ಬೆಂಗಳೂರು: ಕೊರೋನಾ ವೈರಸ್ ಹಿನ್ನಲೆಯಲ್ಲಿ ಹೊಸ ವರ್ಷಾಚಾರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ಪಬ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ಖಾಕಿ ಹದ್ದಿನ ಕಣ್ಣು ಇಟ್ಟಿದೆ. ಪಬ್ ಮತ್ತು ರೆಸ್ಟೋರೆಂಟ್ ಗಳಿಗೆ ಸಾರ್ವಜನಿಕ ಹಿತ ದೃಷ್ಠಿಯಿಂದ ಕಾಯ್ದೆಯ ಅನ್ವಯ ಕ್ರಮದ ಬಗ್ಗೆ ಪೊಲೀಸರು ಎಚ್ಚರಿಕೆ ನಿಡಿದ್ದಾರೆ.
ಬಾರ್, ಪಬ್ ಮತ್ತು ರೆಸ್ಟೋರೆಂಟ್ ಗಳು ಪಾಲಿಸಬೇಕಾದ ನಿಯಮಗಳು
- ಲೈಸೈನ್ಸ್ ಷರತ್ತುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು
- ಪಬ್ ಮತ್ತು ರೆಸ್ಟೋರೆಂಟ್ ಗಳಲ್ಲಿ 24 ಗಂಟೆ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸಬೇಕು
- 1 ತಿಂಗಳು ಡಾಟ ಸ್ಟೋರೆಜ್ ಇರುವಂತೆ ನೋಡಿಕೊಳ್ಳಬೇಕು
- ಒಳಭಾಗ, ಹೊರಗೆ, ಪಾರ್ಕಿಂಗ್ ನಲ್ಲಿ ಲೈಟಿಂಗ್ ವ್ಯವಸ್ಥೆ ಕಡ್ಡಾಯ
- ಪಬ್ ಗಳ ಪ್ರಮುಖ ಜಾಗಗಳಲ್ಲಿ ಅಲರಂಗಳನ್ನು ಅಳವಡಿಸಬೇಕು
- ಪ್ರಮುಖ ಸ್ಥಳಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಿಸಬೇಕು
ಈ ಎಲ್ಲ ರೂಲ್ಸ್ ಗಳನ್ನು ಬ್ರೇಕ್ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.