ಹುಬ್ಬಳ್ಳಿ: ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳಲ್ಲಿ ಆಕ್ರೋಶ ಭುಗಿಲೆದ್ದಿದೆ.
ಶಿವಸೇನಾ ವಿರುದ್ದ ಸಿಡಿದೆದ್ದ ಕರವೇ ಯುವಸೇನಾ ಕಾರ್ಯಕರ್ತರು ಕರವೇ ಯುವಸೇನಾ ರಾಜ್ಯಾಧ್ಯಕ್ಷ ಹರೀಶ್ ನೇತೃತ್ವದಲ್ಲಿ ಬೆಳಗಾವಿ ಚಲೋ ರ್ಯಾಲಿಯನ್ನಯ ಹಮ್ಮಿಕೊಂಡಿದ್ದು, ಹುಬ್ಬಳ್ಳಿಯಿಂದ ರ್ಯಾಲಿ ಬೆಳಗಾವಿಗೆ ತೆರಳಿದರು.
ಗಡಿ ಖ್ಯಾತೆ ತೆಗೆದ ಉದ್ದವ ಠಾಕ್ರೆ ವಿರುದ್ಧ ಆಕ್ರೋಶಗೊಂಡ ಸಾವಿರಾರು ಕಾರ್ಯಕರ್ತರು ಬೆಳಗಾವಿಗೆ ಪ್ರಯಾಣ ಬೆಳೆಸಿದರು. ರ್ಯಾಲಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಕಾರ್ಯಕರ್ತರು ಭಾಗವಹಿಸಿದ್ದರು.