ನಕ್ಸಲರಿಂದ ಕೇರಳ ಸಿಎಂ ಹತ್ಯೆ ಬೆದರಿಕೆ ಪತ್ರ

0
231

ಕ್ಯಾಲಿಕಟ್​ : ನಕ್ಸಲ್ ಸಂಘಟನೆಯೊಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹತ್ಯೆ ಬೆದರಿಕೆಯೊಡ್ಡಿದೆ.
ಪಿಣರಾಯ್ ನೇತೃತ್ವದ ಸರ್ಕಾರ 2016ರಿಂದ ಇದುವರೆಗೆ ಏಳು ಮಂದಿ ನಕ್ಸಲರ ಹತ್ಯಗೈದಿದ್ದು, ಇದಕ್ಕೆ ಪ್ರತಿಕಾರವಾಗಿ ಪಿಣರಾಯಿ ವಿಜಯನ್ ಅವರನ್ನು ಕೊಲ್ಲುತ್ತೇವೆಂಬ ಅರ್ಥದಲ್ಲಿ ಕೇರಳದ ಕೋಯಿಕ್ಕೋಡ್​ ಜಿಲ್ಲೆಯ ವಡಗರ ಪೊಲೀಸ್​ ಠಾಣೆಗೆ ಪತ್ರ ಕಳುಹಿಸಿದೆ.
ಮಲಯಾಳಂ ಭಾಷೆಯಲ್ಲಿರುವ ಈ ಪತ್ರದಲ್ಲಿ ಬೆದರ್​ ಮೂಸಾ ಎಂಬ ನಕ್ಸಲ್​ ಸಂಘಟನೆಯ ಸಹಿಯೂ ಇದ್ದು, ಪತ್ರ ಬಂದಿರುವುದನ್ನು ಖಚಿತಪಡಿಸಿರುವ ಹಿರಿಯ ಪೊಲೀಸ್​ ಅಧಿಕಾರಿ, ಕೋಯಿಕ್ಕೋಡ್ (ಕ್ಯಾಲಿಕಟ್) ಸುತ್ತಲ ಪ್ರದೇಶದಿಂದಲೇ ಪೋಸ್ಟ್​ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

2016 ರಿಂದ ಇಲ್ಲಿಯವರೆಗೂ ಕೇರಳದಲ್ಲಿ ಏಳು ನಕ್ಸಲರನ್ನು ಪೊಲೀಸರು ಎನ್​ಕೌಂಟರ್​ ಮಾಡಿದ್ದಾರೆ. ಅಕ್ಟೋಬರ್​ 28 ರಂದು ನಾಲ್ವರು ನಕ್ಸಲರ ಹತ್ಯೆಯಾಗಿತ್ತು.
ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಕ್ಸಲ್ ಚಟುವಟಿಕಗಳು ಇತ್ತೀಚೆಗೆ ಕೇರಳದ ಕಡೆಗೆ ವಾಲಿದೆ. ಕೇರಳದಲ್ಲಿ ನಕ್ಸಲ್​ ಸಂಘಟನೆ ಪ್ರಬಲವಾಗುತ್ತಿದ್ದು, ಕರ್ನಾಟಕದ ಮತ್ತು ಆಂದ್ರಪ್ರದೇಶದ ನಕ್ಸಲರೂ ಇವರೊಂದಿಗೆ ಶಾಮಿಲಾಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here