Tuesday, September 27, 2022
Powertv Logo
Homeರಾಜ್ಯಕರ್ನಾಟಕದ ಜಿಲ್ಲೆಗಳನ್ನು ನಾಲ್ಕು ಝೋನ್​ಗಳಾಗಿ ವಿಂಗಡಣೆ : ಯಾವ ಜಿಲ್ಲೆ ಯಾವ ವ್ಯಾಪ್ತಿಗೆ?

ಕರ್ನಾಟಕದ ಜಿಲ್ಲೆಗಳನ್ನು ನಾಲ್ಕು ಝೋನ್​ಗಳಾಗಿ ವಿಂಗಡಣೆ : ಯಾವ ಜಿಲ್ಲೆ ಯಾವ ವ್ಯಾಪ್ತಿಗೆ?

ಬೆಂಗಳೂರು: ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಲೇ ಇದೆ. ಹಾಗಾಗಿ ಲಾಕ್​ಡೌನ್ ಆದೇಶದ ಜೊತೆ ಜೊತೆಗೆ ಕರ್ನಾಟಕದಲ್ಲಿ ಗ್ರೀನ್, ಆರೆಂಜ್​, ಯೆಲ್ಲೋ  ಹಾಗೂ ರೆಡ್​ ಝೋನ್​ಗಳಾಗಿ ನಾಲ್ಕು  ವಿಭಾಗಗಳನ್ನು ಮಾಡಿ ವಿಂಗಡಿಸಲಾಗಿದೆ.

ರಾಜ್ಯದ ಯಾವ ಜಿಲ್ಲೆಗಳಲ್ಲಿ 15 ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೋ  ಆ ಜಿಲ್ಲೆಗಳನ್ನು ರಡ್ ಝೋನ್ ವ್ಯಾಪ್ತಿಗೆ, 6 ರಿಂದ 14 ಸೋಂಕು ಪ್ರಕರಣಗಳು ಕಂಡುಬಂದಲ್ಲಿ ಆರೆಂಜ್ ಝೋನ್, 1 ರಿಂದ 5 ಪ್ರಕರಣಗಳು ಪತ್ತೆಯಾದಲ್ಲಿ ಯೆಲ್ಲೋ ಝೋನ್ ಹಾಗೂ ಕೊರೋನಾ ಪ್ರಕರಣಗಳು ಪತ್ತೆಯಾಗದೇ ಇದ್ದ ಪ್ರದೇಶಗಳು ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ಬರುತ್ತದೆ.

ರೆಡ್​ ಝೋನ್​ನಲ್ಲಿ ಬರುವ ಜಿಲ್ಲೆಗಳು ಯಾವುದು?

ರಾಜ್ಯದ 6 ಜಿಲ್ಲೆಗಳಲ್ಲಿ 15ಕ್ಕಿಂತ ಅಧಿಕ ಕೊರೋನಾ ಪ್ರಕರಣಗಳು ಕಂಡುಬಂದಿದ್ದು, ಬೆಂಗಳೂರು ನಗರ, ಮೈಸೂರು, ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳು ರೆಡ್ ಝೋನ್​ ವ್ಯಾಪ್ತಿಯಲ್ಲಿ ಬರುತ್ತದೆ.

ಆರೆಂಜ್ ಝೋನ್​ನಲ್ಲಿ ಬರುವ ಜಿಲ್ಲೆಗಳು ಯಾವುದು?

ರಾಜ್ಯದ ಐದು ಜಿಲ್ಲೆಗಳು ಆರೆಂಜ್ ಝೋನ್​ನಲ್ಲಿ ವ್ಯಾಪ್ತಿಗೆ ಸೇರಿದ್ದು, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಮಂಡ್ಯ ಹಾಗೂ ಬೀದರ್ ಜಿಲ್ಲೆಗಳು ವ್ಯಾಪ್ತಿಗೆ ಬರುತ್ತದೆ.

ಯೆಲ್ಲೋ ಝೋನ್​ ವ್ಯಾಪ್ತಿಗೆ ಬರುವ ಜಿಲ್ಲೆಗಳು ಯಾವುದು?

ಗದಗ, ಉತ್ತರ ಕನ್ನಡ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರವನ್ನು ಯೆಲ್ಲೋ ಝೋನ್​ ವ್ಯಾಪ್ತಿಗೆ ಸೇರಿಸಲಾಗಿದೆ.ಈ ಮೂಲಕ ಒಟ್ಟು ರಾಜ್ಯ 5 ಜಿಲ್ಲೆಗಳನ್ನು ಈ ಝೋನ್​ಗೆ ಸೇರಿಸಲಾಗಿದ್ದು, ಇಲ್ಲಿ ಕೇವಲ 1 ರಿಂದ 5 ಕೊರೋನಾ ಪ್ರಕರಣಗಳು ಕಂಡುಬಂದಿದೆ.

ಗ್ರೀನ್​ ಝೋನ್​ ವ್ಯಾಪ್ತಿಗೆ ಬರುವ ಜಿಲ್ಲೆಗಳು ಯಾವುದು?

ರಾಜ್ಯದ 14 ಜಿಲ್ಲೆಗಳನ್ನು ಗ್ರೀನ್ ಝೋನ್ ಎಂದು ಘೋಷಿಸಿದ್ದು, ಕಳೆದ 28 ದಿನಗಳಿಂದ ಈ ಜಿಲ್ಲೆಗಳಲ್ಲಿ ಯಾವುದೇ ಕೊರೋನಾ ಕೇಸ್​ಗಳು ಪತ್ತೆಯಾಗಿಲ್ಲ. ಹಾಗಾಗಿ ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ರಾಮನಗರ ಹಾಗೂ ಕೋಲಾರ ಜಿಲ್ಲೆಗಳನ್ನು ಗ್ರೀನ್ ಝೋನ್ ಎಂದು ಸರ್ಕಾರ ಆದೇಶ ನೀಡಿದೆ.

 

10 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments