Home ಸಿನಿ ಪವರ್ KGF-2 ರಿಲೀಸ್​​ಗೆ ಮುಹೂರ್ತ ಫಿಕ್ಸ್?

KGF-2 ರಿಲೀಸ್​​ಗೆ ಮುಹೂರ್ತ ಫಿಕ್ಸ್?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್-2 ಮೇಲಿನ ನಿರೀಕ್ಷೆ ದಿನೇ ದಿನೇ ಹೆಚ್ಚುತ್ತಿದೆ. ಸದ್ಯ ಶೂಟಿಂಗ್​ನಲ್ಲಿ ಬ್ಯುಸಿ ಇರೋ ರಾಕಿಭಾಯ್ ಅಂಡ್​ ಟೀಮ್ ಸದ್ದಿಲ್ಲದೆ ಸಿನಿಮಾ ರಿಲೀಸ್​ ಸುದ್ದಿಯನ್ನು ತಿಳಿಸಿದೆ..! ಅರೆ.. ಕೆಜಿಎಫ್​-2 ರಿಲೀಸ್ ಡೇಟ್ ಫಿಕ್ಸಾಯ್ತಾ ಅಂತಿದ್ದಾರಾ..? ಯೆಸ್​..

ಕೆಜಿಎಫ್​ – ಕನ್ನಡದ ಗೋಲ್ಡನ್ ಫಿಲ್ಮ್​…. ಸ್ಯಾಂಡಲ್​ವುಡ್​ನ ಬ್ರಾಂಡ್​ ವ್ಯಾಲ್ಯುವನ್ನು ಹೆಚ್ಚಿಸಿದ ಮೂವಿ.. ಪಂಚ ಭಾಷೆಗಳಲ್ಲಿ ಸಪ್ತಸಾಗರದಾಚೆಗೂ ಕನ್ನಡ ಸಿನಿ ಕಂಪನ್ನು ಬೀರಿದ ಚಿತ್ರ..! 2018ರ ಡಿಸೆಂಬರ್​ 21ರಂದು ರಿಲೀಸ್ ಆಗಿದ್ದ ಸಿನಿಮಾ ಸಖತ್ ಸದ್ದು ಮಾಡಿತ್ತು. ‘ಉಗ್ರಂ’ ಡೈರೆಕ್ಟರ್ ಪ್ರಶಾಂತ್ ನೀಲ್ ತಮ್ಮ ಎರಡನೇ ಸಿನಿಮಾ ಈ ಕೆಜಿಎಫ್ ಮೂಲಕ ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ರು.

ರಾಕಿಭಾಯ್ ಅವತಾರದಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ರಿಲೀಸ್ ಆಗ್ತಿದ್ದಂತೆ ನ್ಯಾಷನಲ್ ಸ್ಟಾರ್ ಆಗಿಬಿಟ್ರು. ಕೆಜಿಎಫ್ ಯಶ್ ಇಮೇಜನ್ನೇ ಬದಲು ಮಾಡಿಬಿಟ್ಟಿದೆ. ಕೆಜಿಎಫ್​ ಸಕ್ಸಸ್​ನ ಹಿಂದೆ ತೆರೆ ಮತ್ತು ತೆರೆಮರೆಯಲ್ಲಿ ಕೆಲಸ ಮಾಡಿದ ಎಲ್ಲರ ಪರಿಶ್ರಮ ಇದ್ದೇ ಇದೆ. ಎಲ್ಲದರ ಜೊತೆಗೆ ಇಂಥಾ ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ ಪ್ರೊಡ್ಯೂಸರ್ ವಿಜಯ್ ಕಿರಗಂದೂರ್​ ಅವರನ್ನೂ ಮೆಚ್ಚಲೇ ಬೇಕು.

ಇನ್ನು ಕೆಜಿಎಫ್ ರಿಲೀಸ್ ಆಗುತ್ತಿದ್ದಂತೆ ಎದುರಾಗಿದ್ದು ಕೆಜಿಎಫ್ -2 ಯಾವಾಗಾ ಅನ್ನೋ ಪ್ರಶ್ನೆ..! ಕೆಜಿಎಫ್ ಚಾಪ್ಟರ್ 1 ಸಕ್ಸಸ್​ ಬೆನ್ನಲ್ಲೇ ಚಾಪ್ಟರ್​ 2 ಸೆಟ್ಟೇರಿತು. ಸದ್ಯ ಎದುರಾದ ಕೆಲ ಅಡೆತಡೆಗಳ ಹೊರತಾಗಿಯೂ ಚಾಪ್ಟರ್ 2 ಚಿತ್ರೀಕರಣ ನಡೀತಾ ಇದೆ. ಈ ಸಡಗರದ ನಡುವೆಯೇ ಯಶ್ ಚಾಪ್ಟರ್ 2 ರಿಲೀಸ್ ಬಗ್ಗೆ ಮಾತಾಡಿದ್ದಾರೆ.

ಇತಿಹಾಸ ಸೃಷ್ಠಿಸಿದ ಕೆಜಿಎಫ್ ಯಶ್​​ ಜನಪ್ರಿಯತೆಯನ್ನು ಹೆಚ್ಚಿಸಿತು. ಕೀರ್ತಿಯನ್ನು ವಿಶ್ವಕ್ಕೆ ಪಸರಿಸಿತು. ಅನೇಕ ಪ್ರಶಸ್ತಿಗಳು ಯಶ್​ರನ್ನರಸಿ ಬಂದಿವೆ. ಮೊನ್ನೆ ಮೊನ್ನೆ ದಾದಾ ಸಾಹೇಬ್​ ಫಾಲ್ಕೆ ಸೌತ್​​ ಫಿಲ್ಮ್​ ಅವಾರ್ಡ್ಸ್​​​ 2019ನಲ್ಲಿ ಕೆಜಿಎಫ್​ ಚಿತ್ರದ ಅಭಿನಯಕ್ಕಾಗಿ ಔಟ್​ ಸ್ಟ್ಯಾಂಡಿಂಗ್​ ಪರ್ಫಾರ್ಮರ್​ ಆಫ್​ ಇಯರ್​ ಅವಾರ್ಡ್​​​​ ಪಡೆದುಕೊಂಡ್ರು. ಆ ಕಾರ್ಯಕ್ರಮದ ವೇದಿಕೆಯಲ್ಲಿ ಕೆಜಿಎಫ್​ -2 ಬಗ್ಗೆ ಯಶ್ ಮಾತಾಡಿದ್ರು.!

 ಹೌದು ದಾದಾ ಸಾಹೇಬ್​ ಫಾಲ್ಕೆ ಸೌತ್​​ ಫಿಲ್ಮ್​ ಅವಾರ್ಡ್ಸ್​​​ ಕಾರ್ಯಕ್ರಮದ ವೇಳೆ ಮಾತನಾಡಿದ ಯಶ್ ಕೆಜಿಎಫ್​ ಚಾಪ್ಟರ್​ 2 ಮುಂದಿನ ವರ್ಷ ಏಪ್ರಿಲ್​ ನಲ್ಲಿ ರಿಲೀಸ್ ಆಗಲಿದೆ ಅನ್ನೋ ಸೂಚನೆ ಕೊಟ್ಟಿದ್ದಾರೆ… ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಯಾವಾಗಪ್ಪಾ ಏಪ್ರಿಲ್ ಬರುತ್ತೆ ಅಂತ ಕಾಯ್ತಿದ್ದಾರೆ..! ಕೆಜಿಎಫ್ ಚಾಪ್ಟರ್ 1 ಮಾಡಿದ ಕಮಾಲ್​ಗಿಂತ ದೊಡ್ಡ ಮಟ್ಟಿನ ಕಮಾಲ್​ ಮಾಡಲಿ ಚಾಪ್ಟರ್ 2 ಅನ್ನೋದು ನಮ್ ಹಾರೈಕೆ ಕೂಡ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments