Home ರಾಜ್ಯ ಕಾರ್ಗಿಲ್​ ಕದನದಲ್ಲಿ ಕೈ ಕಳೆದುಕೊಂಡ ವೀರಯೋಧನ ರೋಚಕ ಸಾಹಸಗಾಥೆ..!!

ಕಾರ್ಗಿಲ್​ ಕದನದಲ್ಲಿ ಕೈ ಕಳೆದುಕೊಂಡ ವೀರಯೋಧನ ರೋಚಕ ಸಾಹಸಗಾಥೆ..!!

ಬಾಗಲಕೋಟೆ : ಕಾರ್ಗಿಲ್ ಯುದ್ದದಲ್ಲಿ ಎರಡು ಕೈ ಒಂದು ಕಾಲು ಕಳೆದುಕೊಂಡ ಜಿಲ್ಲೆಯ ಹೆಮ್ಮೆಯ ಯೋಧ.ಬಾಗಲಕೋಟೆ ಜಿಲ್ಲೆಯ ಹುಲಸಗೇರಿ ಗ್ರಾಮದ ಯೋಧ ರಂಗಪ್ಪ ಆಲೂರ್. ಇವರು ಕಾರ್ಗಿಲ್ ಯುದ್ದದಲ್ಲಿ ನಡೆದ ಘಟನಾವಳಿಗಳ ಬಗ್ಗೆ ಮನಬಿಚ್ಚಿ ಮಾತನಾಡಿ ಭಾಹುಕರಾದ್ರು.1993ರಲ್ಲಿ ಸೈನ್ಯಕ್ಕೆ ಸೇರಿದ ಇವರು ಗುಜರಾತ್,ಅಹಮದಾಬಾದ್ ಹಾಗೂ ಆಸ್ಸಾಂ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಬಳಿಕ 1999 ಮೇ 1 ರಂದು ಆಸ್ಸಾಂ ನಿಂದ ಜಮ್ಮುಕಾಶ್ಮೀರದ ಸಿಎಚ್ ಗ್ಲಿಸರ್ಗೆ ವರ್ಗಾವಣೆಗೊಂಡ್ರು. ಅದೇ ಮೇ 3 ರಂದು ಆರಂಭಗೊಂಡ ಕಾರ್ಗಿಲ್ ಯುದ್ದದಲ್ಲಿ ಭಾಗಿಯಾದ್ರು. ಇಂದು ಕಾರ್ಗಿಲ್ ವಿಜಯ ದಿವಸ ನೆನೆದು ಭಾವುಕರಾದ್ರು. ಅಂದು ರಣರಂಗದಲ್ಲಿ ನಮಗೆ ಬಂದಿದ್ದ ತಾಖತ್,ರಣೋತ್ಸಾಹ ಅಷ್ಟಿಷ್ಟಲ್ಲ.ಯುದ್ದದಲ್ಲಿ ನನ್ನ ಸಹಮಿತ್ರರು ಶತ್ರು ಪಾಕ್ ವಿರುದ್ದ ಎದೆಯೊಡ್ಡಿ ಹೊರಾಟ ನಡೆಸಿದ್ದೆವೆ ಹೊರತು ಪಾಕ್ ನ ಒಂದು ಗುಂಡು ನಮ್ಮ ಸೈನಿಕರ ಬೆನ್ನಿಗೆ ಬಿದ್ದಿಲ್ಲ.ಇದು ನಮ್ಮ ಸೈನ್ಯದ ತಾಖತ್ತು ಎಂದು ರಂಗಪ್ಪ ಆಲೂರ್.

ಲೆಲಡಾಕ್ ಮೇಘದೂತ್ ಆಪರೇಷನ್ ತಂಡದ ನಾಯಕತ್ವ ವಹಿಸಿಕೊಂಡ ನಮ್ಮ ವೀರ ಯೋಧ ರಂಗಪ್ಪ ಆಲೂರ್ ಅವರು ಪಾಕಿಗಳೆದುರು ಎದೆ ಉಬ್ಬಿಸಿ ಸೆಣಸಾಡಿದ್ರು.ಪಾಕ್ ಸೈನಿಕರಿಂದ ಬಂದ ವಿಜಾಯಿಲೆ ಬಾಂಬ್ ದಾಳಿಗೆ ತಮ್ಮ ಜೋತೆಗಿದ್ದ 7 ಜನ ವೀರಯೋಧರು ಸ್ಥಳದಲ್ಲಿ ಹುತಾತ್ಮರಾದ್ರು,ಯೋಧ ರಂಗಪ್ಪ ತನ್ನ ಎರಡು ಕೈ-ಒಂದು ಕಾಲು ಕಳೆದುಕೊಂಡು 48 ಗಂಟೆಗಳ ಕಾಲ ಹಿಮದಲ್ಲಿಯೇ ಮುಚ್ಚಿಹೋಗಿದ್ದ,ರೆಪ್ರೀ ಅವರು ಬಂದು ಹುತಾತ್ಮ ಯೋಧರ 7 ಮೃತ ದೇಹ ಗಳನ್ನ ರವಾನೆ ಮಾಡಿದ್ರು.ನಾನು ಸತ್ತಿದಿನಿ ಅಂತಾನೆ ಅಂದುಕೊಂಡಿದ್ರು, ತಾಯಿಯ ಆಶಿರ್ವಾದ ಬದುಕುಳಿದೆ.ನಂತರ 6 ತಿಂಗಳ ಕಾಲ ಪ್ರಜ್ಞಾಹೀನರಾಗಿ ದೇಹದ ಮೇಲೆ 28 ಆಪರೆಷನ್ ಮಾಡಿಸಿಕೊಂಡು ಬದುಕುಳಿದ ಯೋಧನ ಸನ್ನಿವೇಶ ಮೈನೆವರೆಳಿಸುತ್ತೆ..

ವೀರ ಯೋಧ ರಂಗಪ್ಪ ಆಲೂರ್ ಅವರ ಕೆಚ್ಚದೆಯ ಹೋರಾಟ ಯುವಕರಿಗೆ ಸ್ಪೂರ್ತಿ ನೀಡುತ್ತಿದ್ದು.ಕಾರ್ಗಿಲ್ ವಿಜಯದ ಸಂಕೇತ, ನಮ್ಮ ಜಿಲ್ಲೆಯ ಹೆಮ್ಮೆ.ಯುದ್ಧದಲ್ಲಿ ಹೋರಾಡಿ ಅಂಗಾಂಗ ಕಳೆದುಕೊಂಡ ರಂಗಪ್ಪ ಅವರು ಇಂದು ಕೂಡಾ ತಾಯಿ ರಕ್ಷಣೆಗೆ ಸದಾ ಸನ್ನದ್ದ ಅನ್ನೋ ಮಾತು ಜೇಳ್ತಿರೋದು ಯುವಕರಲ್ಲಿ ದೇಶಭಕ್ತಿಯನ್ನ ಹೊಡೆದೆಬ್ಬಿಸುತ್ತಿದೆ.ಯುವಕರಿಗೆ ರಂಗಪ್ಪ ಆಲೂರ್ ಅವರ ಕಾರ್ಗಿಲ್ ರೋಚಕ ಕ್ಷಣಗಳು ಮೈ ಮನ ನೆವರಳಿಸುತ್ತೆ.

ನಿಜಗುಣ ಮಠಪತಿ, ಪವರ್ ಟಿವಿ ಬಾಗಲಕೋಟೆ..

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments