Home ಸಿನಿ ಪವರ್ ಬಾಲಿವುಡ್ ಆ ಮೂವರು ಸೇರಿ ಸುಶಾಂತ್​​ನನ್ನು ಕೊಂದಿದ್ದಾರೆ ಅಂದ ಕಂಗನಾ..!

ಆ ಮೂವರು ಸೇರಿ ಸುಶಾಂತ್​​ನನ್ನು ಕೊಂದಿದ್ದಾರೆ ಅಂದ ಕಂಗನಾ..!

ಮುಂಬೈ : ನಟ ಸುಶಾಂತ್​ ಸಿಂಗ್​ ರಜಪೂತ್​​​ ಸಾವಿಗೆ ಸಂಬಂಧಿಸಿದಂತೆ ನಾನಾ ರೀತಿಯ ಬಿಸಿಬಿ ಚರ್ಚೆಗಳು ನಡೆಯುತ್ತಿವೆ. ಸುಶಾಂತ್ ಸಾವಿನ ಬಳಿಕ ಬಾಲಿವುಡ್​ ಅಕ್ಷರಶಃ ಬೆತ್ತಲಾಗುತ್ತಿದೆ..! ಅಂತೆಯೇ ನಟಿ ಕಂಗನಾ ರಣಾವತ್​​ ಕೆಲವು ಫಿಲ್ಮ್​ ಮೇಕರ್​ಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈಗ ಹೆಸರಾಂತ ಮೂವರು ಫಿಲ್ಮ್​ ಮೇಕರ್​ಗಳು ಸುಶಾಂತ್ ಸಾವಿಗೆ ಕಾರಣ ಅಂತ ಬಹಿರಂಗವಾಗಿ ಆರೋಪ ಮಾಡಿದ್ದಾರೆ.

ಹೌದು, ಕರಣ್ ಜೋಹರ್​, ಆದಿತ್ಯ ಛೋಪ್ರಾ, ಮಹೇಶ್​​ ಭಟ್ ಸೇರಿ ಸುಶಾಂತ್​ನನ್ನು ಕೊಂದಿದ್ದಾರೆ. ಕೆಲವು ಪತ್ರಕರ್ತರು ಹಾಗೂ ಜನ ಕೂಡ ಮಾನಸಿಕವಾಗಿ ಕಿರುಕುಳ ನೀಡಿ ಸುಶಾಂತ್ ಸಾವಿಗೆ ಹೊಣೆಯಾಗಿದ್ದಾರೆಂದು ಕಂಗನಾ ಗಂಭೀರ ಆರೋಪ ಮಾಡಿದ್ದಾರೆ.

“ ಕರಣ್​​ ಜೋಹರ್​, ಆದಿತ್ಯ ಛೋಪ್ರಾ, ಮಹೇಶ್​​ ಭಟ್​, ರಾಜೀವ್​​ ಮಸಂದ್​, ರಕ್ತಹೀರುವ ರಣಹದ್ದುಗಳಂತಿರೋ ಮಾಧ್ಯಮ ಸುಶಾಂತ್​​ನನ್ನು ಬೆದರಿಸಿ, ಶೋಷಿಸಿ, ಕಿರುಕುಳ ನೀಡಿ ಕೊಂದಿವೆ’’ ಎಂದು ಕಿಡಿಕಾರಿದ್ದಾರೆ.  ಅಲ್ಲದೆ ಕರಣ್ ಜೋಹರ್ ತಾವು ದತ್ತುಪಡೆದಿರುವ ಮಕ್ಕಳ ಬಗ್ಗೆ ಬರೆದಿರುವ ಪುಸ್ತಕದ ಕುರಿತು ಕೂಡ ಕಂಗನಾ ಗರಂ ಆಗಿ ಟ್ವೀಟ್​ ಮಾಡಿದ್ದಾರೆ.

- Advertisment -

Most Popular

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್​ ವೀಕ್ಷಕರಾಗಿ ಬಂಗಾರೇಶ ಹಿರೇಮಠ ನೇಮಕ

ಬೆಂಗಳೂರು : ಬಾಗಲಕೋಟೆ ಜಿಲ್ಲಾ ಉಸ್ತುವಾರಿಯಾಗಿ ಕಾಂಗ್ರೆಸ್​ ವೀಕ್ಷಕರಾಗಿ ಬಂಗಾರೇಶ್ ಹಿರೇಮಠ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್​.ಎಂ.ರೇವಣ್ಣ, ಶಾಸಕ...

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

Recent Comments