Home ಸಿನಿ ಪವರ್ ಮತ್ತೆ ಅಖಾಡಕ್ಕೆ ಇಳಿದೇ ಬಿಟ್ರು ರಾಕಿ ಭಾಯ್...!

ಮತ್ತೆ ಅಖಾಡಕ್ಕೆ ಇಳಿದೇ ಬಿಟ್ರು ರಾಕಿ ಭಾಯ್…!

ಕನ್ನಡದ ಗೋಲ್ಡನ್ ಫಿಲ್ಮ್​ ‘ಕೆಜಿಎಫ್’​​ನಿಂದ ಸಪ್ತಸಾಗರದಾಚೆಗೂ ಸೌಂಡು ಮಾಡಿದ್ದ ರಾಕಿ ಭಾಯ್ ಚಾಪ್ಟರ್ 2 ಮೂಲಕ ಮತ್ತೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಬಹುನಿರೀಕ್ಷಿತ ‘ಕೆಜಿಎಫ್-2’ ಶೂಟಿಂಗ್​ ಆರಂಭವಾಗಿದೆ. ರಾಕಿ ಭಾಯ್ ಅವತಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಟ್ಟಾಗಿದೆ… ಇನ್ನೇನೇ ಇದ್ರು ರಾಕಿ ಭಾಯ್ ಯದ್ದೇ ಸದ್ದು ಅಂತಿದ್ದಾರೆ ಫ್ಯಾನ್ಸ್..! ಈ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ. ನೋಡ್ಕೊಂಡು ಬರೋಣ ಬನ್ನಿ.ಯೆಸ್​​, ಕೆಜಿಎಫ್… ಕನ್ನಡದ ಗೋಲ್ಡನ್ ಫಿಲ್ಮ್..! ಸ್ಯಾಂಡಲ್​ ವುಡ್​ ನ ಬ್ರಾಂಡ್​ ವ್ಯಾಲ್ಯುವನ್ನು ಬಹು ಎತ್ತರಕ್ಕೆ ಕೊಂಡೊಯ್ದ ಬಿಗ್ ಬಜೆಟ್​ ಸಿನಿಮಾ. ಈ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ರಾಕಿ ಭಾಯ್ ಆಗಿ ಸಿಕ್ಕಾಪಟ್ಟೆ ಪಾಪ್ಯುಲರ್ ಆದ್ರು. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲೂ ಸಿನಿಮಾ ರಿಲೀಸ್​ ಆಗಿ ಸಖತ್ ಸದ್ದು ಮಾಡಿ ಬಿಟ್ಟಿತ್ತು. ಅಷ್ಟೇ ಏಕೆ ವಿದೇಶಗಳಲ್ಲೂ ರಾಕಿ ಭಾಯ್ ಧೂಳೆಬ್ಬಿಸಿ ಬಿಟ್ಟಿದ್ರು. ಇದ್ರೊಂದಿಗೆ ಪರ ರಾಜ್ಯಗಳಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಯಶ್​ಗೆ ಫ್ಯಾನ್ಸ್ ಹುಟ್ಟಿಕೊಂಡ್ರು. ಕನ್ನಡದ ಹೆಮ್ಮೆಯ ಮನೆಮಗ ಯಶ್ ನ್ಯಾಷನಲ್ ಸ್ಟಾರ್​ ಆಗಿದ್ದು ಇದೇ ಕೆಜಿಎಫ್​ನಿಂದ..!
ತಮ್ಮ ಚೊಚ್ಚಲ ಸಿನಿಮಾ ‘ಉಗ್ರಂ’ ನಲ್ಲೇ ಸಿಕ್ಕಾಪಟ್ಟೆ ಭರವಸೆ ಮೂಡಿಸಿದ್ದ ಡೈರೆಕ್ಟರ್ ಪ್ರಶಾಂತ್ ನೀಲ್ ಅವರ 2ನೇ ಸಿನಿಮಾವೇ ಈ ಕೆಜೆಎಫ್ ಅನ್ನೋ ಗೋಲ್ಡನ್ ಮೂವಿ. ಈ ಸಿನಿಮಾದಿಂದ ಡೈರೆಕ್ಟರ್ ನೀಲ್ ಸ್ಯಾಂಡಲ್​ ವುಡ್ ಆಚೆಗೆ ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾಗಿ ಬಿಟ್ರು.
 ರವಿ ಬಸ್ರೂರು ಅವರ ಸಂಗೀತ, ಭುವನ್​ ಗೌಡ ಅವರ ಕ್ಯಾಮೆರಾ ಕೈ ಚಳಕ ಚಿತ್ರದ ಯಶಸ್ಸಿನಲ್ಲಿ ಬಹುದೊಡ್ಡ ಪಾತ್ರವನ್ನು ನಿಭಾಯಿಸಿತ್ತು ಅನ್ನೋದು ಕೂಡ ನೆನಪಿಸಿಕೊಳ್ಳಬೇಕಾದ ವಿಚಾರವೇ. ಅದೇರೀತಿ ನಾಯಕಿ ಶ್ರೀನಿಧಿ ಶೆಟ್ಟಿ, ಖಳನಟರಾಗಿ ಅಬ್ಬರಿಸಿದ ನಟರು, ಸಹಕಲಾವಿದರು, ಟೆಕ್ನಿಕಲ್ ಡಿಪಾರ್ಟ್ಮೆಂಟ್ ಸೇರಿದಂತೆ ಇಡೀ ತಂಡದ ಶ್ರಮ ಕೆಜಿಎಫ್ ಯಶಸ್ಸಿನ ಬೆನ್ನಿಗಿತ್ತು.
ಇವೆಲ್ಲದರ ಜೊತೆಗೆ ಚಿತ್ರದ ಯಶಸ್ಸನ್ನು ಇನ್ನೊಬ್ಬ ರಿಯಲ್ ಹೀರೊ ಪ್ರೊಡ್ಯೂಸರ್ ವಿಜಯ್ ಕಿರಗಂದೂರ್ ಅವರಿಗೆ ನೀಡಬೇಕು. ನೀಲ್ ಮತ್ತು ಯಶ್ ಕಾಂಬಿನೇಷನ್​ನ ಕೆಜಿಎಫ್​ಗೆ ಬಂಡವಾಳ ಹಾಕಿ ಕನ್ನಡದಕ್ಕೊಂದು ಗೋಲ್ಡನ್ ಸಿನಿಮಾ ಕೊಟ್ಟ ಖ್ಯಾತಿ ನಿರ್ಮಾಪಕರದ್ದು.
ಇವತ್ತು ಮತ್ತೆ ಕೆಜಿಎಫ್​ ಮತ್ತು ಆ ಟೀಮ್ ಬಗ್ಗೆ ಮಾತಾಡೋಕೆ ಕಾರಣ.. ಕೆಜಿಎಫ್ -2 ಶೂಟಿಂಗ್ ಶುರುವಾಗಿರೋದು. ಯಾವತ್ತು ಕೆಜಿಎಫ್ ರಿಲೀಸ್ ಆಯ್ತೋ… ಅವತ್ತಿನಿಂದಲೇ ಕೆಜಿಎಫ್ ಚಾಪ್ಟರ್ 2 ಬಗ್ಗೆ ಕುತೂಹಲ ಗರಿಗೆದರಿದೆ. ಚಿತ್ರತಂಡ ಚಾಪ್ಟರ್ 1 ಕೇವಲ ಟ್ರೇಲರ್ ಮಾತ್ರ ರಿಯಲ್ ಮೂವಿ ಇರೋದು ಚಾಪ್ಟರ್ 2 ನಲ್ಲಿ ಅಂತ ಅವತ್ತೇ ಹೇಳಿತ್ತು.. 2018 ಡಿಸೆಂಬರ್ 21ರಂದು ವರ್ಲ್ಡ್​ ವೈಡ್​ ಟ್ರೇಲರ್ ರಿಲೀಸ್ ಮಾಡಿದ್ದ ಕೆಜಿಎಫ್ ಟೀಮ್ ಚಾಪ್ಟರ್-2ನಲ್ಲಿ ಸಿನಿಮಾ ಹೇಳೋಕೆ ಬರ್ತಿದೆ.
ನಿರೀಕ್ಷೆ ಹುಟ್ಟಿಸಿರೋ ಕೆಜಿಎಫ್ ಚಾಪ್ಟರ್ 2 ಸೆಟ್ಟೇರಿದೆ. ನಿನ್ನೆಯಿಂದ ಶೂಟಿಂಗ್ ಶುರುಮಾಡಿದೆ ನೀಲ್ & ಟೀಮ್. ಬೆಂಗಳೂರಿನ ನೈಸ್​ ರೋಡ್​ನಲ್ಲಿ ಒಂದಿಷ್ಟು ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಯಶ್ ಶೂಟಿಂಗ್ ಅಖಾಡಕ್ಕೆ ಇಳಿದಾಗಿದೆ. ಹೀಗಾಗಿ ಇನ್ನೇನೆ ಇದ್ರೂ ರಾಕಿಂಗ್ ಸ್ಟಾರ್ ರಾಕಿ ಭಾಯ್​ ಅವರದ್ದೇ ಸದ್ದು ಅಂತಿದ್ದಾರೆ ಫ್ಯಾನ್ಸ್. 
ಇನ್ನು ಚಾಪ್ಟರ್ 2ನ ಕೆಲವು ಪಾತ್ರಗಳಿಗೆ ಆಡಿಷನ್ ನಡೆಸಿದಾಗ ಸುಮಾರು 5 ಸಾವಿರ ಮಂದಿ ಗಡ್ಡದಾರಿ ಕಲಾವಿದರು ಭಾಗವಹಿಸಿದ್ದನ್ನು ಈ ವೇಳೆ ಸ್ಮರಿಸಬಹುದು. ಜೊತೆಗೆ ಬಾಲಿವುಡ್​ ನಟ ಸಂಜಯ್ ದತ್​​ ಕೂಡ ಕೆಜಿಎಫ್ ಟೀಮ್ ಸೇರಿಕೊಳ್ಳಲಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸ್ತಾರೆ ಅಂತ ಹೇಳಲಾಗ್ತಿದೆ.
 ಒಟ್ಟಿನಲ್ಲಿ ಕೆಜಿಎಫ್ ಚಾಪ್ಟರ್ 2 ಸೆಟ್ಟೇರಿದೆ. ರಾಕಿ ಭಾಯ್ ಹವಾ ಮತ್ತೆ ಕ್ರಿಯೇಟ್ ಆಗಿದೆ. ಚಿತ್ರದ ಮೇಲಿ ನಿರೀಕ್ಷೆ ಬೆಟ್ಟದಷ್ಟಿದೆ. ಚಾಪ್ಟರ್ 2 ಯಾವಾಗ ಬರುತ್ತಪ್ಪಾ ಅಂತ ಯಶ್ ಫ್ಯಾನ್ಸಂತೂ ಸಿಕ್ಕಾಪಟ್ಟೆ ಕುತೂಹಲದಿಂದ ಕಾಯ್ತಿದ್ದಾರೆ. ಚಿತ್ರತಂಡ ಟ್ರೇಲರ್ ಅಂತ ಕರೆದಿರೋ ಚಾಪ್ಟರ್ ಒನ್ನೇ ಆ ಲೆವೆಲ್ಲಿಗೆ ಇತ್ತು ಅಂತಾದ್ರೆ ಇನ್ನು ಅಸಲಿ ಸಿನಿಮಾ ಚಾಪ್ಟರ್ 2 ಹೇಗಿರ ಬೇಡ? ನೀವೇ ಯೋಚ್ನೆ ಮಾಡಿ… ಎನಿವೇ ಕನ್ನಡದ ಗೋಲ್ಡನ್ ಫಿಲ್ಮ್ ಚಾಪ್ಟರ್ 2 ಗೆ ಚಾಪ್ಟನ್ 1ಗಿಂಥಾ ದೊಡ್ಡ ಯಶಸ್ಸು ಸಿಗಲಿ… ಕನ್ನಡ ಸಿನಿಮಾಗಳ ಸೌಂಡು ಇನ್ನೂ ಹೆಚ್ಚಾಗಲಿ ಅಂತ ಪ್ರೀತಿಯಿಂದ ಆಶಿಸೋಣ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments