ಬೆಂಗಳೂರು : ಕನ್ನಡ ಬಿಗ್ ಬಾಸ್ ಸೀಸನ್ 8ರಲ್ಲಿ ಅತೀ ಲಕ್ಕಿ ಪರ್ಸನ್ ಎಂದೇ ಖ್ಯಾತಿ ಪಡೆದುಕೊಂಡವರು ಶಮಂತ್ ಬ್ರೋ ಗೌಡ ಬಿಗ್ ಬಾಸ್ ಜರ್ನಿಯಲ್ಲಿ ಅವರು ಕೊನೆಯವರೆಗೂ ಉಳಿದುಕೊಂಡಿದ್ದು ಒಂದು ಅಚ್ಚರಿಯೇ ಸರಿ. ಇದರಿಂದ ಅವರ ವೃತ್ತಿಜೀವನಕ್ಕೂ ವೇಗ ಸಿಕ್ಕಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ.
ಬಿಗ್ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಶಮಂತ್ ಬ್ರೋ ಗೌಡಾ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಬ್ರೋ ಗೌಡಾ ಆವರ ಕಾರನ್ನು ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಡ್ರೈವ್ ಮಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಶಮಂತ್ ಬ್ರೋ ಗೌಡ ಇತ್ತೀಚೆಗೆ BMW ಕಂಪೆನಿಯ 525D ಕಾರನ್ನು ಖರೀದಿಸಿದ್ದರು. ಈ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದರು. ಈ ಕಾರನ್ನು ಸುದೀಪ್ ಅವರಿಗೆ ತೋರಿಸಬೇಕು, ಅವರಿಂದ ಆಶೀರ್ವಾದ ಪಡೆಯಬೇಕು ಎಂಬುದು ಬ್ರೋ ಗೌಡ ಆಸೆ ಆಗಿತ್ತು. ಅದು ಈಗ ಈಡೇರಿದೆ.
View this post on Instagram