ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಮುಂಬರುವ ಟಿ20 ವರ್ಲ್ಡ್ಕಪ್ಗೆ ಭರ್ಜರಿಯಾಗಿ ರೆಡಿಯಾಗ್ತಿದೆ. ಮುಖ್ಯವಾಗಿ ಕನ್ನಡಿಗ ಕೆ.ಎಲ್ ರಾಹುಲ್ ಅಂತೂ ತಂಡದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲೋ ಭರವಸೆ ಮೂಡಿಸಿದ್ದಾರೆ. ಸದ್ಯ ರಾಹುಲ್ ಅವರನ್ನು ಅಲುಗಾಡಿಸಲು ಸಾಧ್ಯವಿಲ್ಲ ಬಿಡಿ. ಯಾಕಂದ್ರೆ ಓಪನಿಂಗ್ ಇರಲಿ, ಒನ್ಡೌನ್ ಇರಲಿ, ಮಿಡಲ್ ಆರ್ಡರ್ ಇರಲಿ ಯಾವ್ದೇ ಕ್ರಮಾಂಕದಲ್ಲೂ ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸ ಬಲ್ಲ ತಾಕತ್ತು ಹೊಂದಿದ್ದಾರೆ. ಈಗಾಗಲೇ ತಾನು ತಂಡಕ್ಕೆ ಅದೆಂಥಾ ಬ್ಯಾಟಿಂಗ್ ಶಕ್ತಿ ಅಂತ ತೋರಿಸಿಕೊಟ್ಟಿದ್ದಾರೆ. ಇದೀಗ ಹೆಚ್ಚುವರಿಯಾಗಿ ಸಿಕ್ಕ ವಿಕೆಟ್ ಕೀಪಿಂಗ್ ಹೊಣೆಯನ್ನೂ ಸೂಪರ್ ಆಗಿ ನಿಭಾಯಿಸುತ್ತಿದ್ದಾರೆ.
ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರೋ ಟಿ20 ಸರಣಿಯಲ್ಲಿ ಸತತ ಎರಡೂ ಮ್ಯಾಚ್ಗಳಲ್ಲೂ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಟೀಮ್ ಇಂಡಿಯಾದ ಜಯದ ಶಕ್ತಿಯಾಗಿದ್ದಾರೆ. ಮೊದಲ ಮ್ಯಾಚ್ನಲ್ಲಿ ಅಗತ್ಯಕ್ಕೆ ತಕ್ಕಂತೆ ವೇಗದ ಬ್ಯಾಟಿಂಗ್, ಎರಡನೇ ಮ್ಯಾಚಲ್ಲಿ ಗಟ್ಟಿಯಾಗಿ ಕ್ರೀಸ್ನಲ್ಲಿ ಬೇರೂರಿ ತಾಳ್ಮೆಯ ಆಟ.. ಎರಡೂ ಮ್ಯಾಚಲ್ಲೂ ಅದ್ಭುತ ಹಾಫ್ ಸೆಂಚುರಿ.
ಅಷ್ಟೇ ಅಲ್ಲ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಆಸೀಸ್ ವಿರುದ್ಧದ ಒಡಿಐನಿಂದ ಹೊತ್ತ ವಿಕೆಟ್ ಕೀಪಿಂಗ್ ಹೊಣೆಗಾರಿಕೆಯನ್ನು ನ್ಯೂಜಿಲೆಂಡ್ ಟೂರಲ್ಲೂ ಮುಂದುವರೆಸಿದ್ದಾರೆ. ಟೀಮ್ ಇಂಡಿಯಾಕ್ಕೆ ಅಗತ್ಯವಿದ್ದಲ್ಲಿ ಬ್ಯಾಟಿಂಗ್ ಜೊತೆ ವಿಕೆಟ್ ಕೀಪರ್ ಆಗಿಯೂ ಬಿಂದಾಸ್ ಪರ್ಫಾರ್ಮೆನ್ಸ್ ನೀಡ್ತೀನಿ ಅನ್ನೋದನ್ನು ಸಾರಿದ್ದಾರೆ. ಒಂದ್ ಲೆಕ್ಕದಲ್ಲಿ ರಾಹುಲ್ ಕೀಪಿಂಗ್ ಪವರ್ ಪಂತ್ ಕಮ್ಬ್ಯಾಕ್ಗೆ ತಲೆನೋವು ಅಂದ್ರೂ ತಪ್ಪಲ್ಲ.
ಹೀಗೆ ಅದ್ಭುತ ಪ್ರದರ್ಶನ ನೀಡ್ತಿರೋ ರಾಹುಲ್ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹಾಗೂ ಅವರ ಸ್ಥಾನಕ್ಕೆ ಕೀಪರ್ ಆಗಿ ತಂಡ ಕೂಡಿ ಕೊಂಡಿರೋ ಯುವ ಆಟಗಾರ ರಿಷಭ್ ಪಂತ್ ಕೂಡ ಮಾಡದ ಸಾಧನೆಯನ್ನು ಮಾಡಿದ್ದಾರೆ. ಸತತ ಎರಡು ಟಿ20 ಮ್ಯಾಚಲ್ಲಿ ಎರಡು ಅರ್ಧಶತಕ ಸಿಡಿಸಿರುವ ಭಾರತದ ಮೊದಲ ವಿಕೆಟ್ ಕೀಪರ್ ಅನ್ನೋ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಟಿ20 ಇತಿಹಾಸದಲ್ಲಿ ಟೀಮ್ ಇಂಡಿಯಾ ಪರ ಧೋನಿ ಇದುವರೆಗೆ ಬ್ಯಾಕ್ ಟು ಬ್ಯಾಕ್ ಎರಡು ಹಾಫ್ ಸೆಂಚುರಿ ಸಿಡಿಸಿಲ್ಲ. ಪಂತ್ ಕೂಡ ಹೀಗೆ ಮಿಂಚಿಲ್ಲ. ರಾಹುಲ್ ವಿಕೆಟ್ ಕೀಪರ್ ಆದ ಆರಂಭದಲ್ಲೇ ವಿಶೇಷ ದಾಖಲೆ ಮಾಡಿರೋದು ಗಮನಾರ್ಹ.