ಪಾಕ ಪ್ರವೀಣ ಸುದೀಪ್ ಶೆಫ್ ಅವತಾರ : ಇದು ‘ಕಿಚ್ಚ’ನ್ ಕಹಾನಿ !

0
222

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟನೆ, ನಿರ್ದೇಶನದಲ್ಲಿ ಮಾತ್ರವಲ್ಲ ಕಿರುತೆರೆ ನಿರೂಪಣೆ, ಕ್ರಿಕೆಟ್ ಹೀಗೆ ನಾನಾ ಕಡೆಗಳಲ್ಲಿ ಛಾಪು ಮೂಡಿಸಿದ್ದಾರೆ. ಕಿಚ್ಚ ಸಕಲಕಲಾ ವಲ್ಲಭ. ಸುದೀಪ್ ಒಳಗೊಬ್ಬ ಪಾಕ ಪ್ರವೀಣನೂ ಇದ್ದಾನೆ. ಬಿಗ್ ಬಾಸ್​ನಲ್ಲಿ ಕಿಚ್ಚನ ಅಡುಗೆ ಫೇಮಸ್ ಆಗಿದ್ದು ಗೊತ್ತೇ ಇದೆ. ಅಷ್ಟೇ ಏಕೆ ಸೈರಾ ನರಸಿಂಹ ರೆಡ್ಡಿ ಸೆಟ್​ನಲ್ಲಿ ಸಹಕಲಾವಿದರಿಗೆ ಬಿಸಿಬಿಸಿ ದೋಸೆ ಮಾಡಿಕೊಟ್ಟಿದ್ದೂ ಸಖತ್ ಸದ್ದು ಮಾಡಿತ್ತು. ಈಗ ಮತ್ತೆ ಶೆಫ್ ಕಿಚ್ಚ ಸುದ್ದಿಯಲ್ಲಿದ್ದಾರೆ.
ಕಿಚ್ಚ ಕ್ರಿಯೇಷನ್​ ವಿಡಿಯೋವೊಂದನ್ನು ಯೂಟ್ಯೂಬಲ್ಲಿ ಶೇರ್ ಮಾಡಿದೆ. ಶೆಫ್ ಸುದೀಪ್ ಕ್ರಿಸ್ಪಿ ಕ್ರೊಸೆಂಟ್ಸ್ ತಯಾರು ಮಾಡ್ತಿರೋದನ್ನು ವಿಡಿಯೋದಲ್ಲಿ ನೋಡ್ಬಹುದು.ವಿಡಿಯೋಕ್ಕೆ ಸೂಪರ್ ಆ್ಯಕ್ಟರ್, ಸೂಪರ್ ಸ್ಟಾರ್. ಮಾಸ್ಟರ್ ಶೆಫ್ ಅಂತ ಕ್ಯಾಪ್ಷನ್ ಇದೆ. ಅಷ್ಟೇ ಅಲ್ಲದೆ ‘ಕಿಚ್ಚಾ’ಸ್ ಕಿಚನ್ ಅಂತ ಹೆಡರ್ ಕೊಡಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ‘ಕಿಚ್ಚ’ನ್ ಕಹಾನಿ ಸಖತ್ ವೈರಲ್ ಆಗ್ತಿದೆ.

LEAVE A REPLY

Please enter your comment!
Please enter your name here