ಐಸಿಸ್​ ಮುಖ್ಯಸ್ಥ ಬಾಗ್ದಾದಿ ಹತ್ಯೆ ಬೆನ್ನಲ್ಲೇ ಸಹೋದರಿ ಅರೆಸ್ಟ್​!

0
204

ಇಸ್ಲಾಮಿಕ್ ಸ್ಟೇಟ್​ ಆಫ್ ಇರಾಕ್ & ಸಿರಿಯಾ (ಐಸಿಸ್) ಉಗ್ರಸಂಘಟನೆಯ ಮುಖ್ಯಸ್ಥ ಅಲ್ ಬಾಗ್ದಾದಿ ಹತ್ಯೆ ಬೆನ್ನಲ್ಲೇ ಆತನ ಸಹೋದರಿ ರಸ್ಮಿಯಾ ಅವಾದ್ (65) ಳನ್ನು ಟರ್ಕಿ ಸೇನೆ ಬಂಧಿಸಿದೆ.
ರಸ್ಮಿಯಾ ಅವಾದ್ ಉತ್ತರ ಸಿರಿಯಾದ ಎವಾಜ್​ ಪಟ್ಟಣದಲ್ಲಿ ತಲೆಮರೆಸಿಕೊಂಡು ತಿರುಗುತ್ತಿದ್ದಳು ಎನ್ನಲಾಗಿದೆ. ರಸ್ಮಿಯಾ ಬಂಧನದೊಂದಿಗೆ ಸಿರಿಯಾದಲ್ಲಿ ಐಸಿಸ್ ವಿರುದ್ಧ ಸೇನೆ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದಂತಾಗಿದೆ ಎಂದು ಹೇಳಲಾಗುತ್ತಿದೆ. ಐಸಿಸ್​ಗೆ ಸಂಬಂಧಪಟ್ಟ ಮಹತ್ವದ ಮಾಹಿತಿ ರಸ್ಮಿಯಾಗೆ ತಿಳಿದಿದ್ದು, ಆಕೆ ಕೂಡ ಉಗ್ರ ಸಂಘಟನೆಯಲ್ಲಿ ಸಕ್ರಿಯಳಾಗಿದ್ದಳೆಂದು ತಿಳಿದುಬಂದಿದೆ.
ಇತ್ತೀಚೆಗೆ ಅಮೆರಿಕಾದ ವಿಶೇಷ ಪಡೆ ಸಿರಿಯಾದಲ್ಲಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಐಸಿಸ್​ ಸಂಸ್ಥಾಪಕ ಅಬುಬಕರ್ ಅಲ್ ಬಾಗ್ದಾದಿ ಹತನಾಗಿದ್ದನು.

LEAVE A REPLY

Please enter your comment!
Please enter your name here