ಬೆಂಗಳೂರು: ಇಂದಿನಿಂದ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿ ಇರುತ್ತೆ. ಅನವಶ್ಯಕವಾಗಿ ಓಡಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂಥ್ ಹೇಳಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಬ್ಯಾರಿಕೇಡ್ ಹಾಕಿ ತಲಾಶ್. ನಗರದಲ್ಲಿ ಫ್ಲೈ ಓವರ್ ಗಳು ಕ್ಲೋಸ್, ಠಾಣಾ ವ್ಯಾಪ್ತಿಯಲ್ಲಿ ನಾಕಾ ಬಂದಿಯನ್ನು ಹಾಕಲಾಗುತ್ತದೆ. 11 ಗಂಟೆ ಮೇಲೆ ಓಡಾಡುವವರನ್ನು ಚೇಕ್ ಮಾಡಲಾಗುತ್ತದೆ. 144 ಸೆಕ್ಷನ್ ಜಾರಿಯಲ್ಲಿ ಇರುವುದರಿಂದ ಹೊಸ ವರ್ಷಾಚಾರಣೆಗೆ ಅವಕಾಶ ಇಲ್ಲ.
ಬಸ್, ಟ್ರೈನ್, ಫ್ಲೈಟ್ ಗೆ ಃಓಗೋರು ಟೀಕೆಟ್ ತೋರಿಸಬೇಕು. ಹಾಗೇ ಬೇರೆ ಕಡೆಯಿಂದ ನಗರಕ್ಕೆ ವಾಪಸ್ ಬರುವವರು ಟೀಕೆಟ್ ತೋರಿಸಿಬೇಕು. ಟೀಕೆಟ್ ತೋರಿಸಿ ಆಟೋ ಕ್ಯಾಬ್ ನಲ್ಲಿ ಸಂಚರಿಸಬಹುದು. ರಾತ್ರಿ 11 ಗಂಟೆ ನಂತರ ಹೊಟೆಲ್, ಬಾರ್, ಪಬ್, ರೆಸ್ಟೋರೆಂಟ್ ಬಂದ್. ನೈಟ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಡಿದರೆ ಕೇಸ್ ಬೀಳೊದು ಗ್ಯಾರಂಟಿ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು ಕಂಪನಿಯ ಐಡಿ ಕಾರ್ಡ್ ತೊರಿಸಿ ಸಂಚರಿಸಬಹುದು ಎಂದು ಕಮಲ್ ಪಂಥ್ ಹೇಳಿದ್ದಾರೆ.
ನಗರದ ಪ್ರತಿಯೊಬ್ಬರು ರಾತ್ರಿ 11 ಗಂಟೆಯೊಳಗೆ ಮನೆ ಸೇರಬೇಕು. ಎಲ್ಲ ಹೋಟೇಲ್ ಗಳಿಗೆ ಡಿಸಿಪಿಗಳ ಮೂಲಕ ಮಾಹಿತಿಯನ್ನು ರವಾನೆ ಮಾಡಲಾಗುತ್ತದೆ. ಎಂಜಿ ರೋಡ್, ಬ್ರಿಗೇಡ್ ರೋಡ್ ನ ಪಬ್, ಹೋಟೆಲ್ ಗಳಿಗೂ ನಿಷೇಧ ಹೇರಲಾಗಿದೆ. ನೈಟ್ ಕರ್ಫ್ಯೂ ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಕಮಿಷನರ್ ಕಮಲ್ ಪಂಥ್ ಹೇಳಿದ್ದಾರೆ.