Home ರಾಜ್ಯ ಕಿರಿಕ್ ಪಾರ್ಟಿಗೆ ಕಿರಿಕ್ ಆದ ಹಾಡು..!

ಕಿರಿಕ್ ಪಾರ್ಟಿಗೆ ಕಿರಿಕ್ ಆದ ಹಾಡು..!

ಬೆಂಗಳೂರು: ಸೂಪರ್ ಹಿಟ್ ಆಗಿದ್ದ ಕಿರಿಕ್ ಪಾರ್ಟಿ ಚಿತ್ರಕ್ಕೆ ಈಗ ಸಂಕಷ್ಟ ಎದುರಾಗಿದೆ. ಕಿರಿಕ್ ಪಾರ್ಟಿ ಚಿತ್ರ ತಂಡದ ವಿರುದ್ದ ಜಾಮೀನು ರಹಿತವಾದ ವಾರೆಂಟ್ ಜಾರಿಯಾಗಿದೆ.

 ಅನುಮತಿ ಪಡೆಯದೆ ಅಕ್ರಮವಾಗಿ ಲಹರಿ ಸಂಸ್ಥೆಯ ಹಾಡುಗಳನ್ನ ಸಿನಿಮಾದಲ್ಲಿ ಬಳಸಿದ ಮೇರೆಗೆ,ಬೆಂಗಳೂರಿನ 9ನೇ ಎಸಿಎಂಎಂ ಕೋರ್ಟ್ ನಿಂದ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕ್ ನಾಥ್ ಗೆ ಜಾಮೀನು ರಹಿತವಾದ  ವಾರೆಂಟ್ ಜಾರಿಯಾಗಿದೆ.

  ಲಹರಿ ಸಂಸ್ಥೆ ಕಾಪಿ ರೈಟ್ಸ್ ಆಕ್ಟ್ 63ಎ ಮತ್ತು 63ಬಿ ಅನುಸಾರ ಚಿತ್ರತಂಡದ ವಿರುದ್ದ  ಲಹರಿ ಸಂಸ್ಥೆ ಕ್ರಮಿನಲ್ ಹಾಗೂ ಸಿವಿಲ್ ಪ್ರಕರಣ ಈ ಹಿಂದೆ ದಾಖಲಿಸಿತ್ತು. ನ್ಯಾಯಲಯದ ಮುಂದೆ ವಾದಗಳನ್ನ ಮಂಡಿಸಲು ಕೋರ್ಟ್ ಚಿತ್ರತಂಡಕ್ಕೆ ಸೂಚನೆ ನೀಡಿತ್ತು.

2019 ಇಸವಿ ಸೆಪ್ಟಂಬರ್ 28 ರಂದು ಈ ಕೇಸ್ ದಾಖಲಾಗಿದ್ದು, ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದೆಂದು  ಲಹರಿ ರೆಕಾರ್ಡಿಂಗ್ಸ್ ಅರ್ಜಿಯಲ್ಲಿ ಕೋರಿದ್ದರು. ಆದರು ಹೇಗೋ ಇದರಿಂದ ತಪ್ಪಸಿಕೊಂಡು ಚಿತ್ರತಂಡ ಸಿನಿಮಾ ರಿಲೀಸ್ ಮಾಡಿತ್ತು. ಆದರೆ ಎಸಿಎಂಎಂ ಕೋರ್ಟ್ ನಲ್ಲಿ ಕ್ರಿಮಿನಲ್ ಕೇಸ್ ಮುಂದುವರೆದಿದ್ದು, ನೋಟಿಸ್ ನೀಡಿದರೂ ಸಹ ಚಿತ್ರತಂಡ ಕೋರ್ಟ್ ಗೆ ಹಾಜರಾಗಿಲ್ಲ.

