Friday, September 30, 2022
Powertv Logo
Homeದೇಶಆಧುನಿಕ ಶ್ರವಣ ಕುಮಾರ : ತಂದೆಯನ್ನು 1 ಕಿ.ಮೀ ಎತ್ತಿಕೊಂಡು ನಡೆದ ಮಗ!

ಆಧುನಿಕ ಶ್ರವಣ ಕುಮಾರ : ತಂದೆಯನ್ನು 1 ಕಿ.ಮೀ ಎತ್ತಿಕೊಂಡು ನಡೆದ ಮಗ!

ತಿರುವನಂತಪುರಂ: ಕೊರೋನಾ ಹರಡುವುದನ್ನು ತಡೆಯಲು ಲಾಕ್​ಡೌನ್ ಮಾಡುವುದು ಅನಿವಾರ್ಯ. ಆದರೆ ಅದರಿಂದ ಅನೇಕರು ಪರದಾಡುವಂತಾಗಿದೆ. ಲಾಕ್​ಡೌನ್ ಇರುವುದರಿಂದ ಅನಾರೋಗ್ಯ ಪೀಡಿತ ತಂದೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಆಟೋದಲ್ಲಿ ಬಂದರನ್ನು ಪೊಲೀಸರು ದಾರಿಮಧ್ಯೆ ತಡೆದು ನಿಲ್ಲಿಸಿದ್ದಾರೆ. ಹಾಗಾಗಿ ಇಲ್ಲೊಬ್ಬ ವ್ಯಕ್ತಿ ತನ್ನ ತಂದೆಯನ್ನು ಹೊತ್ತುಕೊಂಡೇ ಸಾಗಿದ್ದಾನೆ.

65 ವರ್ಷದ ಕುಲಾಥುಪುಝಾ ನಿವಾಸಿಯನ್ನು ಪುನಾಲುರ್ ತಾಲೂಕು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಆಟೋದಲ್ಲಿ ಮನೆಗೆ  ಕರೆದುಕೊಂಡು ಹೋಗುತ್ತಿರುವಾಗ ಅವರನ್ನು ಪೊಲೀಸರು ತಡೆದರು. ಆಸ್ಪತ್ರೆಯ ದಾಖಲೆ ತೋರಿಸಿದರೂ ಆಟೋ ಹೋಗಲು ಪೊಲೀಸರು ಅವಕಾಶ ನೀಡದ ಹಿನ್ನೆಲೆ ಮಗ ತನ್ನ ತಂದೆಯನ್ನು 1ಕಿ.ಮೀ ದೂರ ಎತ್ತಿಕೊಂಡು ಮನೆಗೆ ಸಾಗಿದ್ದಾನೆ. ಆತನ ಹಿಂದೆ ಮಹಿಳೆಯೊಬ್ಬರು ಆಸ್ಪತ್ರೆಯ ದಾಖಲೆಯನ್ನು ಹಿಡಿದುಕೊಂಡು ಹಿಂದೆಯೇ ಹೋಗುತ್ತಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments