ಬೆಂಗಳೂರು: ಕರ್ನಾಟದಲ್ಲಿ ಕಿರಿಕ್ ಕೀರ್ತಿ ಯಾರಿಗೆ ಗೊತ್ತಿಲ್ಲ ಹೇಳಿ? ತನ್ನ ಮಾತುಗಳಿಂದಲೇ ಕಿರಿಕ್ ಬಿರುದು ಗಳಿಸಿಕೊಂಡಿರುವ ಕಿರಿಕ್ ಕೀರ್ತಿ ಇದೀಗ ಪಬ್ಬೊಂದರಲ್ಲಿ ನಿಜವಾಗಿಯೂ ಕಿರಿಕ್ ಮಾಡಿಕೊಂಡ್ಡಿದ್ದಾನೆ. ಏನಪ್ಪ ಅದು ಕಿರಿಕ್ ಕೀರ್ತಿಯ ಕಿರಿಕ್ ಅಂತ ಕೇಳಿದ್ರೆ, ಇದು ಕಿರಿಕ್ ಕೀರ್ತಿ ತಾನಾಗೆ ಮಾಡಿಕೊಂಡ ಕಿರಿಕ್ ಅನ್ನೋದು ಗೊತ್ತಾಗುತ್ತೆ. ಪಬ್ನಲ್ಲಿ ಕಿರಿಕ್ ಆದ ವೇಳೆ ಕೀರ್ತಿ ತಲೆಯ ಮೇಲೆ ಅಪರಿಚಿತನೊಬ್ಬ ಬೀಯರ್ ಬಾಟಲ್ನಿಂದ ಹಲ್ಲೆ ನಡೆಸಿದ್ದಾನೆ. ಯಾಕೆ, ಏನು, ಎತ್ತ ಬನ್ನಿ ಹೇಳ್ತೀವಿ.
ಕಿರಿಕ್ ಕೀರ್ತಿ ಈಗ ಕರ್ನಾಟಕದಲ್ಲಿ ಒಬ್ಬ ಸೆಲೆಬ್ರೆಟಿ. ಇವನು ಹ್ಯಾಮರ್ಡ್ ಪಬ್ನಲ್ಲಿದ್ದಾಗ ಪಕ್ಕದ ಟೇಬಲ್ಲಿನ ವ್ಯಕ್ತಿಯೊಬ್ಬ ಕೀರ್ತಿಯ ಫೋಟೊ ಹೊಡೆದುಕೊಂಡಿದ್ದಾನೆ. ಈ ವ್ಯಕ್ತಿ ಕಿರಿಕ್ ಕೀರ್ತಿಯ ಫ್ಯಾನ್. ಕೀರ್ತಿಯ ಮೇಲಿನ ಅಭಿಮಾನದಿಂದ ಫೋಟೊ ತೆಗೆದುಕೊಂಡಿದ್ದ. ಯಾಕೊ ಕಿರಿಕ್ ಮಾಡುವ ಮೂಡಿನಲ್ಲಿದ್ದಂತೆ ತೋರುವ ಕೀರ್ತಿಗೆ ಅವನು ಫೋಟೊ ಹೊಡೆದುಕೊಂಡಿದ್ದು ಇಷ್ಟವಾಗಲಿಲ್ಲ. ನನ್ನ ಕೇಳದೆ ಫೋಟೊ ಯಾಕೆ ತೆಗೆದುಕೊಂಡೆ ಅಂತ ಅವನ ಮೇಲೆ ಸಖತ್ ಕಿರಿಕ್ ಮಾಡಿದ ಕೀರ್ತಿ. ಆ ವ್ಯಕ್ತಿ ನಂದು ತಪ್ಪಾಯಿತು ಎಂದು ಕ್ಷಮೆ ಕೇಳಿದರೂ ಸುಮ್ಮನಾಗಲಿಲ್ಲ ಕೀರ್ತಿ. ಇದರಿಂದ ಸಹನೆ ಕಳೆದುಕೊಂಡ ವ್ಯಕ್ತಿ ತಾನು ಕುಡಿಯುತ್ತಿದ್ದ ಬಿಯರ್ ಬಾಟಲ್ನಿಂದಲೇ ಕೀರ್ತಿಯ ಮೇಲೆ ಹಲ್ಲೆ ನಡೆಸಿ, ಅವನ ತಲೆಯ ಮೇಲೆ ಬಾಟಲ್ ಒಡೆದಿದ್ದಾನೆ.
ಸೆಕ್ಷನ್ 324ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಇದೀಗ ಹಲ್ಲೆ ನಡೆಸಿದ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
zithromax 250mg
zithromax generics
1breeding