ವರ್ಲ್ಡ್​ಕಪ್​ಗೆ ತೆರಳಿದ ಕಿಚ್ಚ  ಸುದೀಪ್..!

0
233

ಲಂಡನ್: ವಿಶ್ವಕಪ್  ದಿನೇ ದಿನೇ ರಂಗೇರುತ್ತಿದೆ. ಇಂದು  ಓವೆಲ್​ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಮತ್ತು ಆ್ಯರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ.

ಈಗಾಗಲೇ ಒಂದು ಇನ್ನಿಂಗ್ಸ್ ಮುಗಿದಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿ 352ರನ್​ ಗಳನ್ನು ಗಳಿಸಿದೆ. ಶಿಖರ್ ಧವನ್ ಶತಕ (117), ರೋಹಿತ್ ಶರ್ಮಾ (57), ವಿರಾಟ್ ಕೊಹ್ಲಿ (82), ಹಾರ್ದಿಕ್ (48) ಭಾರತದ ಬೃಹತ್ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇನ್ನು ಟೀಮ್ ಇಂಡಿಯಾವನ್ನು ಬೆಂಬಲಿಸಲು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಲಂಡನ್​ಗೆ ಹೋಗಿದ್ದಾರೆ. ಇಂಡಿಯಾ- ಆಸೀಸ್​ ನಡುವಿನ ಪಂದ್ಯವನ್ನು ಕಿಚ್ಚ ವೀಕ್ಷಿಸುತ್ತಿದ್ದಾರೆ. ತಾವು ಓವೆಲ್ ಮೈದಾನದಲ್ಲಿ ಕ್ರಿಕೆಟ್ ವೀಕ್ಷಿಸುತ್ತಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡುತ್ತಿರುವ ವೀಡಿಯೋ ತುಣಕ್ಕನ್ನು ಕಿಚ್ಚ ಶೇರ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here