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಅಜನೀಶ್ ಲೋಕನಾಥ್ ಕೋರ್ಟ್ ಗೆ ಹಾಜರಾಗಿಲ್ಲ. ಮೇ 27ಕ್ಕೆ ಕೋರ್ಟ್ ಗೆ ಹಾಜರಾಗಬೇಕೆಂದು ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದ್ದು, ಈ ಬಾರಿ ಇವರನ್ನು ಬಂಧಿಸಿ ಕರೆದುಕೊಂಡು ಬನ್ನಿ ಎಂದು ಕೋರ್ಟ್ ಖಡಕ್ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here

- Advertisment -

Most Popular

ತನಗೆ ಪಾಸಿಟಿವ್ ಬಂದಿದೆ ಎಂದು ಬೆದರಿದ ವ್ಯಕ್ತಿ ಆಸ್ಪತ್ರೆಯಿಂದ ಪರಾರಿ..!  

ಶಿವಮೊಗ್ಗ: ತನಗೆ ಪಾಸಿಟಿವ್ ಬಂದಿದೆ ಎಂದು ಹೆದರಿ, ಸೋಂಕಿತ ವ್ಯಕ್ತಿಯೊಬ್ಬ ಭತ್ತದ ಗದ್ದೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಘಟನೆ ಇಂದು ಶಿವಮೊಗ್ಗದಲ್ಲಿ ನಡೆದಿದೆ.  ಶಿವಮೊಗ್ಗದ ಎನ್.ಹೆಚ್. ಆಸ್ಪತ್ರೆ ಆವರಣದಲ್ಲಿಯೇ ಈ ಅಪರೂಪದ ಘಟನೆ ನಡೆದಿದ್ದು, ಬೇರೆ ಯಾವುದೋ...

‘ಇಂದು ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಧಿಕಾರ ಸ್ವೀಕಾರ’

ತಮಿಳುನಾಡು: ಅನುಭವಿಗಳಲ್ಲಿ ಡಿಎಂಕೆ ಪ್ರಧಾನ ಕಾರ್ಯದರ್ಶಿ ದೊರೆ ಮುರುಗನ್ ಅವರಿಗೆ ಜಲಸಂಪನ್ಮೂಲ, ಕೆ.ಎನ್.ನೆಹರೂ ಅವರಿಗೆ ನಗರಾಡಳಿತ, ಐ. ಪೆರಿಯಾಸ್ವಾಮಿ ಅವರಿಗೆ ಸಹಕಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಹೊಸಬರಿಗೂ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಮಾಜಿ...

ಕಲಬುರಗಿಯಲ್ಲಿ ಕೊವಿಡ್ ರೋಗಿಗಳಿಗೆ ಫ್ರೀ ಆಟೋ ಸರ್ವಿಸ್..!

ಕಲಬುರಗಿ : ಕೊವಿಡ್-19 ಸೊಂಕಿತರನ್ನ ಆಸ್ಪತ್ರೆಗೆ ಕರೆದ್ಯೋಯಲು ಸಾವಿರಾರು ರೂಪಾಯಿ ಸುಲಿಗೆ ಮಾಡುತ್ತಿರುವ ಬೆನ್ನಲ್ಲೆ, ಕಲಬುರಗಿ ನಗರದಲ್ಲಿ ಆಟೋ ಚಾಲಕನೋರ್ವ ಮಾನವೀಯತೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೊರೋನಾ ಸಂದರ್ಭದಲ್ಲಿ ಸೇರಿದಂತೆ ಯಾವುದೇ ತುರ್ತು ವೈದ್ಯಕೀಯ ಸಂದರ್ಭದಲ್ಲಿ ...

ಈ ವ್ಯಕ್ತಿ ಅಧಿಕಾರಿಗಳ ಮುಂದೆ ತಲೆ ಕೆಳಗೆ ಮಾಡಿ ನಿಂತಿದ್ದು ಯಾಕೆ ಗೊತ್ತಾ?

ಶಿವಮೊಗ್ಗ: ಒಂದು ಕಡೆ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.  ಮತ್ತೊಂದು ಕಡೆ ಮಾಸ್ಕ್ ಸ್ಯಾನಿಟೈಸರ್ ಬಳಕೆ ಕೂಡ ಕಡ್ಡಾಯ ಮಾಡಲಾಗಿದೆ.  ಆದರೆ ಇಲ್ಲೊಬ್ಬರು ಕೊರೋನಾನೆ ಇಲ್ಲ.  ಆರೋಗ್ಯವಂತರು ಮಾಸ್ಕ್ ಹಾಕಬೇಕೇಂದೇನೂ...

Recent Comments