ರಾಕಿಭಾಯ್​​ ಜೊತೆ ‘ಕೆಜಿಎಫ್​’ ಅಖಾಡಕ್ಕೆ ಬಾಲಿವುಡ್​ ಬ್ಯೂಟಿ..!

0
182

ಕೆಜಿಎಫ್-2 ಅಖಾಡಕ್ಕೆ ರಾಕಿಭಾಯ್ ರೀ ಎಂಟ್ರಿ ಕೊಡ್ತಿದ್ದಾರೆ. ಅಷ್ಟೇ ಅಲ್ಲ… ಈ ಬಾರಿ ರಾಕಿಭಾಯ್ ಜೊತೆ ಬಾಲಿವುಡ್​ ನಟಿ ಕೂಡ ಬರ್ತಿದ್ದಾರೆ..!

ಸಪ್ತಸಾಗರದಾಚೆಗೂ ಸೌಂಡ್ ಮಾಡಿ, ಸ್ಯಾಂಡಲ್​ವುಡ್​ನ ಬ್ರಾಂಡ್​ ವ್ಯಾಲ್ಯುವನ್ನು ಹೆಚ್ಚಿಸಿದ ಸಿನಿಮಾ ಕೆಜಿಎಫ್. ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದ, ರಾಕಿಂಗ್ ಸ್ಟಾರ್ ಯಶ್ ರಾಕಿಭಾಯ್ ಆಗಿ ಘರ್ಜಿಸಿದ್ದ ಕನ್ನಡದ ಗೋಲ್ಡನ್​ ಫಿಲ್ಮ್​ ಕೆಜಿಎಫ್​ನ ಚಾಪ್ಟರ್-2 ಸೆಟ್ಟೇರಿರೋದು ಗೊತ್ತೇ ಇದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್​-2 ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಕೆಲ ದಿನಗಳ ಮಟ್ಟಿಗೆ ಬ್ರೇಕ್ ತಗೊಂಡಿದ್ದ ಯಶ್ ಶೂಟಿಂಗ್ ಅಖಾಡಕ್ಕೆ ರೀ ಎಂಟ್ರಿ ಕೊಡ್ತಾ ಇದ್ದಾರೆ. ಈ ಬಾರಿ ರಾಕಿಭಾಯ್ ಜೊತೆಗೆ ಬಾಲಿವುಡ್​ ಸ್ಟಾರ್ ನಟಿಯೊಬ್ಬರು ಬರ್ತಿದ್ದಾರೆ..!

ಹೌದು, ಜೂನ್​ 6ರಿಂದ ಯಶ್ ಚಿತ್ರೀಕರಣದಲ್ಲಿ ಪಾಲ್ಗೊಳ್ತಾ ಇದ್ದಾರೆ. ಅಲ್ಲದೆ, ಬಾಲಿವುಡ್ ಬ್ಯೂಟಿ ರವೀನಾ ಟಂಡನ್​ ಕೂಡ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

ಹಾಗಂತ ರವೀನಾಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಹೊಸತಲ್ಲ. 1999ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ ‘ಉಪೇಂದ್ರ’ ಸಿನಿಮಾದಲ್ಲಿ ರವೀನಾ ನಟಿಸಿದ್ದರು. ಇದೀಗ 10 ವರ್ಷಗಳ ಬಳಿಕ ಸ್ಯಾಂಡಲ್​ವುಡ್​ ಗೆ ವಾಪಸ್ ಆಗುತ್ತಿದ್ದಾರೆ.

ಇನ್ನು ರವೀನಾ 1970-80ರ ಭಾರತದ ಪ್ರಧಾನಿ ಪಾತ್ರದಲ್ಲಿ, ಅರ್ಥಾತ್ ಇಂದಿರಾ ಗಾಂಧಿ ಅವರನ್ನು ಹೋಲುವ ಪಾತ್ರದಲ್ಲಿ ನಟಿಸ್ತಾ ಇದ್ದಾರೆ ಅಂತ ಹೇಳಲಾಗಿದೆ. ರಿಮಿಕಾ ಸೇನ್ ಅನ್ನೋದು ರವೀನಾ ಪಾತ್ರದ ಹೆಸರಂತೆ.

ರವೀನಾ ಅವರ ಪತಿ ಅನಿಲ್ ತಡಾನಿ ಕೆಜಿಎಫ್ ಚಾಪ್ಟರ್-1ನ್ನು ವಿತರಣೆ ಮಾಡಿದ್ರು. ಚಾಪ್ಟರ್-2 ಅನ್ನು ಕೂಡ ವಿತರಣೆ ಮಾಡಲಿದ್ದಾರೆ. ಕೆಜಿಎಫ್ ಚಾಪ್ಟರ್ 1 ನೋಡಿ ಫಿದಾ ಆಗಿದ್ದ ರವೀನಾ ಚಾಪ್ಟರ್-2 ನಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ರವೀನಾ ಅವರಲ್ಲದೆ ಈಗಾಗಲೇ ಸುದ್ದಿಯಾಗಿರುವಂತೆ ಸಂಜಯ್ ದತ್ ಕೂಡ ಕೆಜಿಎಫ್-12ನಲ್ಲಿ ನಟಿಸ್ತಾ ಇದ್ದು, ಅವರು ಕೂಡ ಆದಷ್ಟು ಬೇಗ ಚಿತ್ರತಂಡವನ್ನು ಕೂಡಿ ಕೊಳ್ಳಲಿದ್ದಾರೆ.

ಒಟ್ಟಾರೆಯಾಗಿ ಕೆಜಿಎಫ್ ಚಾಪ್ಟರ್ 2 ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದ್ದು, ಕೆಜಿಎಫ್ ಚಾಪ್ಟರ್ 2 ಗಿಂತಲೂ ಹೆಚ್ಚು ಸೌಂಡು ಮಾಡಲಿದೆ ಅಂತ ಹೇಳಲಾಗುತ್ತಿದೆ. ಯಶ್ ಎಲ್ಲಾ ಪ್ರಾಜೆಕ್ಟ್​​ ಗಳನ್ನು ಸದ್ಯಕ್ಕೆ ದೂರವಿಟ್ಟು, ಕೆಜಿಎಫ್​ಗೇ ಸಂಪೂರ್ಣ ಎಫರ್ಟ್ ಹಾಕ್ತಾ ಇದ್ದಾರೆ.

LEAVE A REPLY

Please enter your comment!
Please enter your name here