Tuesday, January 18, 2022
Powertv Logo
Homeಸಿನಿಮಾಇವರೇ ನೋಡಿ.., ಅಂದಿನಿಂದ ಇಂದಿಗೂ ಕಿಚ್ಚನ ಮೇಕಪ್ ಮ್ಯಾನ್!

ಇವರೇ ನೋಡಿ.., ಅಂದಿನಿಂದ ಇಂದಿಗೂ ಕಿಚ್ಚನ ಮೇಕಪ್ ಮ್ಯಾನ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇವತ್ತು ಸ್ಯಾಂಡಲ್ವುಡ್​ ಆಚೆಗೂ ಬಹು ಬೇಡಿಕೆ ಹೊಂದಿರುವ ನಟ. ಕಿಚ್ಚನ ಅಭಿನಯಕ್ಕೆ ಇಡೀ ಭಾರತೀಯ ಚಿತ್ರರಂಗವೇ ತಲೆಬಾಗಿದೆ. ವಿಶ್ವಮಟ್ಟದಲ್ಲಿ ಸುದೀಪ್ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 1997ರಲ್ಲಿ ತೆರೆಕಂಡ ತಾಯವ್ವ ಸಿನಿಮಾದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟ ಸುದೀಪ್ ಇಂದು ಯಾವಮಟ್ಟದಲ್ಲಿ ಬೆಳೆದಿದ್ದಾರೆ ಅನ್ನೋದು ಜಗತ್ತಿಗೇ ಗೊತ್ತು.
ಅದೇನೇ ಇರಲಿ ಸುದೀಪ್ ನಡೆದು ಬಂದ ದಾರಿಯನ್ನು ಮರೆಯೋರಲ್ಲ. ಇಂದು ಆರಂಭದ ದಿನಗಳಲ್ಲಿ ತಮಗೆ ಮೇಕಪ್ ಮ್ಯಾನ್ ಆಗಿದ್ದ, ಈಗಲೂ ಜೊತೆಗಿರುವ ವ್ಯಕ್ತಿಯನ್ನು ಪರಿಚಯಿಸಿಕೊಟ್ಟಿದ್ದಾರೆ. ಟ್ವಿಟರ್​ನಲ್ಲಿ ಚಿಕ್ಕ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಕಿಚ್ಚ, 1996 ಜನವರಿ 31ರಂದು ಕಂಠೀರವ ಸ್ಟೂಡಿಯೋದಲ್ಲಿ ಮೊಟ್ಟ ಮೊದಲ ಬಾರಿಗೆ ಮೇಕಪ್ ಮಾಡಿದ ಗುರುಮೂರ್ತಿಯವರೇ ಇಂದಿಗೂ ನನ್ನ ಸಿನಿಮಾಗಳಿಗೆ ಮೇಕಪ್ ಮ್ಯಾನ್ ಎಂಬುದನ್ನು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments