100 ಗಿಟಾರ್​ಗಳಲ್ಲಿ ರಾಷ್ಟ್ರಗೀತೆ ನುಡಿಸಿ ವರ್ಲ್ಡ್ ರೆಕಾರ್ಡ್ ಮಾಡಿದ ವಿದ್ಯಾರ್ಥಿಗಳು..!

0
158

ಬೆಳಗಾವಿ : ಏಕಕಾಲದಲ್ಲಿ 100 ಗಿಟಾರ್​ಗಳಲ್ಲಿ ರಾಷ್ಟ್ರಗೀತೆ ನುಡಿಸುವ ಮೂಲಕ ಬೆಳಗಾವಿಯ ಕೆಎಲ್ಇ ಇಂಟರ್​ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಕುವೆಂಪುನಗರದಲ್ಲಿನ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಲ್​ಇ ಶಾಲೆಯ 7ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ನೂರು ಗಿಟಾರ್​ಗಳಲ್ಲಿ ಏಕಕಾಲದಲ್ಲಿ ರಾಷ್ಟ್ರಗೀತೆ ನುಡಿಸಿ ‘ಇಂಡಿಯಾ ವರ್ಲ್ಡ್​ ರೆಕಾರ್ಡ್ ಪುಸ್ತಕ’ದಲ್ಲಿ ನೂತನ ದಾಖಲೆಯನ್ನು ದಾಖಲಿಸಿದ್ದಾರೆ.

ಸಂಗೀತ ಕಲಾವಿದ ವಿಶಾಲ್​ ಸಿಂಗ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. 

LEAVE A REPLY

Please enter your comment!
Please enter your name here