300 ಕೋಟಿ ಬಜೆಟ್ ಸಿನಿಮಾದಲ್ಲಿ ಸುದೀಪ್ ಕ್ರಿಕೆಟರ್..!

0
473

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಸದ್ಯ ‘ಪೈಲ್ವಾನ್’ ಆಗಿ ಖದರ್ ತೋರಿಸಲು ಅಖಾಡದಲ್ಲಿರುವ ಕಿಚ್ಚ ಮುಂದಿನ ಸಿನಿಮಾದಲ್ಲಿ ಕ್ರಿಕೆಟರ್ ಆಗಿ ಮಿಂಚಲಿದ್ದಾರೆ..! ಸ್ವತಃ ಅವರೇ ಈ ಸಿಹಿ ಸುದ್ದಿಯನ್ನು ಹೇಳಿದ್ದಾರೆ.
ಸುದೀಪ್ ಒಳ್ಳೆಯ ಸಿನಿಮಾ ನಟ ಮಾತ್ರವಲ್ಲ.. ಒಬ್ಬ ಒಳ್ಳೆಯ ಕ್ರಿಕೆಟರ್ ಕೂಡ… ಸುದೀಪ್ ಸೆಲೆಬ್ರಿಟಿ ಲೀಗ್ ಸೇರಿದಂತೆ ನಾನಾ ಕಡೆಗಳಲ್ಲಿ ಕ್ರಿಕೆಟ್ ಆಡಿದ್ದನ್ನು ನೋಡಿದ್ದೀರಿ. ಈಗ ಅವರು ತೆರೆ ಮೇಲೆ ಕ್ರಿಕೆಟರ್ ಆಗಿ ಸದ್ದು ಮಾಡಲಿದ್ದಾರೆ.
ಪೈಲ್ವಾನ್​ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ, ಕಿಚ್ಚನನ್ನು ಕ್ರಿಕೆಟರ್ ಆಗಿ ನೋಡಿದ್ದೀವಿ. ರೀಲ್​ನಲ್ಲಿ ಕ್ರಿಕೆಟರ್​ ಆಗಿ ನೋಡ್ಬಹುದಾ ಅನ್ನೋ ಪ್ರಶ್ನೆ ಸುದೀಪ್​ಗೆ ಎದುರಾಯ್ತು. ಆಗ ಅವರು ಕಾರ್ತಿಕ್ ಗೌಡರನ್ನು ತೋರಿಸಿ ಕಿಚ್ಚ, ಇವರು ಮುಂದೆ 200-300 ಕೋಟಿ ರೂ ಬಿಗ್​ ಬಜೆಟ್​ ಸಿನಿಮಾ ಮಾಡ್ಬೇಕು ಅಂತಿದ್ದಾರೆ. ಅವ್ರನ್ನೇ ಕೇಳಿ ಏನಾದ್ರೂ ಮಾಡ್ಬಹುದಾ ಅಂತ ಉತ್ತರಿಸಿದ್ರು. ಅದಕ್ಕೆ ಕಾರ್ತಿಕ್ ಗೌಡ ಕೂಡ ಹೌದು ಅನ್ನುವಂತೆ ತಲೆಯಾಡಿಸಿದ್ರು. ಆದ್ದರಿಂದ ರಿಯಲ್​ನಲ್ಲಿ ಮಾತ್ರವಲ್ಲ ರೀಲ್​ನಲ್ಲೂ ಕಿಚ್ಚನನ್ನು ಕ್ರಿಕೆಟರ್ ಆಗಿ ನೋಡಬಹುದು ಅನ್ನೋದು ಖಚಿತವಾಗಿದೆ.

LEAVE A REPLY

Please enter your comment!
Please enter your name here