Home ಸಿನಿ ಪವರ್ ಇದ್ದಕ್ಕಿದ್ದಂತೆ 'ಪೈಲ್ವಾನ್​' ಸುನೀಲ್ ಶೆಟ್ಟಿಗೆ 'ಕೆಜಿಎಫ್​' ನೆನಪಾಗಿದ್ದೇಕೆ?

ಇದ್ದಕ್ಕಿದ್ದಂತೆ ‘ಪೈಲ್ವಾನ್​’ ಸುನೀಲ್ ಶೆಟ್ಟಿಗೆ ‘ಕೆಜಿಎಫ್​’ ನೆನಪಾಗಿದ್ದೇಕೆ?

ಕೆಜಿಎಫ್ .. ಕನ್ನಡದ ಗೋಲ್ಡನ್  ಫಿಲ್ಮ್… ಚಂದನವನದ ಬ್ರಾಂಡ್ ವ್ಯಾಲ್ಯುವನ್ನು ಹೆಚ್ಚಿಸಿದ ಸಿನಿಮಾ. ಸಪ್ತ ಸಾಗರದಾಚೆಗೂ ಸದ್ದು ಮಾಡಿದ ಬಿಗ್ ಬಜೆಟ್ ಮೂವಿ. ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮವನ್ನು ಕೊಟ್ಟ ಸಿನಿಮಾ. ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೇ ಈಗ ಕೆಜಿಎಫ್ ಚಾಪ್ಟರ್ 2 ಸೆಟ್ಟೇರಿದೆ.

ರಾಕಿಂಗ್​ ಸ್ಟಾರ್ ಯಶ್ ಮತ್ತು ‘ಗೋಲ್ಡನ್’ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬಿನೇಷನ್​ನ ಕೆಜಿಎಫ್ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿತ್ತು. ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸೌಂಡು ಮಾಡಿತ್ತು. ಈ ಸಿನಿಮಾದೊಂದಿಗೆ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿರೋದು ಕೂಡ ಇತಿಹಾಸ.

ಈ ಸಿನಿಮಾ ರಿಲೀಸ್ ಆಗಿ ಆರೇಳು ತಿಂಗಳು ಕಳೆದರೂ ರಾಕಿಭಾಯ್ ಹವಾ ಕಮ್ಮಿ ಆಗಿಲ್ಲ. ಎಲ್ಲೆಲ್ಲೂ ಕೆಜಿಎಫ್ ಕೆಜಿಎಫ್ ಕೆಜಿಎಫ್ ಅನ್ನೋ ಮಾತೇ… ಚಾಪ್ಟರ್-2 ಈಗಿನ್ನೂ ಸೆಟ್ಟೇರಿದೆ.. ಈಗಾಗಲೇ ಅದು ಯಾವಾಗ ರಿಲೀಸ್ ಆಗುತ್ತಪ್ಪಾ ಅಂತ ಕಾಯ್ತಿದ್ದಾರೆ ಇಡೀ ವಿಶ್ವದ ಸಿನಿಪ್ರಿಯರು.

ಯಶ್ ಅಭಿಮಾನಿಗಳು ಮಾತ್ರ ಇಂದಿಗೂ ಕೆಜಿಎಫ್ ಮಂತ್ರ ಜಪಿಸ್ತಿಲ್ಲ. ಬದಲಾಗಿ ಪ್ರತಿಯೊಬ್ಬ ಸಿನಿ ಪ್ರಿಯರು ರಾಕಿಭಾಯ್ ರಾಕಿಭಾಯ್ ಅಂತಿದ್ದಾರೆ. ಅದು ಸಿನಿಮಾದ ತಾಕತ್ತು.. ಡೈರಕ್ಟರ್ ಪ್ರಶಾಂತ್ ನೀಲ್ ಪವರ್ ಅಂದ್ರೂ ಅತಿಶಯೋಕ್ತಿ ಅಲ್ಲ.

ಇವತ್ತು ಮತ್ತೆ ಕೆಜಿಎಫ್ ಬಗ್ಗೆ ಮಾತಾಡ್ತಿದ್ದೀವಿ ಅಂದ್ರೆ ಅದಕ್ಕೆ ಕಾರಣ ಬಾಲಿವುಡ್ ಸ್ಟಾರ್..!  ಆ ಸ್ಟಾರ್ ಬೇರಾರು ಅಲ್ಲ.. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್​’ ಅಖಾಡದಲ್ಲಿರುವ ಸುನೀಲ್ ಶೆಟ್ಟಿ..! ಕಾರ್ಯಕ್ರಮವೊಂದರಲ್ಲಿ ಪೈಲ್ವಾನ್ ಗುಣಗಾನ ಮಾಡಿರುವ ಶೆಟ್ರು ಕೆಜಿಎಫ್ ಅನ್ನು ಹಾಡಿ ಹೊಗಳಿದ್ದಾರೆ..!

ಸುದೀಪ್​ ಅವರಿಂದಾಗಿ ಪೈಲ್ವಾನ್ ಒಪ್ಕೊಂಡೆ. ಆಮೇಲೆ ಕಥೆ ಕೇಳಿದೆ ಅಂತ ಹೇಳಿರುವ ಸುನೀಲ್ ಶೆಟ್ಟಿ ಯಶ್ ಅಭಿನಯದ ಕೆಜಿಎಫ್ ಬಗ್ಗೆ ಮೆಚ್ಚುಗೆಯ ನುಡಗಿಗಳನ್ನಾಡಿದ್ದಾರೆ. ಅದರೊಡನೆ ಸ್ಯಾಂಡಲ್​ವುಡ್ಡನ್ನು ಕೊಂಡಾಡಿದ್ದಾರೆ..! ಇದೇ ನಮ್ಮ ಸ್ಯಾಂಡಲ್​ವುಡ್ ತಾಕತ್ತು.

ಇತ್ತೀಚೆಗೆ ಕನ್ನಡ, ಹಿಂದಿ, ತೆಲುಗು, ತಮಿಳು ಸಿನಿಮಾಗಳು ಅನ್ನೋ ಯಾವ್ದೇ ರೀತಿ ಭೇದವಿಲ್ಲ. ಇಡೀ ಭಾರತೀಯ ಚಿತ್ರರಂಗವೇ ಒಂದು. ಯಾವ್ದೇ ಭಾಷೆಯಲ್ಲಿ ಒಳ್ಳೇ ಸಿನಿಮಾ ಬಂದ್ರೆ ಜನ ಅವುಗಳನ್ನ ಗೆಲ್ಲಿಸ್ತಾರೆ ಅಂದ ಸುನೀಲ್ ಶೆಟ್ಟಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾವನ್ನು ಗುಣಗಾನ ಮಾಡಿದ್ರು.

ಕೆಜಿಎಫ್ ಎಲ್ಲೆ ಮೀರಿ ಗೆದ್ದಿದೆ. ಹಿಂದಿ ಚಿತ್ರರಂಗ ಕೂಡ ಕೆಜಿಎಫ್ ಚಾಪ್ಟರ್ 2ಗೆ ವ್ಹೇಟ್ ಮಾಡ್ತಾ ಇದೆ. ಬಾಲಿವುಡ್​ ಮಂದಿ ಕೂಡ ಅವರ ಸಿನಿಮಾ ಅಂತಲೇ ಕೆಜಿಎಫ್​ ಅನ್ನು ಒಪ್ಕೊಂಡಿದ್ದಾರೆ ಅಂತ ಮನಬಿಚ್ಚಿ ಹೇಳಿರುವ ಸುನೀಲ್ ಶೆಟ್ಟಿ ಕನ್ನಡದಲ್ಲಿ ಬಾಲಿವುಡ್​ ಮೀರಿಸುವ ಸಿನಿಮಾಗಳು ಬರ್ತಾ ಇವೆ ಅಂತ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.

ಸದ್ಯ ಸುನೀಲ್ ಶೆಟ್ಟಿ ಸುದೀಪ್​​ ಅಭಿನಯದ ಪೈಲ್ವಾನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಪೈಲ್ವಾನ್ ಸೆಪ್ಟೆಂಬರ್ 12ಕ್ಕೆ ಪಂಚ ಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಒಟ್ನಲ್ಲಿ ಕನ್ನಡ ಸಿನಿಮಾಗಳು ವಿಶ್ವಮಟ್ಟದಲ್ಲಿ ಸದ್ದು ಮಾಡ್ತಿವೆ ಅನ್ನೋದು ಕನ್ನಡಿಗರಿಗೆ ಹೆಮ್ಮೆ.

 

 

 

LEAVE A REPLY

Please enter your comment!
Please enter your name here

- Advertisment -

Most Popular

ಆಧುನಿಕ ಭಗೀರಥ ಕಾಮೇಗೌಡರಿಗೆ ಅನಾರೋಗ್ಯ; ದಿಢೀರ್ ಆಸ್ಪತ್ರೆಗೆ ದಾಖಲು.

ಮಂಡ್ಯ: ಮಂಡ್ಯದ ಕೆರೆ ಕಾಮೇಗೌಡರು ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಪ್ರಶಂಸೆಗೆ ಒಳಪಟ್ಟ ಕೆರೆ ಕಾಮೇಗೌಡರು ದೇಶ ಮಾತ್ರವಲ್ಲ, ವಿಶ್ವದ ಹಲವೆಡೆ...

ಮಳೆ ಮಧ್ಯೆಯೂ ಕರ್ತವ್ಯ ನಿಷ್ಠೆ : ಎಸ್​.ಪಿ ಮೆಚ್ಚುಗೆ

ಬಾಗಲಕೋಟೆ: ಜಿಲ್ಲೆಯ ಕಲಾದಗಿಯಲ್ಲಿ ಗ್ರಾಮದಲ್ಲಿ ಸೋಂಕಿತರು ಹೆಚ್ಚಿದ ಪರಿಣಾಮ ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ಮಳೆ ಮಧ್ಯೆಯೂ ಪೋಲಿಸ ಪೇದೆ ಕತ೯ವ್ಯ ನಿಷ್ಠೆ ಮೆರದ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಸೀಲ್ ಡೌನ್ ಆಗಿರೋ...

ಗಮನ ಸೆಳೆದ ‘ಮಾಸ್ಕ್ ಪರಾಟಾ..!’

ಕರೋನಾದಿಂದ ಬಚಾವಾಗಲು ಇರುವ ಬಹು ಮುಖ್ಯ ಅಸ್ತ್ರ ಎಂದರೆ ಅದು ಫೇಸ್ ಮಾಸ್ಕ್. ಎಲ್ಲರೂ ಫೇಸ್ ಮಾಸ್ಕ್ ಬಳಸಿ ಎಂದು ಸರ್ಕಾರ ಸೇರಿದಂತೆ, ಸಾಕಷ್ಟು ಮಂದಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇಲ್ಲೊಂದು ಹೊಟೆಲ್...

ಚಾರ್ಮಾಡಿ ಘಾಟ್​​ನಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ

ಚಿಕ್ಕಮಗಳೂರು : ಮಂಗಳೂರು-ಚಿಕ್ಕಮಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಕುಸಿಯುವ ಭೀತಿ ಎದುರಾಗಿದ್ದು ಇದನ್ನು ತಪ್ಪಿಸಲು ಘಾಟ್ ನಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7...

Recent Comments