Saturday, May 28, 2022
Powertv Logo
Homeದೇಶ350 ಪ್ಲಾಟ್​ಗಳಿದ್ದ ಕೇರಳದ ಅನಧಿಕೃತ ಕಟ್ಟಡ ನೆಲಸಮ!

350 ಪ್ಲಾಟ್​ಗಳಿದ್ದ ಕೇರಳದ ಅನಧಿಕೃತ ಕಟ್ಟಡ ನೆಲಸಮ!

ಕೇರಳ: ಕೊಚ್ಚಿಯಲ್ಲಿ ಎರಡು ಗಗನಚುಂಬಿ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸ್ಪೋಟಕ ಬಳಸಿ ನೆಲಸಮ ಮಾಡಲಾಗಿದೆ.

ಹೋಲಿಫೈಥ್‌ H2O ಮತ್ತು ಆಲ್ಫಾ ಸೆರಿನ್‌ ಟ್ವಿನ್‌ ಟವರ್‌ಗಳ 350 ಪ್ಲಾಟ್‌ಗಳಿದ್ದ ಬೃಹತ್ ಅಪಾರ್ಟ್‌ಮೆಂಟ್​ಗಳನ್ನು 800 ಕೆಜಿ ಸ್ಫೋಟಕ ಬಳಸಿ ನೆಲಸಮ ಮಾಡಲಾಗಿದ್ದು, ಈ ಕಟ್ಟಡಗಳನ್ನು ಕರಾವಳಿಯ ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಮಿಸಲಾಗಿತ್ತು. ಅಲ್ಲದೇ ಭಾರತದ ಪರಿಸರ ಸಂರಕ್ಷಣಾ ಕಾಯ್ದೆಯಡಿ ಗುರುತಿಸುವ ಪ್ರದೇಶದಲ್ಲಿ ಮಾನವನ ವಾಸಕ್ಕೆ ಅವಕಾಶವೂ ಇಲ್ಲ. ಆದ್ದರಿಂದ ನಿಯಮ ಉಲ್ಲಂಘಿಸಿ ಕಟ್ಟಡವನ್ನು ಕಟ್ಟಿದ್ದಾರೆ  ಅನ್ನುವ ಆರೋಪದ ಮೇರೆಗೆ ಸುಪ್ರೀಂಕೋರ್ಟ್ ಈ ಹಿಂದೆಯೇ ಕಟ್ಟಡಗಳನ್ನು ಧ್ವಂಸಗೊಳಿಸುವಂತೆ ಆದೇಶ  ನೀಡಿತ್ತು. ಆದರೆ ಸುಪ್ರೀಂಕೋರ್ಟ್ ಆದೇಶ ನೀಡಿದ ನಾಲ್ಕು ತಿಂಗಳ ಬಳಿಕ ಅಪಾರ್ಟ್​ಮೆಂಟ್​ಗಳನ್ನು ಧ್ವಂಸ ಮಾಡಿದ್ದಾರೆ.

ಇದೀಗ ಮರಡು ಪ್ರದೇಶದ ಸುತ್ತಮುತ್ತ 144 ಸೆಕ್ಷನ್ ಜಾರಿಯಲ್ಲಿದ್ದು, 2 ದಿನಗಳ ಕಾಲ ಡೆಮಾಲಿಷನ್‌ ಡ್ರೈವ್‌ ನಡೆಯಲಿದೆ. ಈಗಾಗಲೇ ಎರಡು ಅಪಾರ್ಟ್​ಮೆಂಟ್​ಗಳನ್ನು ನೆಲಸಮ ಮಾಡಿದ್ದು, ಇನ್ನೂ ಎರಡು ಅಪಾರ್ಟ್​ಮೆಂಟ್​ಗಳನ್ನು ಸರ್ಕಾರ ಧ್ವಂಸ ಮಾಡಲಿದೆ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments