Home ದೇಶ-ವಿದೇಶ ಮಾನವನ ಹೀನ ಕೃತ್ಯಕ್ಕೆ ಬಲಿಯಾದ ಗರ್ಭಿಣಿ ಕಾಡಾನೆ : ವಿಶೇಷ ಶ್ರದ್ಧಾಂಜಲಿ ಸಲ್ಲಿಸಿದ ಕಲಾವಿದ

ಮಾನವನ ಹೀನ ಕೃತ್ಯಕ್ಕೆ ಬಲಿಯಾದ ಗರ್ಭಿಣಿ ಕಾಡಾನೆ : ವಿಶೇಷ ಶ್ರದ್ಧಾಂಜಲಿ ಸಲ್ಲಿಸಿದ ಕಲಾವಿದ

ಧಾರವಾಡ: ಮಾನವನ ಹೇಡಿತನದ ಕೃತ್ಯಕ್ಕೆ ಬಲಿಯಾದ ಗಜ ಮಾತೆಗೆ ವಿಶಿಷ್ಟ ರೀತಿಯಲ್ಲಿ ಧಾರವಾಡ ಪ್ರಖ್ಯಾತ ಕಲಾವಿದ ಮಂಜುನಾಥ ಹಿರೇಮಠ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕೇರಳದಲ್ಲಿ ನಡೆದ ಆನೆ ಹತ್ಯೆ ಖಂಡಿಸಿ, ಮಣ್ಣಿನಿಂದ ಆನೆ ಹಾಗೂ ಗರ್ಭದಲ್ಲಿದ್ದ ಮರಿ ಆನೆ ಕಲಾಕೃತಿ ಮಾಡಿ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕೇರಳದ ಮಲಪ್ಪುರಂನಲ್ಲಿ ಹಸಿವಿಗೆ ಕಾಡಿನಿಂದ ಆಹಾರ ಹರಸುತ್ತಾ ಬಂದ ಗರ್ಭಿಣಿ ಆನೆ ಊರು ಸೇರಿತ್ತು. ಆದರೆ ಅಲ್ಲಿ ಕೆಲವು ಪಾಪಿ ಜನ ತಮ್ಮ ತಮಾಷೆಯ ಚಟ ತೀರಿಸಿಕೊಳ್ಳಲು ಹಸಿದು ಬಂದ ಆನೆಗೆ ಪೈನಾಪಲ್​ನ ಒಳಗೆ ಸಿಡಿಮದ್ದು ಸೇರಿಸಿ ಕೊಟ್ಟಿದ್ದರು. ಅದನ್ನು ತಿಳಿಯದ ಆ ಗರ್ಭಿಣಿ ಗಜಮಾತೆ  ಪೈನಾಪಲ್ ತಿಂದು ತನ್ನ ಪ್ರಾಣವನ್ನು ಕಳೆದುಕೊಂಡಿತ್ತು. ಇನ್ನೂ ಭೂಮಿಗೆ ಕಾಲಿಡದ  ಪುಟ್ಟ ಮರಿ ಆನೆಯೂ ಮಾನವನ ಹೀನ ಕೃತ್ಯಕ್ಕೆ ಬಲಿಯಾಯಿತು. 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments