ನಾತಿಚರಾಮಿಗೆ 5, ಕೆಜಿಎಫ್​ಗೆ 2 ರಾಷ್ಟ್ರಪ್ರಶಸ್ತಿ – ಸ್ಯಾಂಡಲ್​​ವುಡ್ ಐತಿಹಾಸಿಕ ಸಾಧನೆ

0
433

65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಈ ಬಾರಿ ಕನ್ನಡ ಚಿತ್ರರಂಗ ಬರೋಬ್ಬರಿ 11 ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದೆ.
ನಟಿ ಶೃತಿ ಹರಿಹರನ್​​ ಅಭಿನಯಿಸಿರುವ ನಾತಿಚರಾಮಿ ಚಿತ್ರ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿಯನ್ನು ತನ್ನತೆಕ್ಕೆಗೆ ಹಾಕಿಕೊಂಡರೆ, ಭಾರತೀಯ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿ ಕನ್ನಡ ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದಿದ್ದ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​​ ಸಿನಿಮಾ ಬೆಸ್ಟ್​ ಆ್ಯಕ್ಷನ್​​ ಫಿಲ್ಮ್​ ಅವಾರ್ಡ್​​ ಪಡೆದಿದೆ. ಇನ್ನು ಸ್ಯಾಂಡಲ್​​​​ವುಡ್​ನಲ್ಲಿ ಭರ್ಜರಿ ಸೌಂಡ್​ ಮಾಡಿದ್ದ ರಿಷಬ್​ ಶೆಟ್ಟಿ ನಿರ್ದೇಶನದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾವೂ ಅತ್ಯತ್ತಮ ಮಕ್ಕಳ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ.

ಪ್ರಶಸ್ತಿ ಪಟ್ಟಿ
1 ಅತ್ಯುತ್ತಮ ಪ್ರಾದೇಶಿಕ ಚಿತ್ರ – ನಾತಿಚರಾಮಿ
2 ಅತ್ಯುತ್ತಮ ಸಾಹಸ ಚಿತ್ರ – ಕೆಜಿಎಫ್
3 ಅತ್ಯುತ್ತಮ ಮಹಿಳಾ ಗಾಯಕಿ- ಬಿಂದು ಮಾಲಿನಿ(ನಾತಿಚರಾಮಿ)
4 ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ – ನಾತಿಚರಾಮಿ
5 ಅತ್ಯುತ್ತಮ ಸಂಕಲನ – ನಾತಿಚರಾಮಿ
6 ಅತ್ಯುತ್ತಮ ವಿಎಫ್ ಎಕ್ಸ್ ಚಿತ್ರ – ಕೆಜಿಎಫ್
7ಅತ್ಯುತ್ತಮ ರಾಷ್ಟ್ರೀಯ ಏಕತಾ ಚಿತ್ರ – ಒಂದಲ್ಲ, ಎರಡಲ್ಲ
8 ಅತ್ಯುತ್ತಮ ಬಾಲ ಕಲಾವಿದ – ಒಂದಲ್ಲ, ಎರಡಲ್ಲ
9 ಅತ್ಯುತ್ತಮ ಮಕ್ಕಳ ಚಿತ್ರ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
10 ಅತ್ಯುತ್ತಮ ರಾಷ್ಟ್ರೀಯ ಆಕ್ರ್ಸೂಸ್ ಚಿತ್ರ – ಮೂಕಜ್ಜಿಯ ಕನಸುಗಳು
11 ವಿಶೇಷ ಪ್ರಶಸ್ತಿ-ಶೃತಿ ಹರಿಹರನ್​​(ನಾತಿಚರಾಮಿ)

LEAVE A REPLY

Please enter your comment!
Please enter your name here