ನಿಜ ನಮ್ಮ ಸಾಧನೆಯ ಹಿಂದೆ ಅಪ್ಪ- ಅಮ್ಮನ ಶ್ರಮ ಯಾವತ್ತಿಗೂ ಸ್ಮರಣೀಯ.. ಸ್ಯಾಂಡಲ್ ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಮಾತನ್ನು ನೆನೆದಿದ್ದಾರೆ.. ಅಪ್ಪನನ್ನು ಹೀರೋ ಮಾಡಿದ್ದಾರೆ…
‘ಅಪ್ಪನನ್ನು ಹೀರೋ ಮಾಡಿದ್ರು ಸುದೀಪ್ ‘ ಅನ್ನೋ ಹೆಡ್ ಲೈನ್ ನೋಡಿ ಸುದೀಪ್ ತಂದೆಯನ್ನು ಹಾಕ್ಕೊಂಡ್ ಸಿನಿಮಾ ಮಾಡ್ತಿದ್ದಾರಾ ಅಂತ ಆಶ್ಚರ್ಯ ಪಡ್ಬೇಡಿ.., ತಮ್ಮಷ್ಟಕ್ಕೆ ತಾವೇ ಪ್ರಶ್ನೆ ಮಾಡ್ಕೋ ಬೇಡಿ. ವಿಷ್ಯ ಏನಪ್ಪ ಅಂದ್ರೆ ಇದು ಸುದೀಪ್ ತನ್ನ ತಂದೆಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ರೀತಿ.
ಹೌದು, ಇಂದು ಸುದೀಪ್ ಅವರ ತಂದೆ ಎಂ .ಸಂಜೀವ್ ಅವರ ಹುಟ್ಟುಹಬ್ಬ. ಹೀಗಾಗಿ ಸುದೀಪ್ ಅಪ್ಪನಿಗೆ ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ.
ನನ್ನ ಮೆಂಟರ್, ನನ್ನ ಸ್ಟ್ರೆಂತ್, ನನ್ನ ಗೈಡ್, ನನ್ನ ಹೀರೋಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಆಸರೆಯಲ್ಲಿರುವುದೇ ಖುಷಿ ಅಪ್ಪಾ…ಲವ್ ಯು ಅಂದಿದ್ದಾರೆ ಸುದೀಪ್.
Happy RETURNS to my mentor,, my strength,,my guide,,my tutor,,my HERO.
🤗.
Always happy to be under ur shelter Appa.
Luv you . pic.twitter.com/cExfpD3rVq— Kichcha Sudeepa (@KicchaSudeep) July 17, 2020