ಕೆ ಜಿ ಎಫ್ – ಕನ್ನಡದ ಗೋಲ್ಡನ್ ಫಿಲ್ಮ್..! 2018ರಲ್ಲಿ ತೆರೆಕಂಡ ಈ ಪ್ಯಾನ್ ಇಂಡಿಯಾ ಸಿನಿಮಾ ಬರೀ ಸ್ಯಾಂಡಲ್ವುಡ್ನಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಚರಿತ್ರೆ ಸೃಷ್ಟಿಸಿದ ಪಕ್ಕಾ ಕನ್ನಡ ಮಣ್ಣಿನ ಸಿನಿಮಾ,,! ತಮ್ಮ ಚೊಚ್ಚಲ ಮೂವಿ ‘ಉಗ್ರಂ’ನಲ್ಲಿ ಸಖತ್ ಭರವಸೆ ಮೂಡಿಸಿದ್ದ ಡೈರೆಕ್ಟರ್ ಪ್ರಶಾಂತ್ ನೀಲ್ ಅವರ ಎರಡನೇ ಸಿನಿಮಾವೇ ಕೆಜಿಎಫ್..!
ಕನ್ನಡದ ಜೊತೆ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂನಲ್ಲಿ ರಿಲೀಸ್ ಆದ ಸಿನಿಮಾ ಸಪ್ತ ಸಾಗರದಾಚೆಗೂ ಭರ್ಜರಿ ಸೌಂಡು ಮಾಡಿದ ಕೆಜಿಎಫ್ನಿಂದ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆದ್ರು. ಸಿನಿಮಾ ಗೆಲ್ಲೋದರ ಜೊತೆಗೆ ಸ್ಯಾಂಡಲ್ವುಡ್ ಬ್ರ್ಯಾಂಡ್ ವ್ಯಾಲ್ಯು ಕೂಡ ಹೆಚ್ಚಿತು. ಇದೀಗ ಸದ್ಯ ಕೆಜಿಎಫ್ ಮುಂದುವರೆದ ಭಾಗದ್ದೇ ಸದ್ದು… ಅರ್ಥಾತ್ ಶುರುವಾಗಿದೆ ಕೆಜಿಎಫ್ ಚಾಪ್ಟರ್ 2 ಹವಾ..!
ಕೆಜಿಎಫ್ ಸಕ್ಸಸ್ ಬೆನ್ನಲ್ಲೇ ಪ್ರೊಡ್ಯೂಸರ್ ವಿಜಯಕಿರಗಂದೂರ್ ಕೆಜಿಎಫ್ -2 ಸಾಹಸಕ್ಕೆ ಕೈ ಹಾಕಿದ್ರು. ಸಿನಿಮಾ ಶೂಟಿಂಗ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಈಗಾಗಲೇ ಸಂಜಯ್ ದತ್ ಎಂಟ್ರಿ ಸೇರಿದಂತೆ ಹತ್ತಾರು ವಿಚಾರವಾಗಿ ಸಿಕ್ಕಾಪಟ್ಟೆ ಸೌಂಡು ಮಾಡ್ತಿರೋ ಕೆಜಿಎಫ್ನಿಂದ ಮತ್ತೊಂದು ಸೂಪರ್ ನ್ಯೂಸ್ ಬಂದಿದೆ..!
ಕೆಜಿಎಫ್ನ ರಾಕಿಭಾಯ್ಗೆ ಡೆತ್ವಾರೆಂಟ್ ಕೊಡೋಕೆ ಬಾಲಿವುಡ್ನ ಸ್ಟಾರ್ ನಟಿ ರಂಗಪ್ರವೇಶಿಸಿದ್ದಾರೆ ಅನ್ನೋದು ಕೆಜಿಎಫ್-2ನ ಸದ್ಯದ ಹಾಟ್ ನ್ಯೂಸ್! ಆ ನಟಿ ಬೇರಾರು ಅಲ್ಲ.. ಬಿ ಟೌನ್ನ ಬ್ಯೂಟಿ ರವೀನಾ ಟಂಡನ್!
ಯೆಸ್, ಕೆಜಿಎಫ್ ರಾಕಿಭಾಯ್ಗೆ ಡೆತ್ ವಾರೆಂಟ್ ನೀಡಲು ರವೀನಾ ಟಂಡನ್ ಬಂದಿದ್ದಾರೆ. ಶೂಟಿಂಗ್ ಕ್ಲೈಮ್ಯಾಕ್ಸ್ ಹಂತದಲ್ಲಿರುವಾಗ ಚಿತ್ರತಂಡ ಈ ಸುದ್ದಿಯನ್ನು ರಿವೀಲ್ ಮಾಡಿದೆ. ಕೆಜಿಎಫ್ ಅಂಗಳಕ್ಕೆ ರವೀನಾ ಗ್ರ್ಯಾಂಡ್ ಎಂಟ್ರಿ ಬಗ್ಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಖುಷಿ ಹಂಚಿಕೊಂಡಿದ್ದಾರೆ.
ರವೀನಾ ಜೊತೆಗಿರೋ ಫೋಟೋವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿರೋ ಸ್ಟಾರ್ ಡೈರಕ್ಟರ್ ನೀಲ್, ”ಮೋಸ್ಟ್ ಎನರ್ಜಿಟಿಕ್ ರವೀನಾ ಟಂಡನ್ ಅವರಿಗೆ ಕೆಜಿಎಫ್ -2ಗೆ ಸ್ವಾಗತ. ಡೆತ್ ವಾರೆಂಟ್ ಜಾರಿ ಮಾಡೋ ಲೇಡಿ ಬಂದಿದ್ದಾಳೆ” ಅಂತ ತಿಳಿಸಿದ್ದಾರೆ.
ಹೀಗೆ ಕೆಜಿಎಫ್ -2ಗೆ ರವೀನಾ ಟಂಡನ್ ಎಂಟ್ರಿಯಾಗಿದ್ದು, ಚಿತ್ರಕ್ಕೆ ಮತ್ತೊಂದು ಬಲ ಸಿಕ್ಕಂತಾಗಿದೆ. ಅಲ್ಲದೆ ಚಿತ್ರದ ಮೇಲಿನ ನಿರೀಕ್ಷೆ ಕೂಡ ಬೆಟ್ಟದಷ್ಟಾಗಿದ್ದು… ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಂತೂ ಚಾಪ್ಟರ್ -2 ರಿಲೀಸ್ಗೆ ವ್ಹೇಟ್ ಮಾಡ್ತಿದ್ದಾರೆ.
The lady who issues the death warrant has arrived!!!
A warm welcome to you @TandonRaveena mam. #RamikaSen In the building. #KGFChapter2 pic.twitter.com/5MTmhz3D8z
— Prashanth Neel (@prashanth_neel) February 9, 2020