Saturday, May 28, 2022
Powertv Logo
Homeರಾಜ್ಯಹಿಂದೂ-ಮುಸ್ಲಿಂ ಭಾವಕ್ಯತೆಯ ಸಂಕೇತ ಈ ಕರಗ

ಹಿಂದೂ-ಮುಸ್ಲಿಂ ಭಾವಕ್ಯತೆಯ ಸಂಕೇತ ಈ ಕರಗ

ಬೆಂಗಳೂರಿನಲ್ಲಿ ದ್ರೌಪದಿ ದೇವಿ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಮಧ್ಯರಾತ್ರಿ 12:30ಕ್ಕೆ ದ್ರೌಪದಿ ದೇವಿಯ ಶಕ್ತ್ಯೋತ್ಸವಕ್ಕೆ ಚಾಲನೆ ಸಿಗಲಿದೆ‌. ಅದ್ದೂರಿ ಕರಗ ಮಹೋತ್ಸವ ಕಣ್ತುಂಬಿಕೊಳ್ಳಲು ಮಳೆ ಆತಂಕದ ನಡುವೆಯೇ ಲಕ್ಷಾಂತರ ಭಕ್ತಾದಿಗಳು ತಿಗಳರಪೇಟೆಗೆ ಆಗಮಿಸುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೋವಿಡ್​​ ಕಾರಣದಿಂದ ಕರಗ ಉತ್ಸವ ಅದ್ದೂರಿಯಾಗಿ ನಡೆದಿರಲಿಲ್ಲ. ಈ ಭಾರೀ ಯಾವುದೇ ಅಹಿತಕರ ಘಟನೆ ನಡೆಯದಂತೆ ಕರಗ ಉತ್ಸವಕ್ಕೆ ಹೆಚ್ಚಿನ ಪೊಲೀಸ್​​ರನ್ನ ನಿಯೋಜಿಸಲಾಗಿದೆ. ಕಳೆದ ಒಂದು ವಾರದಿಂದ ಧರ್ಮರಾಯಸ್ಬಾಮಿ ಹಾಗೂ ದ್ರೌಪದಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗ್ತಿದೆ. ಸುಮಾರು ಐದು ಲಕ್ಷ ರೂಪಾಯಿ ವೆಚ್ವದಲ್ಲಿ ಮಲ್ಲಿಗೆ ಹೋವಿನಿಂದ ವಿವಿಧ ರೀತಿಯಲ್ಲಿ ಕರಗಕ್ಕೆ ಅಲಂಕಾರ ಮಾಡಲಾಗ್ತಿದೆ. ಕರಗ ಮಹೋತ್ಸವಕ್ಕೆ ಮಳೆರಾಯ ಅಡ್ಡಿಯಾಗ್ತಿದ್ದು, ಭಕ್ತಾದಿಗಳ ಆಗಮನಕ್ಕೂ ತೊಂದರೆಯಾಗ್ತಿದೆ.

- Advertisment -

Most Popular

Recent Comments