Home ಸಿನಿ ಪವರ್ ಮತ್ತೆ ರಾಕಿಭಾಯ್ ಅಬ್ಬರ ಶುರು - ನವೆಂಬರ್​ನಲ್ಲಿ ಕೆಜಿಎಫ್ ಹವಾ!

ಮತ್ತೆ ರಾಕಿಭಾಯ್ ಅಬ್ಬರ ಶುರು – ನವೆಂಬರ್​ನಲ್ಲಿ ಕೆಜಿಎಫ್ ಹವಾ!

ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಪಂಚ ಭಾಷೆಗಳಲ್ಲಿ ಸದ್ದು ಮಾಡಿದ ಸಿನಿಮಾ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಸಪ್ತ ಸಾಗರದಾಚೆಗೂ ಸೌಂಡು ಮಾಡಿತ್ತು. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ರಾಕಿಂಗ್ ಸ್ಟಾರ್ ಯಶ್​ ರನ್ನು ನ್ಯಾಷನಲ್ ಸ್ಟಾರ್ ಮಾಡಿತು. ಕೆಜಿಎಫ್ ರಿಲೀಸ್ ಆದ ಬಳಿಕ ಪರಭಾಷಾ ಮಾಧ್ಯಮಗಳು ಯಶ್ ಅವರನ್ನು ಕೆಜಿಎಫ್ ಸ್ಟಾರ್ ಎಂದೇ ಕರೆಯುತ್ತಿವೆ.
ಕನ್ನಡದ ಬ್ರಾಂಡ್​ ವ್ಯಾಲ್ಯುವನ್ನು ಹೆಚ್ಚಿಸಿದ ಕನ್ನಡದ ಗೋಲ್ಡನ್ ಫಿಲ್ಮ್​ ಕೆಜಿಎಫ್​ನ ಚಾಪ್ಟರ್ 2 ಚಿತ್ರೀಕರಣ ನಡೀತಾ ಇದೆ. ಈ ನಡುವೆ ಚಾಪ್ಟರ್ 1 ರೀ ರಿಲೀಸ್ ಆಗುವ ಸುದ್ದಿ ಬಂದಿದೆ. ನವೆಂಬರ್ 1ರಂದು ಕೆಜಿಎಫ್ ಚಾಪ್ಟರ್ 1 ರೀ ರಿಲೀಸ್ ಆಗ್ತಿದೆ.
ಹೌದು ಹೊಂಬಾಳೆ ಫಿಲ್ಮ್ಸ್​ನ ಕಾರ್ತಿಕ್ ಗೌಡ ಟ್ವೀಟ್ ಮೂಲಕ ಈ ವಿಷಯ ತಿಳಿಸಿದ್ದಾರೆ. ಸಿನಿಮಾ 25 ರಿಂದ 30 ಥಿಯೇಟರ್​ಗಳಲ್ಲಿ ತೆರೆ ಕಾಣಲಿದೆ. ಬೆಂಗಳೂರಿನ ಊರ್ವಶಿ, ಕಾವೇರಿ, ಗೋಪಾಲನ್ ಆರ್ಚ್​, ಸಂಧ್ಯಾ ಮಾನಸ ಸೇರಿದಂತೆ ರಾಜ್ಯದ ನಾನಾ ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments