Sunday, May 29, 2022
Powertv Logo
HomeಸಿನಿಮಾRCB ಬಾಯ್ಸ್​ಗೆ ಮುಂಬೈನಲ್ಲಿ ರಾಕಿಭಾಯ್ ದರ್ಶನ

RCB ಬಾಯ್ಸ್​ಗೆ ಮುಂಬೈನಲ್ಲಿ ರಾಕಿಭಾಯ್ ದರ್ಶನ

ಬ್ರ್ಯಾಂಡ್ ಲಾಯಾಲ್ಟಿಗೆ ಆರ್​ಸಿಬಿ ಎಷ್ಟು ಫೇಮಸ್ಸೋ, ಅಷ್ಟೇ ದೊಡ್ಡ ಮಟ್ಟಕ್ಕೆ ಟ್ರೆಂಡ್ ಜೊತೆ ಬ್ರ್ಯಾಂಡ್ ಆಗಿ ಕಮಾಲ್ ಮಾಡ್ತಿದೆ ಕೆಜಿಎಫ್. ಯೆಸ್.. ವಿಶ್ವದಾದ್ಯಂತ ಇಂಡಿಯನ್ ಸಿಇಓ ರಾಕಿಭಾಯ್ ಆರ್ಭಟಿಸ್ತಿದ್ದಾರೆ. ಇದೀಗ ಆರ್​ಸಿಬಿ ಟೀಂಗೆ ಮುಂಬೈನಲ್ಲಿ ದರ್ಶನ ನೀಡೋ ಮೂಲಕ ಕರುನಾಡ ಚಿನ್ನದ ಕಥೆಯನ್ನ ಸಾರಿದೆ ಹೊಂಬಾಳೆ ಫಿಲಂಸ್.

ಕಲೆ ಅನ್ನೋದು ಯಾರಪ್ಪನ ಸ್ವತ್ತೂ ಅಲ್ಲ. ಅದನ್ನ ಹಗಲಿರುಳು ಆರಾಧಿಸೋನಿಗೆ ಒಲಿದೇ ಒಲಿಯುತ್ತೆ. ಉಸಿರಲ್ಲೂ ಅದನ್ನೇ ಜೀವಿಸೋನ ಕೈ ಹಿಡಿದೇ ಹಿಡಿಯುತ್ತೆ. ಇದಕ್ಕೆ ಯಶ್ ಹಾಗೂ ಪ್ರಶಾಂತ್ ನೀಲ್​ಗಿಂತ ಬೆಸ್ಟ್ ಲೈವ್ ಎಗ್ಸಾಂಪಲ್ ಬೇರಾರೂ ಇಲ್ಲ. ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಶ್ರೇಯ ಇವರುಗಳ ತಪಸ್ಸಿಗೆ ಸಲ್ಲುತ್ತೆ.

ಇಂಡಿಯನ್ ಸಿಇಓ ಆಗಿ ಇಡೀ ವಿಶ್ವ ಸಿನಿದುನಿಯಾನ ಆಳ್ತಿದ್ದಾರೆ ನ್ಯಾಷನಲ್ ಸ್ಟಾರ್ ಯಶ್. ದೇಶದ ಪ್ರತಿ ಮೂಲೆಗೂ ತಲುಪಿದ್ದಾರೆ ಯಶ್. ವರ್ಲ್ಡ್​ ಈಸ್ ಮೈ ಟೆರಿಟರಿ ಅಂತ ಹೇಳಿದ್ಮೇಲೆ ಮುಗೀತು. ಜಗತ್ತಿನ 75ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಬಾಕ್ಸ್ ಆಫೀಸ್ ರೂಲ್ ಮಾಡ್ತಿದ್ದಾರೆ. ಅವ್ರ ಸ್ಟೈಲು, ಮ್ಯಾನರಿಸಂ ಒಂದು ತೂಕವಾದ್ರೆ, ಮೇಕಿಂಗ್ ಮತ್ತೊಂದು ತೂಕವಾಗಿ ಕೆಜಿಎಫ್ ಕಮಾಲ್ ಮಾಡ್ತಿದೆ.

ಕ್ರಿಕೆಟರ್ ವಾರ್ನರ್ ನಮ್ಮ ರಾಕಿಭಾಯ್ ವಯಲೆನ್ಸ್ ಡೈಲಾಗ್ ಹೊಡೆದು ಅಚ್ಚರಿ ಮೂಡಿಸಿದ್ರು. ಇದೀಗ ಏಕ್ದಮ್ ಟೀಂ ಆರ್​ಸಿಬಿ, ಕೆಜಿಎಫ್ ಸಿನಿಮಾ ನೋಡಿ ಸಂಭ್ರಮಿಸಿದೆ. ಹೌದು.. ಮುಂಬೈನಲ್ಲಿ ಬಯೋ ಬಬಲ್​ನಲ್ಲೇ ಫಾಪ್ ಡುಪ್ಲೆಸ್ಸಿಸ್ ಬಾಯ್ಸ್ ರಾಕಿಭಾಯ್​ ದರ್ಶನ ಪಡೆದು ಥ್ರಿಲ್ ಆಗಿದ್ದಾರೆ.

ಹೊಂಬಾಳೆ ಫಿಲಂಸ್ ರೀಸೆಂಟ್ ಆಗಿ ಆರ್​ಸಿಬಿ ಜೊತೆ ಅಫಿಶಿಯಲಿ ಟಯಪ್ ಆಗಿತ್ತು. ಇದೀಗ ಟೀಂಗೆ ಸ್ಪೆಷಲ್ ಶೋ ಆರ್ಗನೈಸ್ ಮಾಡಿ, ಅಚ್ಚರಿ ಮೂಡಿಸಿದೆ. ಕೊಹ್ಲಿ, ಮ್ಯಾಕ್ಸ್​ವೆಲ್, ದಿನೇಶ್ ಕಾರ್ತಿಕ್ ಸೇರಿದಂತೆ ನಮ್ಮ ಇಂಡಿಯನ್ ಪ್ಲೇಯರ್ಸ್​ ಜೊತೆ ಇಂಟರ್ ನ್ಯಾಷನಲ್ ಸ್ಟಾರ್ ಕ್ರಿಕೆಟರ್ಸ್​ ಕೂಡ ನಮ್ಮ ಕೋಲಾರದ ಬಂಗಾರದ ಕಥೆಗೆ ಎಗ್ಸೈಟ್ ಆಗಿದ್ದಾರೆ.

ಕೆಜಿಎಫ್ ರಿಲೀಸ್​ನಿಂದ ಬಾಕ್ಸ್ ಆಫೀಸ್​ನಲ್ಲಿ ಸುನಾಮಿಯ ಅಲೆ ಎದ್ದಿದೆ. ಹಿಂದಿ ಅವತರಣಿಕೆ ಒಂದರಲ್ಲೇ ನಾಲ್ಕು ದಿನದಲ್ಲಿ ಬರೋಬ್ಬರಿ 200 ಕೋಟಿ ಗಳಿಸೋ ಮೂಲಕ ರಾಜಮೌಳಿ ಸಿನಿಮಾಗಳ ರೆಕಾರ್ಡ್​ ಬ್ರೇಕ್ ಮಾಡಿದೆ ಕೆಜಿಎಫ್. ವಿಶ್ವದಾದ್ಯಂತ 500 ಕೋಟಿ ಕ್ಲಬ್ ಸೇರಿರೋ ಕೆಜಿಎಫ್ ಚಾಪ್ಟರ್ 2, ಸಾವಿರ ಕೋಟಿಯತ್ತ ನಾಗಾಲೋಟ ಮುಂದುವರೆಸಿದೆ.

ಇದು ನಿಜಕ್ಕೂ ಬಾಲಿವುಡ್ ಸ್ಟಾರ್​ಗಳನ್ನ ಮೀರಿಸೋ ಕ್ರೇಜ್ ಆಗಿದ್ದು, ಎಲ್ಲೆಲ್ಲೂ ರಾಕ್ ರಾಕ್ ರಾಕಿ ಅಂತ ಸಿನಿಪ್ರಿಯರು ಭಜನೆ ಮಾಡ್ತಿದ್ದಾರೆ. ಇದು ಪ್ರಾಮಾಣಿಕ ಪ್ರಯತ್ನಕ್ಕೆ ಸಂದ ಜಯವೇ ಸರಿ. ಕನ್ನಡದ ಕೀರ್ತಿ ಪತಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಉತ್ತುಂಗದಲ್ಲಿ ಹಾರ್ತಿರೋದು ನಿಜಕ್ಕೂ ಕನ್ನಡಿಗರ ತಾಕತ್ತು ಎಂಥದ್ದು ಅನ್ನೋದ್ರ ಕೈಗನ್ನಡಿ ಆಗಿದೆ. ಈ ಸಕ್ಸಸ್ ಹೀಗೆಯೇ ಮುಂದುವರೆಯಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

- Advertisment -

Most Popular

Recent Comments