ರೊಮ್ಯಾಂಟಿಕ್ ‘ಪೈಲ್ವಾನ್​’ ಎಂಟ್ರಿ..!

0
746

ಪೈಲ್ವಾನ್…’ ಥೀಮ್ ಹಾಡು ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಈ ಹಾಡಿನ ಬಳಿಕ ಸಿನಿಮಾದ ಎರಡನೇ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ.’ಪೈಲ್ವಾನ್’ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದೆ . ಸಿನಿಮಾದ ರೋಮ್ಯಾಟಿಂಕ್ ಸಾಂಗ್ ಇದಾಗಿದೆ. ಸದ್ಯ ರಿಲೀಸ್ ಆಗಿರುವ ‘ಕಣ್ಮಣಿಯೇ…’ಲಿರಿಕಲ್ ಹಾಡಿನಲ್ಲಿ ಕಿಚ್ಚ ಸುದೀಪ್ ಹಾಗೂ ಆಕಾಂಕ್ಷ ಸಿಂಗ್ ಸಖತ್ ರೊಮ್ಯಾಂಟಿಕ್ ಆಗಿ ಕಾಣುತಿದ್ದಾರೆ . ಈ ಹಾಡಿಗೆ ಕಂಪ್ಲೀಟ್ ಫಾರೆಸ್ಟ್ ಸೆಟ್ ಹಾಕಿದ್ದು ಹಾಡಿಗೆ ಮತ್ತಷ್ಟು ಸೊಬಗು ಹೆಚ್ಚಿಸಿದೆ ‘ ಈ ಹಾಡನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ನಾಗೇಂದ್ರ ಪ್ರಸಾದ ಅವರ ಸಾಹಿತ್ಯಕ್ಕೆ ಅದ್ಭುತವಾಗಿ ಹಾಡಿದ್ದಾರೆ ಕನ್ನಡದ ಸ್ಟಾರ್ ಯುವ ಗಾಯಕ ಸಂಚಿತ್ ಹೆಗಡೆ . ರಿಲೀಸ್ ಆಗಿರುವ ಈ ಹಾಡು ಪ್ರೇಮಿಗಳ ಹೃದಯದಲ್ಲಿ ಕಚಗುಳಿ ಇಡ್ತಾ ಇದೆ.

ಅಂದಹಾಗೆ ಕೃಷ್ಣ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಸುದೀಪ್ ಹಾಗೂ ಆಕಾಂಕ್ಷ ಸಿಂಗ್ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಆಗಸ್ಟ್​ 29ಕ್ಕೆ ಸಿನಿಮಾ ರಿಲೀಸ್ ಆಗಲಿದೆ. 

LEAVE A REPLY

Please enter your comment!
Please enter your name here