ಮೂವರು ಅತೃಪ್ತರಿಗೆ ಅನರ್ಹತೆ ಶಿಕ್ಷೆ..!

0
153

ಬೆಂಗಳೂರು : ಮೂವರು ಅತೃಪ್ತ ಶಾಸಕರಿಗೆ ಅನರ್ಹತೆ ಶಿಕ್ಷೆ ವಿಧಿಸಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಶಕ್ತಿಸೌಧ ವಿಧಾನಸೌಧದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಗೋಕಾಕ್​ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಕಾಂಗ್ರೆಸ್ ಶಾಸಕ ಮಹೇಶ್ ಕುಮಟಳ್ಳಿ, ರಾಣೆಬೆನ್ನೂರು ಶಾಸಕ (ಕೆಪಿಜೆಪಿ) ಆರ್, ಶಂಕರ್‌ ಅವರನ್ನು ಅನರ್ಹಗೊಳಿಸುವುದಾಗಿ ತಿಳಿಸಿದರು.
ದೋಸ್ತಿ ಸರ್ಕಾರದ ವಿರುದ್ಧ ಬಂಡಾಯದ ಕಹಳೆ ಊದಿದ್ದ ರಮೇಶ್ ಜಾರಕಿಹೊಳಿ, ಮಹೇಶ ಕುಮಟಳ್ಳಿ ಮತ್ತು ಆರ್.ಶಂಕರ್​ ಅನರ್ಹಗೊಂಡಿದ್ದು, ಉಳಿದ ಅತೃಪ್ತರ ರಾಜೀನಾಮೆ ಕುರಿತ ತೀರ್ಪನ್ನು ಸ್ಪೀಕರ್ ಕಾಯ್ದಿರಿಸಿದ್ದಾರೆ. ಈ ವಿಧಾನಸಭೆಯ ಅವಧಿ ಮುಗಿಯುವರೆಗೂ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಅಂತ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here