Home ಸಿನಿ ಪವರ್ KGF-2 ಅಖಾಡಕ್ಕೆ ಪ್ರಕಾಶ್ ರೈ ಎಂಟ್ರಿ..!

KGF-2 ಅಖಾಡಕ್ಕೆ ಪ್ರಕಾಶ್ ರೈ ಎಂಟ್ರಿ..!

 ರಾಕಿಂಗ್ ಸ್ಟಾರ್ ಯಶ್ ಮತ್ತು ಡೈರೆಕ್ಟರ್ ಪ್ರಶಾಂತ್​ ನೀಲ್ ಕಾಂಬಿನೇಷನ್​​ನಲ್ಲಿ ಬರ್ತಿರೋ ಕನ್ನಡದ ಗೋಲ್ಡನ್ ಫಿಲ್ಮ್ KGF  ಚಾಪ್ಟರ್ 2 ಬಗ್ಗೆ ನಿರೀಕ್ಷೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ರಾಕಿಭಾಯ್ ಟೀಮ್​ಗೆ ಒಬ್ಬರ ಹಿಂದೊಬ್ಬರು ಸ್ಟಾರ್ ನಟರು ಎಂಟ್ರಿ ಕೊಡ್ತಿದ್ದಾರೆ. ಇದೀಗ ಬಹು ಭಾಷಾ ನಟ ಪ್ರಕಾಶ್ ರೈ ಸರದಿ.

ಹೌದು, ಪ್ರಶಾಂತ್ ನೀಲ್ ನಿರ್ದೇಶನದ ಪ್ರಕಾಶ್ ರೈ ಕೆಜಿಎಫ್ 2 ತಂಡ ಸೇರಿಕೊಂಡಿದ್ದಾರೆ. ಶೂಟಿಂಗ್ ಅಖಾಡದಲ್ಲಿನ ಅವರ ಎಕ್ಸ್​ಕ್ಲೂಸಿವ್​ ಫೋಟೋ ಪವರ್ ಟಿವಿಗೆ ಲಭ್ಯವಾಗಿದ್ದು, ಪಾತ್ರದ ಬಗ್ಗೆ ಕುತೂಹಲ ಗರಿಗೆದರಿದೆ.

ಕೆಜಿಎಫ್ ಚಾಪ್ಟರ್ 1ರಲ್ಲಿ ಅನಂತ್ ನಾಗ್ ನಟಿಸಿದ್ದ ಆನಂದ್​​ ಇಂಗಳಗಿ ಪಾತ್ರದಲ್ಲಿ ಪ್ರಕಾಶ್ ರೈ ಕಾಣಿಸಿಕೊಳ್ಳಲಿದ್ದಾರೆ. ಅನಂತ್​ನಾಗ್ ಟೀಮ್​ನಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಪವರ್ ಟಿವಿ ಜೊತೆ ಮಾತನಾಡಿರೋ ಪ್ರೊಡ್ಯೂಸರ್ ವಿಜಯ್ ಕಿರಗಂದೂರ್, ಕೆಜಿಎಫ್ 2ನಲ್ಲಿ ಪ್ರಕಾಶ್ ರೈ ಮತ್ತು ಅನಂತ್ ನಾಗ್ ಇಬ್ಬರೂ ಇರುತ್ತಾರೆ ಅಂತ ತಿಳಿಸಿದ್ದಾರೆ. ಹೀಗಾಗಿ ಈ ಇಬ್ಬರು ಸ್ಟಾರ್ ನಟರ ಪಾತ್ರಗಳ ಬಗ್ಗೆ  ಕುತೂಹಲ ಹೆಚ್ಚಿದೆ. 

ಇನ್ನು 2018ರಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 1 ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಸದ್ದು ಮಾಡಿತ್ತು. ಸಪ್ತಸಾಗರದಾಚೆ ಸೌಂಡು ಮಾಡಿ ಕನ್ನಡದ ಬ್ರ್ಯಾಂಡ್ ವ್ಯಾಲ್ಯುವನ್ನು ಹೆಚ್ಚಿಸಿತ್ತು.  

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments