ಇಡೀ ಕರ್ನಾಟಕ ಲಾಕ್​ಡೌನ್

0
441

ಬೆಂಗಳೂರು : ಕೊರೋನಾ ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಇಡೀ ರಾಜ್ಯ ಲಾಕ್​ಡೌನ್ ಆಗುತ್ತಿದೆ. ಮಾರ್ಚ್ 31ರ ತನಕ ಸಂಪೂರ್ಣ ರಾಜ್ಯವನ್ನು ಲಾಕ್​ಡೌನ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇಂದು ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲೇ ಈ ಚಿಂತನೆ ನಡೆದಿತ್ತು. ಆದರೆ,ಸಂಜೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ , ದಕ್ಷಿಣ ಕನ್ನಡ, ಚಿಕ್ಕಾಬಳ್ಳಾಪುರ, ಮೈಸೂರು, ಕಲಬುರಗಿ, ಬೆಳಗಾವಿ, ಕೊಡಗು, ಧಾರವಾಡ ಜಿಲ್ಲೆಗಳನ್ನು ಮಾತ್ರ ಲಾಕ್​ಡೌನ್ ಮಾಡಿ ಆದೇಶ ಹೊರಡಿಸಲಾಗಿತ್ತು. ಇದೀಗ ಇಡೀ ರಾಜ್ಯವನ್ನು ಲಾಕ್​ಡೌನ್ ಮಾಡುವುದಾಗಿ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

LEAVE A REPLY

Please enter your comment!
Please enter your name here