Thursday, October 6, 2022
Powertv Logo
Homeಸಿನಿಮಾಹೊಸ ಸಾಹಸಕ್ಕೆ ಕೈ ಹಾಕಿದ ಕರ್ವ ಡೈರೆಕ್ಟರ್ ನವನೀತ್..!

ಹೊಸ ಸಾಹಸಕ್ಕೆ ಕೈ ಹಾಕಿದ ಕರ್ವ ಡೈರೆಕ್ಟರ್ ನವನೀತ್..!

ಸ್ಯಾಂಡಲ್​ವುಡ್ ಯುವ ನಿರ್ದೇಶಕ ‘ಕರ್ವ’ ನವನೀತ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. 2016ರಲ್ಲಿ ತೆರೆಕಂಡ ಕರ್ವ ಸಿನಿಮಾ ಮೂಲಕ ಡೈರೆಕ್ಟರ್ ಆಗಿ ಸ್ಯಾಂಡಲ್​ವುಡ್ ಪ್ರವೇಶಿಸಿದವ್ರು. ತಿಲಕ್ ಶೇಖರ್, ಆರ್.ಜೆ ರೋಹಿತ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಕರ್ವ ಸೂಪರ್ ಡೂಪರ್ ಹಿಟ್ ಆಗಿದ್ದು ಇತಿಹಾಸ! ಚೊಚ್ಚಲ ಸಿನಿಮಾದಲ್ಲೇ ನವನೀತ್ ಭರವಸೆ ಮೂಡಿಸಿದರು. ಬಳಿಕ ಬಕಾಸುರ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ರು. ಕ್ರೇಜಿಸ್ಟಾರ್ ರವಿಚಂದ್ರನ್, ಆರ್.ಜೆ ರೋಹಿತ್ ಅಭಿನಯದ ಬಕಾಸುರ ಕೂಡ ಒಂದು ಮಟ್ಟಿಗೆ ಸದ್ದು ಮಾಡಿತು.
ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಆ ಸಿನಿಮಾದ ಟೈಟಲ್ ಸದ್ಯದಲ್ಲೇ ಅನೌನ್ಸ್ ಆಗಲಿದೆ. ಮೊನ್ನೆ ಮೊನ್ನೆಯಷ್ಟೇ ಉಪ್ಪಿ ಜೊತೆ ಸಿನಿಮಾ ಮಾಡೋ ವಿಷಯ ತಿಳಿಸಿದ್ದ ನವನೀತ್​ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿರುವ ಸುದ್ದಿಯನ್ನು ನೀಡಿದ್ದಾರೆ.
ಹೌದು ಡೈರೆಕ್ಟರ್ ನವನೀತ್ ಸಿನಿಮಾವೊಂದನ್ನು ನಿರ್ಮಾಣ ಮಾಡಲಿದ್ದಾರೆ. ಕರ್ವ ಕ್ಯಾಮರಾಮನ್ ಮೋಹನ್ ಒಡಗೂಡಿ MONA TALKIES ಬ್ಯಾನರಲ್ಲಿ ‘ಟೈಪ್​ ರೈಟರ್’ ಎಂಬ ಮಹಿಳಾ ಪ್ರಧಾನ ಚಿತ್ರವನ್ನು ನಿರ್ಮಿಸಲಿದ್ದಾರೆ. ಆಕಾಂಕ್ಷ ಈ ಚಿತ್ರಕ್ಕೆ ಕಥೆ ಬರೆದಿದ್ದು, ಅವರೇ ಈ ಸಿನಿಮಾದ ನಾಯಕಿ ಕೂಡ. ನವನೀತ್ ನಿರ್ಮಾಣದ ಜೊತೆಗೆ ಸ್ಕ್ರೀನ್ ಪ್ಲೇ ಜವಾಬ್ದಾರಿ ನಿಭಾಯಿಸಲಿದ್ದಾರೆ. ಹೇಮಂತ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್​ವುಡ್​ಗೆ ಪರಿಚಯವಾಗುತ್ತಿದ್ದಾರೆ. ರವಿಶಂಕರ್, ಊರ್ವಶಿ, ವಿಜಯ್ ಚಂದೂರ್, ಶಂಕರ್ ಅಶ್ವತ್ಥ್​ ಮೊದಲಾದವರು ತಾರಾಗಣದಲ್ಲಿದ್ದು, ಚಿತ್ರತಂಡ ನಾಯಕನ ಹುಡುಕಾಟದಲ್ಲಿದೆ. ಮಾರ್ಚ್​ 16ರಂದು ಸಿನಿಮಾ ಮುಹೂರ್ತ ನೆರವೇರಲಿದೆ.

9 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments