Monday, May 23, 2022
Powertv Logo
Homeಸಿನಿಮಾ'ಕೆಜಿಎಫ್​’ ಸಿನಿಮಾಕ್ಕಾಗಿ ಬೀದಿಗಿಳಿದ ಕೂಲಿ ಕಾರ್ಮಿಕರು..!

‘ಕೆಜಿಎಫ್​’ ಸಿನಿಮಾಕ್ಕಾಗಿ ಬೀದಿಗಿಳಿದ ಕೂಲಿ ಕಾರ್ಮಿಕರು..!

ಕೋಲಾರ:​​ ರಾಕಿಂಗ್​ ಸ್ಟಾರ್​​ ಯಶ್ ಅಭಿನಯದ ಕೆಜಿಎಫ್ -2 ಚಿತ್ರದ ಶೂಟಿಂಗ್​​ಗೆ ನ್ಯಾಯಾಲಯ ತಡೆಯಾಜ್ಞೆ  ನೀಡಿದ ಹಿನ್ನೆಲೆ ಕೋಲಾರದ ಕೆಜಿಎಫ್ ನಲ್ಲಿ ಕೂಲಿ ವಂಚಿತ ಸ್ಥಳೀಯ ಕಾರ್ಮಿಕರು ಬೀದಿಗಿಳಿದಿದ್ದಾರೆ.

ಕೋಲಾರದ ಸೈನೆಡ್​ ಕೆನೆಡೀಸ್​ ಗುಡ್ಡದ ಮೇಲೆ ಕೆಜಿಎಫ್​-2 ಸಿನಿಮಾ ಶೂಟಿಂಗ್​ ನಡೀತಾ ಇತ್ತು. ಶೂಟಿಂಗ್​​ಗಾಗಿ ಭಾರಿ ಗಾತ್ರದ ಸೆಟ್​​ಗಳನ್ನು ಕೂಡ ಹಾಕಲಾಗಿತ್ತು. ಇದ್ರಿಂದಾಗಿ ಪರಿಸರ ನಾಶವಾಗುವ ಜೊತೆಗೆ ಸ್ಥಳೀಯರಿಗೆ ತೊಂದರೆಯಾಗಿದೆ ಎಂದು ಶ್ರೀನಿವಾಸ್​​ ಎಂಬುವವರು ಕೋರ್ಟ್​​ ಮೊರೆ ಹೋಗಿದ್ರು. ಅರ್ಜಿಯ ವಿಚಾರಣೆ ನಡೆಸಿದ ಕೋಲಾರದ ಜೆಎಮ್​ಎಫ್​ಸಿ ಕೋರ್ಟ್​ ಚಿತ್ರದ ಶೂಟಿಂಗ್​​ಗೆ ಮಂಗಳವಾರ ತಡೆಯಾಜ್ಞೆ  ನೀಡಿತ್ತು. ಆದರೆ, ಚಿತ್ರೀಕರಣದಿಂದ ನಮಗೆ ಯಾವೂದೇ ರೀತಿಯ ತೊಂದರೆ ಆಗಿರಲಿಲ್ಲ. ಕೆಜಿಎಫ್‍ನಲ್ಲಿ ಚಿನ್ನದ ಗಣಿ ಸ್ಥಗಿತದಿಂದ ನಮಗೆ ಕೆಲಸವೂ ಇರಲಿಲ್ಲ. ಕೆಜಿಎಫ್-2 ಚಿತ್ರೀಕರಣದಿಂದ ಸ್ಥಳೀಯರಿಗೆ ಕೆಲಸ ಸಿಕ್ಕಿದೆ. ನಮ್ಮ ದೈನಂದಿನ ಜೀವನ ಸಾಗ್ತಿತ್ತು. ಅರ್ಜಿದಾರರು ಕೋರ್ಟಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಕೋರ್ಟ್​​ ಪರಿಶೀಲನೆ ನಡೆಸಿ ಚಿತ್ರೀಕರಣಕ್ಕೆ ಅನುಮತಿ ನೀಡಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.

19 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments