ಕಿಚ್ಚ ಸುದೀಪ್ ನಿರ್ದೇಶನದ ಹೊಸ ಸಿನಿಮಾ ಟೈಟಲ್ ಫಿಕ್ಸ್?

0
580

ಕಿಚ್ಚ ಸುದೀಪ್… ಕನ್ನಡ ಸಿನಿರಂಗ ಮಾತ್ರವಲ್ಲ ಭಾರತೀಯ ಸಿನಿರಂಗದಲ್ಲಿ ಕನ್ನಡದ ಕೀರ್ತಿಯನ್ನ ಹೆಚ್ಚಿಸಿದ ಹೆಸರು . ಸ್ಪರ್ಶ ಸಿನಿಮಾ ಮೂಲಕ ನಾಯಕನಟನಾಗಿ ಸ್ಯಾಂಡಲ್​​ವುಡ್​ಗೆ ಹೆಜ್ಜಿಯಿಟ್ಟ ಆರಡಿ ಕಟ್ ಔಟ್ ‘ಹುಚ್ಚ’ನಾಗಿ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚಿದರು. ‘ವಾಲಿ’ಯ ಹೊಸ ಅವತಾರಕ್ಕೆ ಕರುನಾಡ ಸಿನಿರಸಿಕರು ಇವರೇ ನಮ್ಮ ‘ಸ್ವಾತಿ ಮುತ್ತು’ ಅಂದ್ರು.
ಸುದೀಪ್ ಕೇವಲ ನಟನಾಗಿ ಮಾತ್ರವಲ್ಲ, ಡೈರೆಕ್ಟರ್ ಆಗಿಯೂ ಸೈ ಎನಿಸಿಕೊಂಡವರು. `ಮೈ ಆಟೋಗ್ರಾಫ್​’ ಸಿನಿಮಾದ ಮೂಲಕ ಡೈರೆಕ್ಟರ್ ಆಗಿ ಮನೆಮಾತಾದರು.
ಕಿಚ್ಚನ ಮೊದಲ ನಿರ್ದೇಶನದ ಮೈ ಆಟೋಗ್ರಾಫ್ ಸೂಪರ್ ಸಕ್ಸಸ್ ಕಂಡಿದ್ದು ಈಗ ಇತಿಹಾಸ . ಈ ಸಿನಿಮಾದ ಸವಿ ಸವಿ ನೆನಪು ಹಾಡು ಇಂದಿಗೂ ಎಲ್ಲರ ಬಾಲ್ಯವನ್ನ ನೆನಪಿಸುತ್ತದೆ . ಅಷ್ಟರ ಮಟ್ಟಿಗೆ ಸಿನಿಮಾದ ಹಾಡು ಹಿಟ್ ಆಗಿತ್ತು . ಇನ್ನು `ಮೈ ಆಟೋಗ್ರಾಫ್’ ಕಿಚ್ಚನ ಸಿನಿ ಜರ್ನಿಯಲ್ಲೇ ಬೆಸ್ಟ್ ಸಿನಿಮಾ ಅಂದ್ರೆ ತಪ್ಪಗೋದಿಲ್ಲ .
ಮೈ ಆಟೋಗ್ರಾಫ್ ನಂತ್ರ ಸುದೀಪ್ ಶಾಂತಿ ನಿವಾಸ ಚಿತ್ರವನ್ನ ನಿರ್ದೇಶನ ಮಾಡಿದ್ರು. ಆದ್ರೆ ಈ ಸಿನಿಮಾ ಹಿಟ್ ಆಗ್ಲಿಲ್ಲ . ಕಿಚ್ಚನಿಗೆ ಮತ್ತೆ ಸ್ಟಾರ್ ನಿರ್ದೇಶಕನ ಪಟ್ಟ ತಂದು ಕೊಟ್ಟಿದ್ದು ‘ವೀರ ಮದಕರಿ’ ಸಿನಿಮಾ . ವೀರ ಮದಕರಿಯಲ್ಲಿ ದ್ವಿಪಾತ್ರದ ಜೊತೆಗೆ ಕಿಚ್ಚನ ನಿರ್ದೇಶನ ಕೂಡ ಸಖತ್ ಕಿಕ್ ಕೊಟ್ಟಿತ್ತು .
ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ ಸಿನಿಮಾ ಕಿಚ್ಚನ ನಿರ್ದೇಶನದಲ್ಲಿ ಮೂಡಿಬಂದ್ವು . ಕೆಂಪೇಗೌಡ ಸಿನಿಮಾ ಇತಿಹಾಸ ನಿರ್ಮಿಸಿತು . ಈ ಸಿನಿಮಾದ ಮೂಲಕವೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ , ನಟ ರವಿ ಶಂಕರ್ ಚಂದನವನಕ್ಕೆ ಪರಿಚಿತರಾದ್ರು.
ಇನ್ನು ಕೊನೆಯದಾಗಿ ಕಿಚ್ಚ ನಿರ್ದೇಶಕನ ಕ್ಯಾಪ್ ತೊಟ್ಟ ಸಿನಿಮಾ ಮಾಣಿಕ್ಯ . ಈ ಚಿತ್ರದ ನಂತ್ರ ಸುದೀಪ್ ನಟನೆಯಲ್ಲಿ ಬ್ಯುಸಿಯಾಗಿದ್ದರು . ಆಗೊಮ್ಮೆ-ಈಗೊಮ್ಮೆ ಸುದೀಪ್ ಮತ್ತೆ ನಿರ್ದೇಶನ ಮಾಡುತ್ತಾರೆ ಅನ್ನೋ ಮಾತುಗಳು ಕೇಳಿ ಬಂದ್ರೂ ಐದು ವರ್ಷಗಳಿಂದ ಅದು ಸಾಧ್ಯವಾಗಿಲ್ಲ. ಈಗ ಕಿಚ್ಚ ಮತ್ತೆ ಆಕ್ಷನ್ ಕಟ್ ಹೇಳೋ ಟೈಮ್ ಹತ್ತಿರ ಬಂದಿದೆ.
ಐದು ವರ್ಷಗಳ ನಂತ್ರ ಸುದೀಪ್ ಆಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ ಕಥೆಯೊಂದನ್ನ ರೆಡಿ ಮಾಡಿಕೊಂಡಿದ್ದಾರಂತೆ. ಇನ್ನು ಈ ಸಿನಿಮಾ ವಿಶೇಷತೆ ಏನು ಅಂದ್ರೆ ಈ ಹಿಂದೆ ಕಿಚ್ಚ ಡೈರೆಕ್ಟ್ ಮಾಡಿದ ಸಿನಿಮಾಗಳು ರಿಮೇಕ್ ಆಗಿದ್ವು, ಆದ್ರೆ ಇದು ಸ್ವಮೇಕ್ ಸಿನಿಮಾವಂತೆ.
ಸುದೀಪ್ ಅವರ ಆಪ್ತ ಮೂಲಗಳ ಪ್ರಕಾರ ಇದು ಆಟೋಗ್ರಾಪ್ ತರಹದ ಸಿನಿಮಾ ಆಗಿರಲಿದೆ. ಆಟೋಗ್ರಾಫ್ ಸೀಕ್ವೆಲ್ ಎಂದು ಹೇಳಲಾಗುತ್ತಿದೆ.

-ಮನೋಜ್ ನರಗುಂದಕರ್

LEAVE A REPLY

Please enter your comment!
Please enter your name here