Saturday, May 28, 2022
Powertv Logo
Homeಸಿನಿಮಾ1000 ಕೋಟಿಗೆ ಕೌಂಟ್​ಡೌನ್.. ಅಮೆರಿಕಾದಲ್ಲಿ ಹವಾ..!

1000 ಕೋಟಿಗೆ ಕೌಂಟ್​ಡೌನ್.. ಅಮೆರಿಕಾದಲ್ಲಿ ಹವಾ..!

ನಾನು ಬರೋವರೆಗೂ ಮಾತ್ರ ಬೇರೆಯವ್ರ ಹವಾ.. ನಾನು ಬಂದ್ಮೇಲೆ ನಂದೇ ಹವಾ. ಈ ಮಾತನ್ನ ಯಶ್ ಅಂದು ಸಿನಿಮಾದಲ್ಲಿ ಹೇಳಿದ್ರು. ಇಂದು ನಿಜ ಜೀವನದಲ್ಲಿ ಮಾಡಿ ತೋರಿಸಿದ್ರು. ಸಾವಿರ ಕೋಟಿಯತ್ತ ಮುನ್ನುಗ್ಗುತ್ತಿರೋ ರಾಕಿಭಾಯ್, ಯುಸ್​​ನಲ್ಲಿ ಕ್ರೇಜ್ ಕಾ ಬಾಪ್ ಆಗಿ ಕಮಾಲ್ ಮಾಡ್ತಿದ್ದಾರೆ.

ಅಬ್ಬಬ್ಬಾ.. ಇದೇನು ಸಿನಿಮಾನಾ ಅಥ್ವಾ ತೂಫಾನಾ..? ಡೈರೆಕ್ಟರ್ ಪ್ರಶಾಂತ್ ನೀಲ್ ಹೈಪ್​ಗೋಸ್ಕರ ತೂಫಾನ್ ಅನ್ನೋ ಸಾಂಗ್ ಇಟ್ರು. ಆದ್ರೆ ಅಕ್ಷರಶಃ ಬಾಕ್ಸ್ ಆಫೀಸ್​ ತೂಫಾನ್ ಆಗಿ ಕಮಾಲ್ ಮಾಡ್ತಿದೆ ಕೆಜಿಎಫ್ ಚಾಪ್ಟರ್ 2. ಯೆಸ್.. ಭಾರತೀಯ ಚಿತ್ರರಂಗದಲ್ಲಿ ನೂತನ ದಾಖಲೆಗಳನ್ನ ಬರೆಯೋ ಮೂಲಕ ರಾಕಿಭಾಯ್ ಎಲ್ಲೆಲ್ಲೂ ರಾಕ್ ಮಾಡ್ತಿದ್ದಾರೆ.

ಕನ್ನಡದ ಕೀರ್ತಿ ಪತಾಕೆ ಎಲ್ಲೆಲ್ಲೂ ಹಾರುವಂತಾಗಿದೆ. ಅದ್ರಲ್ಲೂ ದೇಶ ವಿದೇಶಗಳಲ್ಲಿ ನಮ್ಮ ಯಶ್ ಹವಾ ಸಿಕ್ಕಾಪಟ್ಟೆ ಜೋರಿದೆ. ವಿಶ್ವದ ಸುಮಾರು 75ಕ್ಕೂ ಅಧಿಕ ದೇಶಗಳಲ್ಲಿ ಸಿನಿಮಾ ತೆರೆಕಂಡಿದ್ದು, ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ಹರಿದುಬರ್ತಿವೆ. ಅದ್ರಲ್ಲೂ ಅಮೆರಿಕಾದಲ್ಲಿನ ಕನ್ನಡಿಗರ ಸಂಭ್ರಮಕ್ಕೆ ಪಾರವೇ ಇಲ್ಲ.

ಡಲ್ಲಾಸ್​ ನಲ್ಲಿರೋ ಅನಿವಾಸಿ ಕನ್ನಡಿಗರು, ಕೆಜಿಎಫ್ ಸಿನಿಮಾ, ಯಶ್, ಪ್ರಶಾಂತ್ ನೀಲ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಸೆಲೆಬ್ರೇಷನ್ ವಿಡಿಯೋನ ಹಂಚಿಕೊಂಡು, ನಮ್ಮ ಕೆಜಿಎಫ್ ನಮ್ಮ ಹೆಮ್ಮೆ ಅಂತ ಬೀಗಿದ್ದಾರೆ. ಇಂತಹ ದೃಶ್ಯಗಳು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗನ ಗೌರವ ಹೆಚ್ಚಿಸಲಿವೆ.

ಅಂದಹಾಗೆ ಬಾಕ್ಸ್ ಆಫೀಸ್​ನಲ್ಲಿ ರಾಜಮೌಳಿಯ ಬಾಹುಬಲಿ ಹಾಗೂ ತ್ರಿಬಲ್ ಆರ್ ಸಿನಿಮಾಗಳ ಕೆಲಕ್ಷನ್​ನ ಹಿಂದಿಕ್ಕಿ ರಾಕಿಭಾಯ್ ಮುನ್ನುಗ್ಗಿದ್ದಾರೆ. ಆರೇ ದಿನದಲ್ಲಿ 676 ಕೋಟಿ ವರ್ಲ್ಡ್​ ವೈಡ್ ಕಲೆಕ್ಷನ್ ಮಾಡಿರೋ ಕೆಜಿಎಫ್-2, ಸಾವಿರ ಕೋಟಿಯತ್ತ ನಾಗಾಲೋಟ ಮುಂದುವರೆಸಿದೆ.

ರಾಜಮೌಳಿಯ ಬಾಹುಬಲಿ ಭಾಗ ಒಂದರ ಒಟ್ಟು ಗಳಿಕೆ ಜಸ್ಟ್ 650 ಕೋಟಿ. ಅದನ್ನ ಆರೇ ದಿನದಲ್ಲಿ ಸರಿಗಟ್ಟಿದೆ ನಮ್ಮ ಕೆಜಿಎಫ್ ಸೀಕ್ವೆಲ್. ಇನ್ನು ತ್ರಿಬಲ್ ಆರ್ ಸಿನಿಮಾ ಆರು ದಿನದಲ್ಲಿ 668 ಕೋಟಿ ಗಳಿಸಿತ್ತು. ಆದ್ರೆ ಕೆಜಿಎಫ್ ಆ ರೆಕಾರ್ಡ್​ನ ಸಹ ಬ್ರೇಕ್ ಮಾಡಿ, ಸುನಾಮಿ ಸುಂಟರಗಾಳಿಯಂತೆ ಬಾಕ್ಸ್ ಆಫೀಸ್​ನ ರೂಲ್ ಮಾಡ್ತಿದೆ. ಇದು ಕನ್ನಡ ಚಿತ್ರರಂಗದ ಸುವರ್ಣ ಯುಗ, ರಾಕಿಯುಗ ಅಂದ್ರೂ ತಪ್ಪಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

- Advertisment -

Most Popular

Recent Comments