ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಹಾಯ ಮನೋಭಾವ ಎಲ್ಲರಿಗೂ ಗೊತ್ತಿರುವ ವಿಚಾರ .ಈ ಹಿಂದೆ ಅನೇಕ ಬಾರಿ ಸುದೀಪ್ ಅವರು ಹಲವಾರು ಜನರಿಗೆ ಸಹಾಯ ಮಾಡಿದ್ದರು.ಕಿಚ್ಚ ಸುದೀಪ್ ನಿಜ ಜೀವನದಲ್ಲಿ ಹೀರೋ ಅನ್ನೊದು ಎಲ್ಲರಿಗೂ ಗೊತ್ತಿರುವ ವಿಚಾರ . ಈಗ ಕಿಚ್ಚ ಸುದೀಪ್ ಸಾವಿರಾರು ವಿಧ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಿದ್ದಾರೆ . ಹೌದು ಚಿತ್ರದುರ್ಗ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಯನ್ನ ದತ್ತು ಪಡೆದುಕೊಂಡಿದ್ದಾರೆ ಸುಮಾರು ೧೫೦೦ ವಿಧ್ಯಾರ್ಥಿಗಳು ಈ ಶಾಲೆಗಳಲ್ಲಿ ಓದುತ್ತಿದ್ದಾರೆ . ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಸದಸ್ಯರು ಈ ಆ ಶಾಲೆಗಳ ದತ್ತು ಪ್ರಕ್ರಿಯೆಯನ್ನು ಪೂರ್ಣಗೋಳಿಸಿದ್ದಾರೆ.