರದಿಂದಲೇ ಕೊರೋನಾ ಹೆಚ್ಚಾಗಿದೆ ಎಂದು ಕೋಡಿ ಶ್ರೀ‌ ಹೇಳಿದರು.

ಜನರು ಸುರಕ್ಷತೆ ಕಾಪಾಡಿದರೆ ಯಾವುದೇ ಔಷದಿ ಇಲ್ಲದೆ ಕೊರೋನಾದಿಂದ‌ ಪಾರಾಗಬಹುದು, ಜನರು ಭಯ ಆತಂಕ‌ಪಡೋ‌ ಅಗತ್ಯ ಇಲ್ಲ ಸರ್ಕಾರದ ಜೊತೆ ಕೈಜೋಡಿಸಿ, ಕೊರೋನಾದಿಂದ ದೇಶದಲ್ಲಿ ಮತ್ತಷ್ಟು ಅಪಾಯದ ಬಗ್ಗೆ ಭವಿಷ್ಯ ನುಡಿದ ಸ್ವಾಮಿಜಿ, ಪ್ರಕೃತಿ ಮೇಲೆ ಮನುಷ್ಯ ಮಾಡಿದ ದಬ್ಬಾಳಿಕೆಯಿಂದ ಪ್ರಕೃತಿ ಮುನಿದಿದೆ ಹಾಗಾಗಿ ಪ್ರಕೃತಿ ಮುನಿದಿದ್ದರಿಂದಲೇ ಕೊರೋನಾ ಬಂದಿದೆ ಎಂದರು.

LEAVE A REPLY

Please enter your comment!
Please enter your name here

- Advertisment -

Most Popular

 RAF ಘಟಕ ಶಂಕುಸ್ಥಾಪನೆ ವೇಳೆ ಕನ್ನಡಕ್ಕೆ ಒತ್ತು ನೀಡಿಲ್ಲ: ಹೆಚ್.ಡಿ.ಕೆ.

ಶಿವಮೊಗ್ಗ: ಶಿವಮೊಗ್ಗದ ಭದ್ರಾವತಿಯಲ್ಲಿ ಆರ್.ಎ.ಎಫ್. ಘಟಕ ಶಂಕುಸ್ಥಾಪನೆ ವಿಚಾರಕ್ಕೆ ಹೆಚ್.ಡಿ.ಕೆ. ಆಕ್ರೋಶ ವ್ಯಕಪಡಿಸಿದ್ದಾರೆ. ಶಂಕುಸ್ಥಾಪನೆ ವೇಳೆ ಫಲಕಗಳನ್ನು ಕನ್ನಡದಲ್ಲಿ ಹಾಕಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಹೆಚ್.ಡಿ.ಕೆ.,...

‘ಕೇಂದ್ರ ಗೃಹ ಸಚಿವರ ಆಗಮನಕ್ಕೆ ರೈತರ ವಿರೋಧ’

ಬೆಳಗಾವಿ: ಇಂದು ಬೆಳಗಾವಿಯಲ್ಲಿ ಬಿಜೆಪಿ ಸಮಾವೇಶಕ್ಕೆ ಅಮಿತ್ ಶಾ ಆಗಮನ ಹಿನ್ನಲೆಯಲ್ಲಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ. ಕೇಂದ್ರದ ಹೊಸ ಕೃಷಿ ಕಾಯ್ದೆಗೆ...

ಕರೋನಾ ಲಸಿಕೆ ಬಂದಿರುವುದು ಸಂತೋಷ : ಯು.ಟಿ.ಖಾದರ್

ಬೆಂಗಳೂರು: ಕೊರೋನಾ ಲಸಿಕೆ ವಿತರಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಮೊದಲು ಗ್ರೂಪ್ ಡಿ ನೌಕರರ ಮೇಲೆ ಯಾಕೆ ಪ್ರಯೋಗ ಮಾಡಬೇಕು....

‘ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆ’

ಕಲಬುರಗಿ: ಕಲಬುರಗಿಯಲ್ಲಿ ನಗರದ ಜಿಮ್ಸ್ ಕಾಲೇಜಿನಲ್ಲಿ ಸಂಸದ ಉಮೇಶ್ ಜಾಧವ್ ಕೊವಿಡ್ ವ್ಯಾಕ್ಸಿನ್ ಗೆ ಚಾಲನೆ ನೀಡಿದರು. ಜಿಲ್ಲೆಯ 8 ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಗೆ ಚಾಲನೆ ನೀಡಲಾಯಿತು. ಒಂದು ಕೇಂದ್ರದಲ್ಲಿ 100...

Recent Comments