Friday, September 30, 2022
Powertv Logo
Homeರಾಜ್ಯರಾಜ್ಯದಲ್ಲಿ ಇಂದು 10 ಮಂದಿಯಲ್ಲಿ ಕೊರೋನಾ ಪಾಸಿಟಿವ್ : 191ಕ್ಕೇರಿದ ಸೋಂಕಿತರ ಸಂಖ್ಯೆ  

ರಾಜ್ಯದಲ್ಲಿ ಇಂದು 10 ಮಂದಿಯಲ್ಲಿ ಕೊರೋನಾ ಪಾಸಿಟಿವ್ : 191ಕ್ಕೇರಿದ ಸೋಂಕಿತರ ಸಂಖ್ಯೆ  

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಹೊಸದಾಗಿ 10 ಜನರಲ್ಲಿ ಸೋಂಕು ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 191ಕ್ಕ ಏರಿಕೆಯಾಗಿದೆ.

ಬೆಂಗಳೂರಲ್ಲಿ 2 ಮಂದಿ ಸೋಂಕಿತರು ಪತ್ತೆಯಾಗಿದ್ದು, ಮೈಸೂರು 2, ಬಾಗಲಕೋಟೆ 3 ಜನರಿಗೆ ಸೋಂಕು ತಗುಲಿದ್ದು, ಇನ್ನುಳಿದಂತೆ ಬೆಳಗಾವಿ, ಮಂಡ್ಯ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಸೋಂಕು ಹರಡಿದೆ.

ಬಾಗಲಕೋಟೆಯಲ್ಲಿ ಇಂದು ಮೂರು ಸೋಂಕಿತರು ಪತ್ತೆಯಾಗಿದ್ದು, ಒಟ್ಟು 8 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬಾಗಲಕೋಟೆಯ ಪೇಶೆಂಟ್​ ನಂ.165 ರ ಮನೆಯ ಮೂವರು ಮಕ್ಕಳಿಗೆ ಸೋಂಕು ದೃಢಪಟ್ಟಿದ್ದು, ಇವರೆಲ್ಲಾ ಒಂದೇ ಕುಟುಂಬದವರಾಗಿದ್ದು, 4 ವರ್ಷದ ಮಗ, ಸೋಂಕಿತ ವ್ಯಕ್ತಿಯ  ಮೈದುನನ 13 ವರ್ಷದ ಮಗ ಹಾಗೂ 9 ವರ್ಷದ ಮಗಳಿಗೂ ಸೋಂಕು ತಗುಲಿದೆ.  

 

20 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments