Sunday, May 29, 2022
Powertv Logo
HomeಸಿನಿಮಾOTTಯಲ್ಲಿ ​'ಕೆಜಿಎಫ್​​ ಚಾಪ್ಟರ್​​ 2' : ರಿಲೀಸ್​​ಗೆ ಡೇಟ್​​ ಫಿಕ್ಸ್​​

OTTಯಲ್ಲಿ ​’ಕೆಜಿಎಫ್​​ ಚಾಪ್ಟರ್​​ 2′ : ರಿಲೀಸ್​​ಗೆ ಡೇಟ್​​ ಫಿಕ್ಸ್​​

ಇಡೀ ವಿಶ್ವವೇ ಅಚ್ಚರಿಯಿಂದ ನೋಡುವಂತೆ ಮಾಡಿದ ಕನ್ನಡದ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ -2 ಸಿನಿಮಾ. ಇದಕ್ಕಾಗಿಯೇ ಅಭಿಮಾನಿಗಳು ಸಹ ಕಾದು ಕೂತಿದ್ದರು. ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಚಿತ್ರ ತನ್ನದೇ ಆದ ವಿಶೇಷತೆಗಳಿಂದಾಗಿ ಈಗಾಗ್ಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಭಾರತೀಯ ಚಿತ್ರರಂಗದ ಹೊಸ ಚಾಪ್ಟರ್ ಅಂತಲೇ ಎಲ್ಲರೂ ಮಾತಾಡ್ತಿದ್ದಾರೆ. ವಿಶ್ವದ 75ಕ್ಕೂ ಅಧಿಕ ದೇಶಗಳಲ್ಲಿ ಸುಮಾರು 10 ಸಾವಿರದ ಆರನೂರಕ್ಕೂ ಅಧಿಕ ಸ್ಕ್ರೀನ್ಸ್​ನಲ್ಲಿ 45 ಸಾವಿರ ಶೋಗಳಿಂದ ಬಿಗ್ ಸ್ಕ್ರೀನ್​​ಗಳಲ್ಲಿ ತೆರೆಕಂಡು ಸಿನಿಪ್ರಿಯರ ಮನ ಗೆದ್ದಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ KGF-2 ಚಿತ್ರ ಹಿಂದಿ ವರ್ಷನ್ ಮಾತ್ರದಿಂದಲೇ 7 ದಿನಗಳಲ್ಲಿ 255 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ KGF-2 ಹೊಸ ದಾಖಲೆ ನಿರ್ಮಿಸಿದೆ. ಆ ಮೂಲಕ ‘ಬಾಹುಬಲಿ’, ‘ದಂಗಲ್’, ‘ಸಂಜು’, ‘ಟೈಗರ್ ಝಿಂದಾ ಹೈ’ ದಾಖಲೆಗಳನ್ನು KGF-2 ಚಿತ್ರ ಧೂಳಿಪಟ ಮಾಡಿದೆ.

ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ KGF-2 ಚಿತ್ರ ಇದೀಗ ಒಟಿಟಿ ವೇದಿಕೆಗೆ ಕಾಲಿಡಲಿದೆ. KGF-2ಚಿತ್ರದ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ಖರೀದಿಸಿದೆ. ವರದಿಗಳ ಪ್ರಕಾರ, ಮೇ 27 ರಿಂದ ಅಮೇಜಾನ್ ಪ್ರೈಮ್‌ನಲ್ಲಿ ‘ಕೆಜಿಎಫ್: ಚಾಪ್ಟರ್ 2’ ಚಿತ್ರವನ್ನು ನೋಡಬಹುದು.

- Advertisment -

Most Popular

Recent Comments