ಮಾನವೀಯತೆ ಮೆರೆದ ಕನ್ನಡಿಗ ಕೆ.ಎಲ್​ ರಾಹುಲ್​

0
281

ಟೀಮ್​ ಇಂಡಿಯಾ ಪ್ಲೇಯರ್​, ಕನ್ನಡಿಗ ಕೆ.ಎಲ್ ರಾಹುಲ್ ಭಾರತದ ಮಾಜಿ ಕ್ರಿಕೆಟಿಗರೊಬ್ಬರ ಕುಟುಂಬದ ನೆರವಿಗೆ ನಿಂತು ಮಾನವೀಯತೆ ಮೆರೆದಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಜೇಕಬ್ ಮಾರ್ಟಿನ್ ಅವರು ಅಪಘಾತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿದ್ದು, ಅವರ ಫ್ಯಾಮಿಲಿ ಇದೀಗ ಸಂಕಷ್ಟದಲ್ಲಿದೆ. ಇದನ್ನು ತಿಳಿದ 26 ವರ್ಷದ ಕ್ರಿಕೆಟಿಗ ಕೆ.ಎಲ್​ ರಾಹುಲ್ ಮನಸ್ಸು ಕರಗಿದೆ. ಮಾನವೀಯತೆ ಮೆರೆದಿರುವ ರಾಹುಲ್ ಜೇಕಬ್ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ.
ತಾನು ಸಹಾಯ ಮಾಡಿದ್ದು ಯಾರಿಗೂ ಹೇಳಬಾರದು ಎಂದು ರಾಹುಲ್ ಜೇಕಬ್ ಅವರ ಕುಟುಂಬಕ್ಕೆ ಮನವಿ ಮಾಡಿದ್ದರಂತೆ. ಆದರೆ, ರಾಹುಲ್ ಅವರು ಮಾಡಿರೋ ಸಹಾಯವನ್ನು ಹೇಳದಿರಲು ಜೇಕಬ್ ಫ್ಯಾಮಿಲಿಯ ಮನಸ್ಸು ಒಪ್ಪಿಲ್ಲ. ರಾಹುಲ್ ತಮ್ಮ ಕುಟುಂಬಕ್ಕೆ ಸಹಾಯ ಮಾಡಿರೋದನ್ನು ಹೇಳಿಕೊಂಡಿದ್ದಾರೆ.ಇನ್ನು ರಾಹುಲ್ ಕೂಡ ನಮ್ಮ ಕುಟುಂಬದ ಸದಸ್ಯರು ಅಂತ ಜೇಕಬ್ ಪತ್ನಿ ಹೇಳಿದ್ದಾರೆ. ಆದರೆ, ರಾಹುಲ್ ಎಷ್ಟು ಹಣ ನೀಡಿದ್ದಾರೆ ಅನ್ನೋದು ಇನ್ನೂ ಗೊತ್ತಾಗಿಲ್ಲ.
ಜೇಕಬ್ ಅವರು ಹುಟ್ಟಿದ್ದು 1972ರ ಮೇ 11ರಂದು, ಬರೋಡದಲ್ಲಿ. ರೈಟ್​ ಹ್ಯಾಂಡ್​ ಬ್ಯಾಟ್ಸ್​ಮನ್ ಆಗಿದ್ದ ಜೇಕಬ್ ಮಾರ್ಟಿನ್​ ಅವರು 1999ರಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದರು. ಸೌರವ್ ಗಂಗೂಲಿ ಅವರ ಕ್ಯಾಪ್ಟೆನ್ಸಿಯಲ್ಲಿ 5 ಮತ್ತು ಸಚಿನ್ ತೆಂಡೂಲ್ಕರ್ ಅವರ ನಾಯಕತ್ವದಲ್ಲಿ 5 ಮ್ಯಾಚ್​ಗಳನ್ನಾಡಿದ್ದರು. ಒಟ್ಟು 10 ಒಡಿಐನಿಂದ 22.57ರ ಸರಾಸರಿಯಲ್ಲಿ 158ರನ್ ಗಳಿಸಿದ್ದಾರೆ.
ಇನ್ನು ಇದೀಗ ಜೇಕಬ್ ಕುಟುಂಬಕ್ಕೆ ಕೆ.ಎಲ್ ರಾಹುಲ್ ಮಾತ್ರವಲ್ಲದೆ ಮಾಜಿ ಕ್ರಿಕೆಟಿಗರಾದ ಸೌರವ್​ ಗಂಗೂಲಿ​​​, ಸಚಿನ್ ತೆಂಡೂಲ್ಕರ್, ಟೀಮ್ ಇಂಡಿಯಾದ ಕೋಚ್ ರವಿಶಾಸ್ತ್ರಿ, ಯುವ ಆಟಗಾರ ಕೃನಾಲ್ ಪಾಂಡ್ಯ ಸೇರಿದಂತೆ ಹಲವರು ಸಹಾಯ ಮಾಡಿದ್ದಾರೆ.

LEAVE A REPLY

Please enter your comment!
Please enter your name here