Friday, October 7, 2022
Powertv Logo
Homeಸಿನಿಮಾಸುಧಾ ಮೂರ್ತಿ, ಪುನೀತ್, ಯಶ್​ಗೆ ಸರ್ಕಾರದಿಂದ ಹೊಸ ಹೊಣೆ!

ಸುಧಾ ಮೂರ್ತಿ, ಪುನೀತ್, ಯಶ್​ಗೆ ಸರ್ಕಾರದಿಂದ ಹೊಸ ಹೊಣೆ!

ಬೆಂಗಳೂರು : ಇನ್ಫೋಸಿಸ್​ನ ಸುಧಾ ಮೂರ್ತಿ, ನಟರಾದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ರಾಕಿಂಗ್ ಸ್ಟಾರ್ ಯಶ್​  ಹೆಗಲಿಗೆ ರಾಜ್ಯ ಸರ್ಕಾರ ಹೊಸ ಹೊಣೆ ಹೊರಿಸಿದೆ. 

ಸರ್ಕಾರದ ಮಹತ್ವದ ಯೋಜನೆ ಮುಜರಾಯಿ ದೇವಸ್ಥಾನಗಳಲ್ಲಿ ಆಯೋಜಿಸುವ ಸಾಮೂಹಿಕ ಮದುವೆಗೆ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ, ರಾಕಿಂಗ್ ಸ್ಟಾರ್ ಯಶ್ ದಂಪತಿ , ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ರಾಯಭಾರಿಗಳಾಗಿ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.

ಸರ್ಕಾರದ ಸರಳ ಹಾಗೂ ಸಾಮೂಹಿಕ ವಿವಾಹ ಯೋಜನೆ ಕುರಿತು ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ದು, ಯಶ್ , ಪುನೀತ್ , ಸುಧಾಮೂರ್ತಿಯವರ ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರು ಸೇರಿದಂತೆ ನಾಡಿನ ಅನೇಕ ಮಠಾದಿಪತಿಗಳು ಈ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 16 ಎ ದರ್ಜೆಯ ಹೆಚ್ಚಿನ ಆದಾಯವಿರುವ ದೇವಸ್ಥಾನಗಳಲ್ಲಿ ಈ ಕಾರ್ಯಕ್ರಮಗಳು ನಡೆಯುತ್ತದೆ ಎಂದು ತಿಳಿಸಿದ್ದಾರೆ. 

13 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments