ಕರ್ನಾಟಕದ ಜಿಲ್ಲೆಗಳು ಮೂರು ವಲಯಗಳಾಗಿ ವಿಂಗಡಣೆ : ಯಾವೆಲ್ಲಾ ಜಿಲ್ಲೆಗಳು ಡೇಂಜರ್ ಝೋನ್​ನಲ್ಲಿವೆ? 

0
2410

ಬೆಂಗಳೂರು: ಕೋವಿಡ್-19 ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕರ್ನಾಟಕದಲ್ಲಿರುವ ಸೋಂಕಿತರ ಅಂಕಿ ಅಂಶಕ್ಕನುಗುಣವಾಗಿ ಜಿಲ್ಲೆಗಳನ್ನು ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್​ಗಳಾಗಿ ವಿಂಗಡಿಸಲಾಗಿದೆ.

ಈ ಮೊದಲು ರಾಜ್ಯದಲ್ಲಿ 6 ಜಿಲ್ಲೆಗಳು ರೆಡ್​ ಝೋನ್​ನಲ್ಲಿದ್ದವು. ಆದರೆ ಈಗ 3 ಜಿಲ್ಲೆಗಳನ್ನು ರೆಡ್ ಝೋನ್​ಗಳಾಗಿ ವಿಭಾಗಿಸಿವೆ. ಹಾಗಾಗಿ ಬೆಂಗಳೂರು ಗ್ರಾಮಾಂತರ, ಬೆಂಗಳೂರರು ನಗರ ಹಾಗೂ ಮೈಸೂರು ಜಿಲ್ಲೆಗಳನ್ನು ರೆಡ್​ ಝೋನ್​ಗಳಾಗಿವೆ.

ಇನ್ನು ಆರೆಂಜ್ ಝೋನ್​ವ್ಯಾಪ್ತಿಗೆ ಒಟ್ಟು 13 ಜಿಲ್ಲೆಗಳು ಸೇರಿದ್ದು, ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಮಂಡ್ಯ, ಬೀದರ್, ದಕ್ಷಿಣ ಕನ್ನಡ, ಬಳ್ಳಾರಿ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ತುಮುಕೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಆರೆಂಜ್ ಝೋನ್​ಗೆ ಸೇರ್ಪಡಿಸಲಾಗಿದೆ.

ಗ್ರೀನ್ ಝೋನ್​ನಲ್ಲಿ 14 ಜಿಲ್ಲೆಗಳು ಸೇರ್ಪಡೆಗೊಂಡಿದ್ದು, ದಾವಣಗೆರೆ, ಚಾಮರಾಜನಗರ, ಕೊಡಗು, ರಾಮನಗರ, ಹಾಸನ, ಕೋಲಾರ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಕೊಪ್ಪಳ, ಉಡುಪಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ಗ್ರೀನ್ ಝೋನ್ ವ್ಯಾಪ್ತಿಗೆ ಬರುತ್ತದೆ.

ಇನ್ನು ದೇಶದಲ್ಲಿಯೂ ಪ್ರದೇಶಗಳನ್ನು ರೆಡ್, ಆರೆಂಜ್ ಹಾಗೂ ಗ್ರೀನ್ ವಲಯಗಳಾಗಿ ವಿಂಗಡಿಸಿದ್ದು, ಒಟ್ಟು 130 ಪ್ರದೇಶಗಳನ್ನು ರೆಡ್ ಝೋನ್ ಆಗಿ ವಿಭಾಗಿಸಲಾಗಿದೆ. 284 ಪ್ರದೇಶಗಳನ್ನು ಆರೆಂಜ್ ಝೋನ್ ಹಾಗೂ 319 ಪ್ರದೇಶಗಳನ್ನು ಗ್ರೀನ್​ ಝೋನ್​ಗಳಾಗಿ ವಿಂಗಡಿಸಲಾಗಿದೆ. 

LEAVE A REPLY

Please enter your comment!
Please enter your name here