Home ರಾಜ್ಯ ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ರಾಜೀನಾಮೆ..!

ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ರಾಜೀನಾಮೆ..!

ಅಣ್ಣಾಮಲೈ… ರೌಡಿಗಳು, ಕಳ್ಳರು, ದರೋಡೆಕೋರರು, ಸುಲಿಗೆಕೋರರು, ಭ್ರಷ್ಟರು ನಿಂತಲ್ಲೆ ನಡುಗಿ ಕುಸಿದು ಬಿಳುತಿದ್ದ ಹೆಸರಿದು.  ಕಳೆದ 9 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ದಕ್ಷ ಸೇವೆ ಸಲ್ಲಿಸಿದ್ದ ಅವರೀಗ ಇದ್ದಕ್ಕಿದ್ದಂತೆ ಇಲಾಖೆಗೆ ಗುಡ್​ ಬೈ ಹೇಳಿಬಿಟ್ಟಿದ್ದಾರೆ. ಪ್ರಸ್ತುತ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ಕಾರ್ಯನಿರ್ವಹಿಸ್ತಿದ್ದ ಮಲೈ, ಚಿಕ್ಕಮಗಳೂರಿನಲ್ಲಿ ಎಸ್​ಪಿಯಾಗಿ ನಿರ್ವಹಿಸಿದ್ದ ಕಾರ್ಯವನ್ನು ಯಾರೂ ಮರೆಯಲಾರರು. ಕಾಫಿನಾಡು ಚಿಕ್ಕಮಗಳೂರಿನ ಜನ ಸದಾ ನೆನೆಯುವ ಅಧಿಕಾರಿ ಅಣ್ಣಾಮಲೈ. 

ಬಾಬಾ ಬುಡನ್​ ಗಿರಿಯ ಹಿಂದೂ ಮುಸ್ಲೀಂ ತಿಕ್ಕಾಟದಲ್ಲೂ ಯಾರಿಗೂ ಕಿಂಚಿತ್ತೂ ಅನ್ಯಾಯ ಆಗದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೂ ಇದೇ ರಿಯಲ್​ ಸಿಗಂ. ಕಳೆದ ಒಂದೂವರೆ ವರ್ಷದಿಂದ ಬೆಂಗಳೂರು ದಕ್ಷಿಣದ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. 

ಇದೀಗ ಅವರು ತನ್ನ ಕೆಲಸಕ್ಕೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಅವರ ಮುಂದಿನ ನಡೆಯನ್ನು ಕಾದು ನೋಡಬೇಕು. ಅವರು ತಮ್ಮ ರಾಜೀನಾಮೆ ಪತ್ರದಲ್ಲಿ , ಕುಟುಂಬಕ್ಕೆ ಸಮಯ ಕೊಟ್ಟಿಲ್ಲ ಎಂಬ ಕಾರಣ ನೀಡಿದ್ದಾರೆ. “ಕಳೆದ 9 ವರ್ಷಗಳಲ್ಲಿ ಒಂದೇ ಮದುವೆ ಅಟೆಂಡ್ ಮಾಡಿದ್ದೆ, ಕೆಲವು ಆಪ್ತರ ಅಂತ್ಯಸಂಸ್ಕಾರಕ್ಕೂ ಹೋಗಿರಲಿಲ್ಲ ಎಂಬ ಕೊರಗೂ ಕೂಡ ನನ್ನನ್ನ ಕಾಡುತ್ತಿದೆ, ನಾನು ಇಲ್ಲಿ-ನನ್ನ ಪೋಷಕರು-ಬಂಧು-ಬಳಗ ಅಲ್ಲಿ, ಯಾವುದಕ್ಕೂ ಸಮಯ ನೀಡದೆ ನಿರಂತರ ಕೆಲಸ ಮಾಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಅಣ್ಣಾಮಲೈ ಪೊಲೀಸ್ ಇಲಾಖೆಗೆ ಗತ್ತು ತಂದಿದ್ದ ಟಫ್ ಕಾಪ್. ಕರ್ನಾಟಕದ ಸಿಂಗಂ ಎಂದೇ ಮನೆಮಾತಾಗಿದ್ದಾರೆ. 

 

 

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments