ನಟ-ನಟಿಯರು ಸಿನಿಮಾದ ಆದಾಯ ಒಂದನ್ನೇ ನಂಬಿಕೊಂಡಿಲ್ಲ..ನಾನಾ ರೀತಿಯ ಜಾಹೀರಾತುಗಳನ್ನು
ಒಪ್ಪಿಕೊಳ್ಳುವ ಮೂಲಕ ಸಾಕಷ್ಟು ದುಡ್ಡು ಮಾಡುತ್ತಾರೆ. ಆದರೆ, ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಸಿಕ್ಕಸಿಕ್ಕ ಜಾಹೀರಾತುಗಳನ್ನು ಒಪ್ಪಿಕೊಂಡರೆ ಟ್ರೋಲ್ ಆಗೋದು ಪಕ್ಕಾ.
ಈಗ ನಟಿ ರಶ್ಮಿಕಾಮಂದಣ್ಣ ಅದೇ ಸರದಿಗೆ ಸೇರಿದ್ದಾರೆ. ಅವರು ಮದ್ಯದ ಕಂಪನಿ ಕಿಂಗ್ ಫಿಶರ್ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಫ್ಯಾನ್ಸ್ ಸಿಟ್ಟಾಗಿದ್ದಾರೆ. ಸೆಲೆಬ್ರಿಟಿಗಳನ್ನು ಸಾಕಷ್ಟು ಮಂದಿ ಮಾದರಿಯಾಗಿ ತೆಗೆದುಕೊಳ್ಳುತ್ತಾರೆ. ಅವರು ಬಳಸುವ ಕಾಸ್ಮೆಟಿಕ್ಗಳನ್ನು , ಬ್ರ್ಯಾಂಡ್ಗಳನ್ನು ಬಳಸಲು ಒಲವು ತೋರುತ್ತಾರೆ. ಅವರು ಕೆಟ್ಟದ್ದನ್ನು ಸೂಚಿಸಿದರೆ ಅನೇಕ ಫ್ಯಾನ್ಸ್ ಯೋಚನೆ ಕೂಡ ಮಾಡದೆ ಅದನ್ನು ಪಾಲಿಸುತ್ತಾರೆ.
ನಟಿ ರಶ್ಮಿಕಾ ಕೂಡ ಇದೇ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ. ಅವರು ಮದ್ಯದ ಕಂಪನಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಎಷ್ಟು ಸರಿ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
View this post on Instagram